ಕರಾವಳಿಕೊಡಗುವೈರಲ್ ನ್ಯೂಸ್ಸುಳ್ಯ

ಕಲ್ಲುಗುಂಡಿ: ಬಿಸಿಲನ್ನೂ ಲೆಕ್ಕಿಸದೆ 15 ದಿನದ ನವಜಾತ ಶಿಶುವಿನೊಂದಿಗೆ ಬಂದು ಮತದಾನ ಮಾಡಿದ ಪತ್ರಕರ್ತೆ, ಸಿಸೇರಿಯನ್ ನೋವಿನಲ್ಲಿದ್ದರೂ ಬಾಣಂತಿಯ ಸೌಜನ್ಯಯುತ ನಡೆ..!

ನ್ಯೂಸ್ ನಾಟೌಟ್: ದೇಶದ ವಿವಿಧೆಡೆ ಲೋಕ ಸಭಾ ಚುನಾವಣೆಯ ಕಾವು ಹೆಚ್ಚಿದೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಮಧು ಮಗಳು ಮದುವೆಗೂ ಮೊದಲು ಓಟ್ ಹಾಕಿದ್ದು, ವರ ಓಟ್ ಮಾಡಿ ಮದುವೆ ಮಂಟಪದ ಕಡೆಗೆ ನಡೆದದ್ದು, ವ್ಯಕ್ತಿಯೊಬ್ಬರು ರಾಜನಂತೆ ವೇಷ ಧರಿಸಿ ಮತಗಟ್ಟೆಗೆ ಬಂದದ್ದು ಇದೆಲ್ಲವೂ ಇಂದಿನ ಗಮನ ಸೆಳೆದ ಹೈಲೈಟ್ಸ್ ಆಗಿದೆ.

ಈ ನಡುವೆ ಪತ್ರಕರ್ತೆಯೊಬ್ಬರು 15 ದಿನದ ಹಿಂದೆ ಜನಿಸಿದ ನವಜಾತ ಶಿಶುವಿನೊಂದಿಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ. ‘ನ್ಯೂಸ್ ನಾಟೌಟ್ ‘ ಡಿಜಿಟಲ್ ಮಾಧ್ಯಮ ಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ದಯಾಮಣಿ ಹೇಮಂತ್ ಅವರಿಗೆ ಏ.12 ಮಗು ಜನಿಸಿತ್ತು. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಅತೀವ ನೋವಿನಲ್ಲಿದ್ದರೂ ಮಗುವಿನೊಂದಿಗೆ ಬಂದು ಸೌಜನ್ಯಯುತ ನಡೆ ಪ್ರದರ್ಶಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಚರ್ಚ್ ಶಾಲೆಯಲ್ಲಿ ಅವರು ಮತದಾನ ಮಾಡಿದರು.

Related posts

ವೇದಾಮೃತ ಚಿಕಿತ್ಸಾಲಯದಲ್ಲಿ ಉಚಿತ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಶಿಬಿರ

ಪುತ್ತೂರಿನಲ್ಲಿ ಕಾಣಿಸಿಕೊಂಡ ಖತರ್ನಾಕ್ ಚಡ್ಡಿ ಗ್ಯಾಂಗ್ ..? ರಾತ್ರಿ ಮನೆಯಂಗಳಕ್ಕೆ ಬಂದು ತಲವಾರು ತೋರಿಸಿ ಹಣ, ಚಿನ್ನ ನೀಡುವಂತೆ ಬೆದರಿಕೆ

ಅಂಗನವಾಡಿಗೆ ನುಗ್ಗಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನ..! ಅಡುಗೆ ಸಹಾಯಕಿಯ ಗಂಡನಿಂದ ಕೃತ್ಯ..!