ನ್ಯೂಸ್ ನಾಟೌಟ್: ವಕ್ಫ್ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಕೆಲ ಗಂಟೆಗಳ ಬೆನ್ನಲ್ಲೇ ಕೇರಳದ ಮುನಂಬಮ್ ನಲ್ಲಿ ವಕ್ಫ್ ಮಂಡಳಿ ಜೊತೆ ಭೂ ವಿವಾದದಲ್ಲಿ ಸಿಲುಕಿರುವ 50 ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೇರಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಮತ್ತು ಇತರ ಎನ್ ಡಿಎ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರಿದ್ದಾರೆ.
ತಮ್ಮ ಭೂಮಿ ಮೇಲಿನ ಹಕ್ಕು ಪಡೆಯುವವರೆಗೂ ಬಿಜೆಪಿ ನೇತೃತ್ವದ ಎನ್‌ಡಿಎ ನೆರವು ನೀಡಲಿದೆ ಎಂದು ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದವರಿಗೆ ಮುಖಂಡರು ಭರವಸೆ ನೀಡಿದ್ದಾರೆ.
ಕ್ಯಾಥೋಲಿಕ್ ಚರ್ಚ್‌ನ ಬೆಂಬಲದೊಂದಿಗೆ ಇಲ್ಲಿನ ನಿವಾಸಿಗಳು ಕಳೆದ 174 ದಿನಗಳಿಂದ ತಮ್ಮ ಆಸ್ತಿಗಳ ಮೇಲಿನ ಕಂದಾಯ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಭೂಮಿ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ ಎನ್ನಲಾಗುತ್ತಿದೆ.
ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರವು ಭೂಮಿಯ ಮೇಲಿನ ವಕ್ಫ್ ಮಂಡಳಿಯ ಹಕ್ಕುಗಳ ಇತ್ಯರ್ಥಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ತಮ್ಮ ನೋವ ತೋಡಿಕೊಳ್ಳಲು ಪ್ರಧಾನಿ ಜೊತೆ ನೇರ ಭೇಟಿಗೂ ಅವಕಾಶ ಕೊಡಿಸುವಂತೆ ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ.
ಕೊಡಗು: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣ..! ಶಾಸಕ ಪೊನ್ನಣ್ಣ ಮತ್ತು ಮಂಥರ್ ಗೌಡ ವಿರುದ್ಧ ದೂರು ದಾಖಲು..!