Latestಕ್ರೈಂವೈರಲ್ ನ್ಯೂಸ್

ವಿಟ್ಲ: ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಯ ಮನೆ ದರೋಡೆ ಪ್ರಕರಣದಲ್ಲಿ ಮಹತ್ತರ ಬೆಳವಣಿಗೆ..! ಕೇರಳದ ಪೊಲೀಸ್ ಅಧಿಕಾರಿ ಅರೆಸ್ಟ್..!

1.5k

ನ್ಯೂಸ್ ನಾಟೌಟ್: ವಿಟ್ಲದ ಕೊಳ್ನಾಡು ಗ್ರಾಮದ ನಾರ್ಶದಲ್ಲಿ ಉದ್ಯಮಿ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಎಂಬವರ ಮನೆಗೆ ನಕಲಿ ಈ.ಡಿ. ಅಧಿಕಾರಿಗಳ ಸೋಗಿನಲ್ಲಿ ಬಂದು ಲಕ್ಷಾಂತರ ರೂ. ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿ ಕೇರಳ ರಾಜ್ಯದ ಪೊಲೀಸ್ ಅಧಿಕಾರಿಯೊಬ್ಬನನ್ನು ವಿಟ್ಲ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕೇರಳದ ಕೊಡುಂಗಲ್ಲೂರು ಎಎಸ್ ಐ ಇರಿಂಗಾಲಕುಡ ನಿವಾಸಿ ಶಫೀರ್ ಬಾಬು(50) ಬಂಧಿತ ಆರೋಪಿ ಎನ್ನಲಾಗಿದೆ. ಈತನ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಜನವರಿ 3ರಂದು ರಾತ್ರಿ 8 ಗಂಟೆ ಸುಮಾರಿಗೆ ಉದ್ಯಮಿ ಎಂ.ಸುಲೈಮಾನ್ ಹಾಜಿಯವರ ಮನೆಗೆ ಈ.ಡಿ. ಹೆಸರಿನಲ್ಲಿ ತಮಿಳುನಾಡು ನೋಂದಾಯಿತ ಕಾರಿನಲ್ಲಿ ಆಗಮಿಸಿದ ಆರು ಮಂದಿಯ ತಂಡ ಮನೆಯನ್ನೆಲ್ಲ ಜಾಲಾಡಿತ್ತು. ಬಳಿಕ ಮನೆಯಲ್ಲಿದ್ದ 45 ಲಕ್ಷ ರೂ. ನಗದು, 3 ಮೊಬೈಲು ಪೋನ್ ಗಳೊಂದಿಗೆ ತಂಡ ಪರಾರಿಯಾಗಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಟ್ಲ ಠಾಣಾ ಪೊಲೀಸರು ಈಗಾಗಲೇ ಕೇರಳದ ಕೊಲ್ಲಂ ನಿವಾಸಿಗಳಾದ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಇದೀಗ ಪ್ರಕರಣದಲ್ಲಿ ಆರೋಪಿ ಎನ್ನಲಾದ ಕೇರಳದ ಕೊಡುಂಗಲ್ಲೂರು ಎಎಸ್ ಐ ಶಫೀರ್ ಬಾಬು(50)ನನ್ನು ಬಂಧಿಸಲಾಗಿದೆ.

Click 👇🏻

ಸಿಎಂ ಕಚೇರಿಯ ‘ಕಚೇರಿ ಟಿಪ್ಪಣಿ’ ನಕಲು ಪ್ರಕರಣ..! ಹಲವಾರು ಎಂ.ಎಲ್‌.ಎಗಳ ಬಳಿ ಪಿಎ ಆಗಿದ್ದವ ಅರೆಸ್ಟ್..!

ರೈಲು ನಿಲ್ದಾಣದಲ್ಲಿ ಕಾಲ್ತುಳಿತಕ್ಕೆ ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು..! ಮೋದಿ ಸಂತಾಪ

ಅಮೆರಿಕದಿಂದ ಭಾರತೀಯರ 2 ಹಂತದ ಗಡಿಪಾರು..! ಅಮೃತಸರದಲ್ಲಿ ಬಂದಿಳಿದ 119 ಮಂದಿ..!

ನಾಣ್ಯಗಳಿಂದ ಕಾರನ್ನು ಅಲಂಕರಿಸಿದ ರಾಜಸ್ತಾನಿ ವ್ಯಕ್ತಿ..! ವಿಡಿಯೋ ವೈರಲ್

ನಟ ದರ್ಶನ್ ಹುಟ್ಟುಹಬ್ಬದ ದಿನವೇ ಅಭಿಮಾನಿಗಳು ಹಾಕಿದ್ದ ಬ್ಯಾನರ್ ಕಿತ್ತೆಸೆದ ಪುರಸಭೆ ಸಿಬ್ಬಂದಿ..! ಇಲ್ಲಿದೆ ಕಾರಣ

ಕುಂಭಮೇಳದಲ್ಲಿ ಸನ್ಯಾಸಿ ವೇಷ ತೊಟ್ಟು ತಲೆ ಮರೆಸಿಕೊಂಡಿದ್ದ ಆರೋಪಿ..! ಆತನನ್ನು ಹಿಡಿಯಲು ಸನ್ಯಾಸಿಗಳಾದ ಪೊಲೀಸರು..!

See also  ಆ ಮರದಡಿ ನಿಂತ್ರೆ ಸಾಕು ಜೀವಕ್ಕೆ ಗ್ಯಾರಂಟಿಯೇ ಇಲ್ಲ! ವಿಶ್ವದ ಅಪಾಯಕಾರಿ ಮರ ಎಂಬ ಗಿನ್ನಿಸ್ ದಾಖಲೆಗೆ ಸೇರಿದ ಆ ವೃಕ್ಷ ಯಾವುದು? ಆ ಮರ ಇರುವುದಾದರೂ ಎಲ್ಲಿ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget