ನ್ಯೂಸ್ ನಾಟೌಟ್ : ಚಾಲಕನ ನಿಯಂತ್ರಣ ತಪ್ಪಿ ಬೋರ್‌ವೆಲ್ ಲಾರಿಯೊಂದು ರಸ್ತೆಯ ಹೊಂಡಕ್ಕೆ ಪಲ್ಟಿಯಾದ ಘಟನೆ ಇಂದು (ಮೇ ೨೫) ವಿಟ್ಲ ಪೆರುವಾಯಿ ಸಮೀಪದ ಮುಚ್ಚಿರ ಪದವು ಎಂಬಲ್ಲಿ ಸಂಭವಿಸಿದೆ .
ಬೋರ್ ವೆಲ್ ಲಾರಿಯು ವಿಟ್ಲದಿಂದ ಮಂಗಳೂರು ಕಡೆಗೆ ಚಲಿಸುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಹೊಂಡಕ್ಕೆ ಉರುಳಿದೆ. ವರದಿಯ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.