ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತ ದಲಿತ ಬಾಲಕಿ ಮೇಲೆ 4 ವರ್ಷದಿಂದ ನಿರಂತರ ಅತ್ಯಾಚಾರ, ಅತ್ಯಾಚಾರ ನಡಿತಿದ್ರೂ ಪೋಷಕರಿಗೆ ಗೊತ್ತೇ ಇಲ್ಲ..!

279

ನ್ಯೂಸ್ ನಾಟೌಟ್: ಅಪ್ರಾಪ್ತ ದಲಿತ ಬಾಲಕಿ ಮೇಲೆ ಕಳೆದ ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರ ನಡೆದಿರುವ ಘಟನೆ ವಿಟ್ಲದಿಂದ ವರದಿಯಾಗಿದೆ. ಜುಲೈ 27ರಂದು ರಾತ್ರಿ ಬಾಲಕಿ ಕಾಣೆಯಾದ ಬಳಿಕ ವಿಚಾರ ಬೆಳಕಿಗೆ ಬಂದಿದೆ.

ಜುಲೈ 27ರಂದು ರಾತ್ರಿ ಬಾಲಕಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಈ ವಿಚಾರದಿಂದ ಗಾಬರಿಗೊಂಡ ಮನೆಯವರು ಆಕೆಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಇಡೀ ರಾತ್ರಿ ಬಾಲಕಿ ಮನೆ ಬಂದಿಲ್ಲ ಎಂದು ಎಲ್ಲರು ಗಾಬರಿಗೊಂಡಿದ್ದರು. ಮರುದಿನ ಬಾಲಕಿ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿದ್ದಳು. ಕಮಲಾಕ್ಷ ಅನ್ನುವ ವ್ಯಕ್ತಿ ಹಿಂದಿನ ದಿನ ಅಲ್ಲಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ ಅನ್ನುವ ವಿವರವನ್ನು ಬಾಲಕಿ ನೀಡಿದ್ದಳು.

ಈ ಕುರಿತಂತೆ ಪೋಷಕರು ಮತ್ತಷ್ಟು ವಿಚಾರಿಸಿದಾಗ ಬಾಲಕಿ ಮೇಲೆ ಕಳೆದ ನಾಲ್ಕು ವರ್ಷಗಳಿಂದ ಬೇರೆ ಬೇರೆ ವ್ಯಕ್ತಿಗಳು ಅತ್ಯಾಚಾರ ನಡೆಸಿದ್ದಾರೆ ಅನ್ನುವ ವಿಚಾರ ಹೊರ ಬೀಳುತ್ತದೆ. ಈ ವಿಚಾರ ಮನೆಯವರಿಗೆ ಇದುವರೆಗೆ ಗೊತ್ತೇ ಇರಲಿಲ್ಲ ಎನ್ನಲಾಗಿದೆ. ಪೋಷಕರು ವಿಚಾರಿಸಿದಾಗ 2019 ರಲ್ಲಿ ಜಯಪ್ರಕಾಶ್ ಎಂಬಾತನಿಂದ ಅತ್ಯಾಚಾರ ಬೆಳಕಿಗೆ ಬಂದಿದೆ. ಮಾತ್ರವಲ್ಲ ಅದಾದ ಬಳಿಕ ಸುಕುಮಾರ್, ಅಕ್ಷಯ್, ರಾಜ ಎಂವ ವ್ಯಕ್ತಿಗಳು ಕೂಡ ಅತ್ಯಾಚಾರ ಮಾಡಿದರ ಬಗ್ಗೆ ಬಾಲಕಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಇದೀಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ ಎನ್ನಲಾಗಿದೆ. ಈ ಬಗೆಗಿನ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ಬೆಳ್ಳಾರೆ: ಕೆಪಿಎಸ್‌ ಶಾಲಾ ವಿದ್ಯಾರ್ಥಿಗಳ ಅಮೋಘ ಸಾಧನೆ,ಖೇಲೋ ಇಂಡಿಯಾಗೆ ಆಯ್ಕೆ; ಮೆರವಣಿಗೆಯೊಂದಿಗೆ ಕ್ರೀಡಾಧಿಕಾರಿ, ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget