ಕ್ರೈಂ

ವಿವಾಹದ ‘ಅರಿಶಿನ’ ಕಾರ್ಯಕ್ರಮದ ದಿನವೇ ಭೀಕರ ದುರಂತ, ಗೋಡೆ ಕುಸಿದು ಮಹಿಳೆ,ಮಗು ಸೇರಿದಂತೆ 8 ಮಂದಿ ದಾರುಣ ಅಂತ್ಯ,ವಿಡಿಯೋ ವೀಕ್ಷಿಸಿ…

ನ್ಯೂಸ್ ನಾಟೌಟ್ :ಅಲ್ಲಿ ಅದ್ದೂರಿಯಾಗಿ ವಿವಾಹ ಪೂರ್ವ ಕಾರ್ಯಕ್ರಮ ನಡೆದಿತ್ತು.ನೂರಾರು ಮಂದಿ ಈ ಕಾರ್ಯಕ್ರಮಕ್ಕೆಂದು ಆಗಮಿಸಿದ್ದರು.ಎಲ್ಲರ ಮುಖದಲ್ಲೂ ಖುಷಿ ಚಿಮ್ಮುತ್ತಿತ್ತು. ಆದರೆ ಅದೇನಾಯ್ತೋ ಗೊತ್ತಿಲ್ಲ.ಇದಕ್ಕಿದ್ದಂತೆ ಗೋಡೆ ಕುಸಿದಿದೆ.ಇದೇ ಸ್ಥಳದಿಂದಾಗಿ ಮೆರವಣಿಗೆ ಮೂಲಕ ಸಾಗಿ ಬಂದ ಕೆಲವರು ಗೋಡೆಯಡಿಗೆ ಬಿದ್ದು 8 ಮಂದಿ ದಾರುಣ ಅಂತ್ಯ ಕಂಡಿದ್ದಾರೆ.16 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಹೌದು, ಈ ದುರಂತ ನಡೆದಿದ್ದು, ಲಕ್ನೋದ ಘೋಸಿ ಎಂಬ ಪ್ರದೇಶದಲ್ಲಿ.ಘಟನೆಯಿಂದಾಗಿ ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿ ಒಟ್ಟು 8 ಜನರು ಉಸಿರು ಚೆಲ್ಲಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರುಣ್ ಕುಮಾರ್ ಮಾತನಾಡಿ, ವಿವಾಹ ಪೂರ್ವ ‘ಹಲ್ದಿ’ ಕಾರ್ಯಕ್ರಮದ (haldi function) ವೇಳೆ ಇದ್ದಕ್ಕಿದ್ದಂತೆ 20 ಜನರ ಮೇಲೆ ಗೋಡೆ ಕುಸಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗೋಡೆ ಕುಸಿತದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ(viral Video).

ಹಠಾತ್ ಕುಸಿದಿರುವ ಗೋಡೆಯನ್ನು ಇತ್ತೀಚೆಗಷ್ಟೇ ನಿರ್ಮಾಣ ಮಾಡಲಾಗಿತ್ತು. ಈ ಗೋಡೆ ನಿರ್ಮಾಣ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಮತ್ತು ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅರುಣ್ ಕುಮಾರ್ ಅವರು ತಿಳಿಸಿದ್ದಾರೆ. ಶುಕ್ರವಾರ ವಿವಾಹ ಪೂರ್ವ ಕಾರ್ಯಕ್ರಮದ ವೇಳೆ ಪಕ್ಕದ ಗೋಡೆ ಕುಸಿದು ಬಿದ್ದಿದೆ ಎಂದು ಜಿಲ್ಲಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ. ಘಟನೆಯಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಕೊನೆಯುಸಿರೆಳೆದಿದ್ದು, 20 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಮತ್ತು ಎಲ್ಲಾ ಗಾಯಾಳುಗಳಿಗೆ 50,000 ರೂಪಾಯಿಗಳ ಪರಿಹಾರವನ್ನು ಘೋಷಿಸಿದ್ದಾರೆ ಮತ್ತು ಎಲ್ಲಾ ಗಾಯಾಳುಗಳಿಗೆ ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Related posts

ಬೆಂಗಳೂರಿನ ಪೊಲೀಸ್ ಠಾಣೆಯೊಳಗೆ ‘ಎಸ್‌ಐ’ಯಿಂದ ಮಹಿಳೆಗೆ ಲೈಂಗಿಕ ಕಿರುಕುಳ! ವೈರಲ್ ಆಯ್ತು ಆಕೆಯ ಟ್ವೀಟ್!

ಇಸ್ಲಾಂಗೆ ಮತಾಂತರವಾಗಲು ನಕಾರ;ಗರ್ಭಿಣಿಗೆ ವಿಷಕುಡಿಸಿ ಕೊಲೆ,ದುರಂತ ಅಂತ್ಯ ಕಂಡ ಹಿಂದೂ ಯುವತಿಯ ಜೀವನ

ಸುರತ್ಕಲ್ : ನನ್ನ ಜೊತೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ ಎಂದು ಮೆಸೇಜ್..! ಯುವಕ ಪೊಲೀಸ್ ವಶಕ್ಕೆ..!