ಕರಾವಳಿ

ಕಾಸರಗೋಡು: ಅಣಕು ಮತದಾನದ ವೇಳೆ EVM ನ ಯಾವ ಬಟನ್ ಒತ್ತಿದರೂ ಬಿಜೆಪಿಗೇ ಮತ..! LDF ಗಂಭೀರ ಆರೋಪ

180

ನ್ಯೂಸ್ ನಾಟೌಟ್: ಕಾಸರಗೋಡು ಜಿಲ್ಲೆಯಲ್ಲಿ ಅಣಕು ಮತದಾನದ ವೇಳೆ ಭಾರಿ ಎಡವಟ್ಟು ಸಂಭವಿಸಿದೆ ಎನ್ನಲಾಗಿದೆ. ಯಾವುದೇ ಬಟನ್ ಒತ್ತಿದರೂ ಬಿಜೆಪಿಗೇ ಮತ ಚಲಾವಣೆ ಆಗಿರುವ ಆರೋಪಗಳು ಕೇಳಿ ಬಂದಿದೆ. ಈ ಕುರಿತು ಚುನಾವಣೆ ಆಯೋಗಕ್ಕೆ ದೂರು ನೀಡಿರುವುದಾಗಿ ಸಿಪಿಎಂ ನೇತೃತ್ವದ ಎಲ್ ಡಿಎಫ್ ತಿಳಿಸಿದೆ. ಆದರೆ ಇದು ಸುಳ್ಳು ಆರೋಪ ಎಂದು ಸುಪ್ರಿಂ ಕೋರ್ಟ್ ಗೆ ಚುನಾವಣಾ ಆಯೋಗ ತಿಳಿಸಿದೆ ಎಂದು ವರದಿಯಾಗಿದೆ.

ಅಣಕು ಮತದಾನದ ವೇಳೆ ಎಲ್ಲ 190 ಇವಿಎಂಗಳಲ್ಲಿ ಪ್ರತೀ 10 ಆಯ್ಕೆಗಳನ್ನು ಒತ್ತುತ್ತ ಪರೀಕ್ಷಿಸಲಾಗುತ್ತಿತ್ತು.Sಬಿಜೆಪಿಯ ಕಮಲದ ಚಿಹ್ನೆಯು 10 ಆಯ್ಕೆಗಳ ಪೈಕಿ ಮೊದಲನೇ ಆಯ್ಕೆಯಾಗಿತ್ತು. ಸುಮಾರು 4 ಇವಿಎಂಗಳಲ್ಲಿ 10 ಆಯ್ಕೆಗಳನ್ನು ಪ್ರತೀ ಬಾರಿ ಒತ್ತಿದಾಗಲೂ ವಿವಿಪ್ಯಾಟ್ ನಲ್ಲಿ (ಮತ ದೃಢೀಕರಣ ಯಂತ್ರ) ಬಿಜೆಪಿಗೆ 2 ಮತಗಳು ಬರುತ್ತಿದ್ದವು. ಕಮಲದ ಚಿಹ್ನೆ ಒತ್ತದೆ ಬೇರೆ ಚಿಹ್ನೆಗಳನ್ನು ಒತ್ತಿದಾಗಲೂ ಈ ಯಂತ್ರಗಳಲ್ಲಿ ಮತಗಳು ಬಿಜೆಪಿಗೇ ಹೋಗುತ್ತಿದ್ದವು ಎಂದು ಯುಡಿಎಫ್ ಮತ್ತು ಎಲ್‌ಡಿಎಫ್ ಅಭ್ಯರ್ಥಿಗಳ ಏಜೆಂಟ್‌ಗಳು ಆರೋಪಿಸಿದ್ದಾರೆ. ಅಣಕು ಮತದಾನದ ವೇಳೆ ಬಳಸಲಾದ ಇವಿಎಂಗಳ ಪೈಕಿ 4ರಲ್ಲಿ ಬಿಜೆಪಿಗೆ ಹೆಚ್ಚುವರಿ ಮತ ಚಲಾವಣೆಯಾಗಿವೆ. ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಪಿಎಂ ನಾಯಕ ಕೆ.ಪಿ. ಸತೀಶಚಂದ್ರನ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಇವಿಎಂ-ವಿವಿಪ್ಯಾಟ್ ಸಂಪೂರ್ಣ ತಾಳೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್ ಕಾಸರಗೋಡಿನಲ್ಲಿ ನಡೆದಿದೆ ಎನ್ನಲಾದ ಘಟನೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ವರದಿ ನೀಡುವಂತೆ ಚುನಾವಣ ಆಯೋಗಕ್ಕೆ ಕೋರ್ಟ್‌ ಸೂಚಿಸಿತು. ಸ್ಪಷ್ಟನೆ ನೀಡಿದ ಆಯೋಗವು, ಈ ಆರೋಪ ಸುಳ್ಳು. ಈ ಪ್ರಕರಣವು ಸುಳ್ಳು ಮಾಹಿತಿಯಿಂದ ಕೂಡಿದೆ. ಜಿಲ್ಲಾ ಚುನಾವಣಾಧಿಕಾರಿ ಜತೆ ಚರ್ಚಿಸಲಾಗಿದ್ದು, ಈ ಕುರಿತು ವಿವರ ವರದಿಯನ್ನು ನ್ಯಾಯಾ ಲಯಕ್ಕೆ ಸಲ್ಲಿಸಲಾಗುವುದು ಎಂದಿತು.

See also  ಬಂಟ್ವಾಳ: ನೇತ್ರಾವತಿ ನದಿಯಲ್ಲಿ ತೇಲಿ ಬಂದ ಅಪರಿಚಿತ ಮಹಿಳೆಯ ಮೃತದೇಹ..! ಸುಮಾರು 15 ದಿನಗಳ ಹಿಂದೆ ಮೃತಪಟ್ಟಿರುವ ಶಂಕೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget