ನ್ಯೂಸ್ ನಾಟೌಟ್: ಯುಟ್ಯೂಬ್ ತೆರೆದರೆ ಸಾಕು ಇಲ್ಲಿ ನೂರಾರು ಕಂಟೆಂಟ್ ಕ್ರಿಯೇಟರ್ಸ್ ಗಳ ನಾನಾ ವಿಡಿಯೋ, ವ್ಲಾಗ್ಸ್ ಗಳು ಕಾಣ ಸಿಗುತ್ತವೆ. ಇತ್ತೀಚೆಗೆ ಪಾಕಿಸ್ತಾನದ ಯೂಟ್ಯೂಬರ್ ಒಬ್ಬಾಕೆಯ ವಿಡಿಯೋವನ್ನು ನೆಟ್ಟಿಗರು ಟೀಕಿಸಿದ್ದಾರೆ. ಪಾಕಿಸ್ತಾನದ ಯೂಟ್ಯೂಬರ್ ನೂರ್ ರಾಣಾ ಎಂಬಾಕೆಯ ವಿಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಆಕೆಯನ್ನು ಟೀಕಿಸಿದ್ದಾರೆ.
ಇತ್ತೀಚೆಗೆ ಆಕೆ ತನ್ನ ಮೃತ ತಂಗಿಯ ಸಮಾಧಿ ಇರುವ ಜಾಗಕ್ಕೆ ಭೇಟಿ ನೀಡಿರುವ ವಿಡಿಯೋ ಮಾಡಿದ್ದಾರೆ. 2015 ರಲ್ಲಿ ತನ್ನ ನೂರ್ ಅವರ ತಂಗಿ ನಿಧನ ಹೊಂದಿದ್ದಾರೆ. ಆಕೆ ನಿಧನ ಹೊಂದಿದ ದಿನದಂದು ನೂರು ಆಕೆಯ ಸಮಾಧಿ ಇರುವ ಜಾಗಕ್ಕೆ ಭೇಟಿ ನೀಡುತ್ತೇನೆ ಎಂದು ತನ್ನ ಯೂಟ್ಯೂಬ್ ವೀಕ್ಷಕರಿಗೆ ತಿಳಿಸಿದ್ದಳು. ಅದರಂತೆ ವ್ಲಾಗ್ ವಿಡಿಯೋವನ್ನು ಮಾಡಿದ್ದಾರೆ. 19 ನಿಮಿಷಗಳ ಅವಧಿಯ ಈ ವಿಡಿಯೋದಲ್ಲಿ ದಿನಚರಿಯನ್ನು ತೋರಿಸಿದ್ದಾರೆ.
ಸಮಾಧಿ ಇರುವ ಜಾಗಕ್ಕೆ ಹೋಗುವಾಗ ಹೂವುಗಳನ್ನು ಖರೀದಿಸಿ, ಆ ಬಳಿಕ ಕಾರಿನಲ್ಲಿ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಸಮಾಧಿಗೆ ಹೂವುಗಳನ್ನು ಹಾಕಿ, ಪ್ರಾರ್ಥನೆ ಸಲ್ಲಿಸಿ, ಭಾವನಾತ್ಮಕವಾಗಿ ಮಾತನಾಡಿ, ತಂಗಿಯನ್ನು ಸ್ಮರಿಸಿ ಕಣ್ಣೀರು ಹಾಕುವುದನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಕೊನೆಗೆ ಮನೆಗೆ ಬರುವುದನ್ನು ತೋರಿಸಲಾಗಿದೆ. ಆದರೆ ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ”ನಿಮ್ಮ ತಂಗಿಯ ಸಾವಿನ ಕುರಿತು ಈ ರೀತಿಯಾಗಿ ತೋರಿಸುವುದಕ್ಕೆ ನಿಮಗೆ ನಾಚಿಕೆ ಆಗಬೇಕು. ದೇವರು ನಮಗೆ ಹಣ ಸಂಪಾದಿಸಲು ಸಹಾಯ ಮಾಡು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ”ನಮ್ಮ ಸಮಾಜದಲ್ಲಿ ಈ ರೀತಿಯ ಜನರು ಇದ್ದಾರೆ ಎಂದು ನಂಬಲು ಸಾಧ್ಯವಿಲ್ಲ” ಎಂದು ವೀಕ್ಷಕರು ಆಕ್ರೋಶ ಹೊರಹಾಕಿದ್ದಾರೆ.