ಕರಾವಳಿ

EVM APP ಮೂಲಕ ಮತದಾನ, ನೆಲ್ಯಾಡಿಯ ಶ್ರೀರಾಮ ವಿದ್ಯಾಲಯದಲ್ಲಿ ವಿಶಿಷ್ಟ ಪ್ರಯತ್ನ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಹಲವು ಶಾಲೆಗಳಲ್ಲಿ EVM APP ಮೂಲಕ ಮತದಾನ ನಡೆದು ಸುದ್ದಿಯಾಗಿತ್ತು. ಇದೀಗ ಆ ಶಾಲೆಗಳ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಶ್ರೀರಾಮ ವಿದ್ಯಾಲಯ ಕೂಡ ಸೇರಿಕೊಂಡಿದೆ.

ದಿನಾಂಕ 11.07.2023 ಮಂಗಳವಾರದಂದು ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ನಡೆಯಿತು. ಕಾರ್ಯಕ್ರಮವನ್ನು ಪುತ್ತೂರಿನ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಇಚ್ಲಂಪಾಡಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ ಪತ್ರವಿಲ್ಲದೆ ಆಧುನಿಕ ವಿಧಾನವಾದ evm app ಮೂಲಕ ಮತ ಚಲಾಯಿಸಿ ಶಾಲಾ ನಾಯಕರನ್ನು ಆಯ್ಕೆ ಮಾಡಿದರು ಶಾಲಾ ನಾಯಕನಾಗಿ ಚೇತನ್ ಮತ್ತು ಉಪನಾಯಕನಾಗಿ ಮದ್ವಿತ್ ಆಯ್ಕೆಯಾದರು.

ಆಯ್ಕೆಗೊಂಡ ವಿದ್ಯಾರ್ಥಿ ನಾಯಕರುಗಳಿಗೆ ಪ್ರಭು ಶ್ರೀರಾಮಚಂದ್ರನ ಹೆಸರಿನಲ್ಲಿ ಪ್ರತಿಜ್ಞೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಗಣೇಶ ವಾಗ್ಲೆ ಬೋಧಿಸಿದರು. ಆಡಳಿತ ಸಮಿತಿಯ ಸದಸ್ಯ ಬಾಲಕೃಷ್ಣ ಬಾಣಜಾಲು, ಆಡಳಿತ ಸಮಿತಿಯ ಕೋಶಾಧಿಕಾರಿಗಳಾದ ಜಿನ್ನಪ್ಪ ಪೂವಜೆ, ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದರು. ವಿನ್ಯಶ್ರೀ ಮಾತಾಜಿ ಸ್ವಾಗತಿಸಿದರು. ಕುಮಾರಿ ಯಶಸ್ವಿನಿ ಧನ್ಯವಾದ ಅರ್ಪಿಸಿದರು, ಅನಿಲ್ ಅಕ್ಕಪಾಡಿ ಕಾರ್ಯಕ್ರಮ ನಿರೂಪಿಸಿದರು. ಕೋಮಲಾಂಗಿ ಮಾತಾಜಿ ಕಾರ್ಯಕ್ರಮ ಸಂಘಟಿಸಿದರು.

Related posts

ಸಿಎಂ ಕುಳಿತಿದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ..! ವಿಧಾನಸೌಧ ಆವರಣದಲ್ಲೇ ಭದ್ರತಾ ವೈಫಲ್ಯ..! ಇಲ್ಲಿದೆ ವೈರಲ್ ವಿಡಿಯೋ

ಸುಳ್ಯ: ಫುಟ್‌ಪಾತ್‌ನಲ್ಲಿ ಸಿಕ್ಕಿದ ಮೊಬೈಲನ್ನು ವಾರಿಸುದಾರರಿಗೆ ತಲುಪಿಸಿದ ಅಂಗಡಿ ಮಾಲೀಕ..!, ಯುವಕನ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ

ಪೊಲೀಸ್ ಸಿಬ್ಬಂದಿ ನೇಣುಬಿಗಿದು ಆತ್ಮಹತ್ಯೆಗೆ ಶರಣು!,ಕಾರಣ ನಿಗೂಢ