ರಾಜಕೀಯರಾಜ್ಯವೈರಲ್ ನ್ಯೂಸ್

ಮಾಜಿ ವಕ್ಫ್ ಸಚಿವೆಯ ಮಗನ ಆಸ್ತಿಗೂ ಈಗ ವಕ್ಫ್ ಕಂಟಕ..! ಬಿಜೆಪಿ ಶಾಸಕಿಯ ಕುಟುಂಬಕ್ಕೆ ಶಾಕ್..!

215

ನ್ಯೂಸ್ ನಾಟೌಟ್: ರೈತರ ಪಹಣಿಯಲ್ಲಿ ವಕ್ಫ್ (Waqf)​ ಆಸ್ತಿ ಎಂದು ನಮೂದಿಸಿದ್ದನ್ನು ವಿರೋಧಿಸಿ ರಾಜ್ಯ ಬಿಜೆಪಿ ನಾಯಕರು ಮತ್ತು ಹಲವು ರೈತರು ಪ್ರತಿಭಟಿಸುತ್ತಿದ್ದಾರೆ. ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದೆ.

ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ದಂಪತಿಯ ಕಿರಿಯ ಪುತ್ರ ಬಸವಪ್ರಭು ಜೊಲ್ಲೆಗೆ ಸೇರಿದ‌ 2 ಎಕರೆ‌ 13 ಗುಂಟೆ ಜಮೀನಿನ‌ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರ್ಪಡೆಯಾಗಿದೆ.

ಚಿಕ್ಕೋಡಿ ‌ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸರ್ವೆ ನಂಬರ್ 337ರಲ್ಲಿ ಬಸವಪ್ರಭು ಜೊಲ್ಲೆಗೆ ಸೇರಿದ 2 ಎಕರೆ 13 ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ಜೊಲ್ಲೆ ಕುಟುಂಬ ತಲ-ತಲಾಂತರಗಳಿಂದ ಉಳಿಮೆ‌ ಮಾಡುತ್ತಾ ಬಂದಿದೆ. ಆದರೆ, 2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್​ ಬೋರ್ಡ್​ ಸಚಿವರಾಗಿದ್ದ ಸಮಯದಲ್ಲೇ ತಮ್ಮ ಕಿರಿಯ ಪುತ್ರ ಬಸವಪ್ರಭು ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದಾಗಿದೆ ಎನ್ನಲಾಗಿದೆ. ವಕ್ಫ್ ಆಸ್ತಿ ಎಂದು ಉಲ್ಲೇಖಿತ ಪಹಣಿ ಪತ್ರ ನೋಡಿ ಬಸವಪ್ರಭು ಜೊಲ್ಲೆ ದಂಗಾಗಿದ್ದಾರೆ.

ಇನ್ನು, ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈವರೆಗೆ ವಕ್ಫ್ ಬೋರ್ಡ್‌‌ನಿಂದ ಬಸವಪ್ರಭುಗೆ ಯಾವುದೇ ನೋಟಿಸ್​ ಜಾರಿಯಾಗಿಲ್ಲ.
ಶಶಿಕಲಾ ಜೊಲ್ಲೆ ತಾವು ಸಚಿವೆಯಾಗಿದ್ದ ಸಮಯದಲ್ಲೇ ತಮ್ಮ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಆಗಿದ್ದು ವಿಪಾರ್ಯಾಸವಾಗಿದೆ. ಅಲ್ಲದೇ, ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಮಾಡಲಾಗಿದೆ.

ಶಾಸಕಿ ಶಶಿಕಲಾ ಜೊಲ್ಲೆ ಅವರು 2021 ರಿಂದ 2023ವರೆಗೂ ಬಿಜೆಪಿ ಸರ್ಕಾರದಲ್ಲಿ ಹಜ್​ ಮತ್ತು ವಕ್ಫ್​​ ಬೋರ್ಡ್​ ಸಚಿವರಾಗಿದ್ದರು. ಇವರ ಅವಧಿಯಲ್ಲಿ, ಅಂದರೆ 2021ರಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಜಮೀನು ಪಹಣಿಯ ಕಾಲಂ 11ರಲ್ಲಿ ವಕ್ಫ್ ಬೋರ್ಡ್​ ಅಂತ ಹೆಸರು ನಮೂದಾಗಿದೆ ಎಂದು ವರದಿ ತಿಳಿಸಿದೆ.

Click

https://newsnotout.com/2024/10/jai-hanuman-cinema-kannada-news-rishab-shetty-viral-news-d/
https://newsnotout.com/2024/10/kumbhamela-kannada-news-17-year-old-boy-nomore-kannada-news/
https://newsnotout.com/2024/10/kumbhamela-kannada-news-prayagraj-viral-news-d/
https://newsnotout.com/2024/10/goa-kannada-news-bengaluru-kannada-news-wine/
https://newsnotout.com/2024/10/darshan-kannada-news-bengaluru-viral-news-bail-d/
https://newsnotout.com/2024/10/china-and-india-military-withdawn-from-conflicted-boarder/
See also  ಧರ್ಮಸ್ಥಳ: ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು..! ರಿಕ್ಷಾದ ಸ್ಥಿತಿ ಕಂಡು ಕುಸಿದು ಬಿದ್ದ ಚಾಲಕ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget