ನ್ಯೂಸ್ ನಾಟೌಟ್: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಗಾರಿ ಅಡ್ಡೆಯ ಮೇಲೆ ಪೊಲೀಸರು ಜೂ.8ರಂದು ದಾಳಿ ನಡೆಸಿದ್ದಾರೆ.
ಸ್ಥಳಕ್ಕೆ ಪಿಎಸ್ಐ ಕೌಶಿಕ್ ಬಿ.ಸಿ ದಾಳಿ ನಡೆಸಿದಾಗ ಜುಗಾರಿ ಆಟದಲ್ಲಿ ತೊಡಗಿದ್ದವರು ಪತ್ತೆಯಾಗಿದ್ದಾರೆ. ಮಾತ್ರವಲ್ಲ ಸ್ಥಳದಲ್ಲಿ ಬೈಕ್ ಕೂಡ ಕಂಡು ಬಂದಿರುತ್ತದೆ.
ಪಿ ಎಸ್ ಐ ಕೌಶಿಕ್ ಬಿ ಸಿ ರವರು ಈ ಬಗ್ಗೆ ಕಾನೂನಾತ್ಮಕ ಕ್ರಮ ಜರುಗಿಸದೇ ಸದ್ರಿ ಬೈಕ್ ಮಾಲಕನಿಗೆ ಕರೆಮಾಡಿ ಠಾಣೆಗೆ ಬರಮಾಡಿಕೊಂಡಿರುತ್ತಾರೆ. ಬಳಿಕ ಬೈಕ್ ಮಾಲಿಕನಿಗೆ ಮೂರನೇ ವ್ಯಕ್ತಿಯ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟಿದ್ದಾರೆ. ಈ ಕುರಿತ ಸಂಭಾಷಣೆಯು ಸಾಮಾಜಿಕ ಜಾಲತಾಣದ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯ ಮೇಲೆ ದಿನಾಂಕ 12.05.2025 ರಂದು ಇಲಾಖಾ ಶಿಸ್ತು ಕ್ರಮ ಬಾಕಿಯಿರುವಂತೆ ಕರ್ತವ್ಯದಿಂದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದೆ.
ಸುಳ್ಯ: ಕುರುಂಜಿ ಭಾಗ್ ಬಳಿ ಯುವಕರ ಚಕಮಕಿ, ಇತ್ತಂಡಗಳಿಗೆ ಸುಮೋಟೋ ಬಿಸಿ