Latestಕ್ರೈಂದೇಶ-ವಿದೇಶ

ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಸಾವು..! ತಂದೆ, ಮಗಳು, ಅಳಿಯನ ದುರಂತ ಅಂತ್ಯ..!

609
Pc Cr: Public Tv

ನ್ಯೂಸ್ ನಾಟೌಟ್ : ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಒಂದೇ ಕುಟುಂಬದ ಮೂವರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಪ್ರಹ್ಲಾದ್ ಮಂಡಲ್ (60), ಅವರ ಮಗಳು ತನು ವಿಶ್ವಾಸ್ (32) ಮತ್ತು ಅವರ ಅಳಿಯ ಕಾರ್ತಿಕ್ ವಿಶ್ವಾಸ್ (38) ಎಂದು ಗುರುತಿಸಲಾಗಿದೆ.

ಪ್ರಹ್ಲಾದ್ ಮಂಡಲ್ ಇತ್ತೀಚೆಗೆ 8 ಅಡಿ ಆಳದ ಹೊಸ ಶೌಚ ಗುಂಡಿ ನಿರ್ಮಿಸಿದ್ದರು. ಇದರ ಸ್ವಚ್ಛಗೊಳಿಸಲು ಮಗಳು, ಅಳಿಯನೊಂದಿಗೆ ಇಳಿದಿದ್ದರು. ಈ ವೇಳೆ ಪಕ್ಕದ ಹಳೆಯ ಶೌಚ ಗುಂಡಿಯಿಂದ ಅನಿಲ ಸೋರಿಕೆಯಾಗಿದೆ. ಇದರಿಂದ ಆಳದ ಶೌಚ ಗುಂಡಿಯಿಂದ ಹೊರಬರಲಾರದೆ ಒದ್ದಾಡಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನು ಹಾಗೂ ಕಾರ್ತಿಕ್ ಅವರ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ.

ಕೋತಿಗೆಂದು ಅಪ್ಪ ಎಸೆದ ಕೊಡಲಿ ಮಗನ ಕತ್ತು ಸೀಳಿದೆ..! ಮಗುವಿನ ಸಾವಿನ ಬಗ್ಗೆ ಸಂಬಂಧಿಕರಿಗೆ ಅನುಮಾನ..!

ಈ ಘಟನೆಗೂ ನಮಗೂ ಸಂಬಂಧವಿಲ್ಲ ಎಂದ ಐಪಿಎಲ್‌ ಅಧ್ಯಕ್ಷ ಅರುಣ್‌ ಧುಮಾಲ್..! ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದ ಬಗ್ಗೆ ಬಿಸಿಸಿಐ ಸ್ಪಷ್ಟನೆ..!

See also  ಜೈಲಿನಲ್ಲಿ ದರ್ಶನ್ ಗೆ ಬಿಂದಾಸ್ ಲೈಫ್, ರೌಡಿ ವಿಲ್ಸನ್ ಗಾರ್ಡನ್ ನಾಗನ ಜೊತೆ ಹರಟೆ..! ಕೈಯಲ್ಲಿ ಸಿಗರೇಟ್, ಕಾಫಿ ಮಗ್..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget