ಕ್ರೈಂ

ವಿಟ್ಲ: ದ್ವಿಚಕ್ರ ವಾಹನಕ್ಕೆ ಗುದ್ದಿ ಆಟೋ ರಿಕ್ಷಾಗೂ ಅಪ್ಪಳಿಸಿದ ರಿಕ್ಷಾ..!, ಸವಾರನಿಗೆ ಗಂಭೀರ ಗಾಯ

124

ನ್ಯೂಸ್ ನಾಟೌಟ್ : ವಿಟ್ಲದಲ್ಲಿ ದ್ವಿಚಕ್ರ ವಾಹನ ಮತ್ತು ಆಟೋ ರಿಕ್ಷಾ ನಡುವೆ ಮುಖಾಮುಖಿ ಅಪಘಾತವಾದ ಘಟನೆ ಇದೀಗ (ಜ.25) ಸಂಭವಿಸಿದೆ. ವಿಟ್ಲ – ಸಾಲೆತ್ತೂರು ಮಾರ್ಗದ ಸಮೀಪವಿರುವ ವಿಟ್ಲದ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಮುಂಭಾಗದ ರಸ್ತೆಯಲ್ಲಿ ಅಪಘಾತವಾಗಿದೆ.

ದ್ವಿಚಕ್ರ ವಾಹನ ಸಾಲೆತ್ತೂರು ಕಡೆಯಿಂದ ವಿಟ್ಲದತ್ತ ಸಂಚರಿಸುತ್ತಿತ್ತು. ರಿಕ್ಷಾ ವಿಟ್ಲದಿಂದ ಕುಡ್ತಮುಗೇರು ಕಡೆಗೆ ಸಂಚರಿಸುತ್ತಿತ್ತು. ಘಟನೆಯಲ್ಲಿ ದ್ವಿಚಕ್ರ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ರಿಕ್ಷಾ ಚಾಲಕನಿಗೂ ಗಾಯಗಳಾಗಿದೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ಚಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ರಿಕ್ಷಾ ಮತ್ತೊಂದು ರಿಕ್ಷಾಗೂ ಗುದ್ದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿದ್ದಾರೆ.

See also  ಪುತ್ತೂರು: ಚೇತನಾ ಆಸ್ಪತ್ರೆ ನರ್ಸ್ ಎಡವಟ್ಟು, ನವಜಾತ ಶಿಶು ಸಾವು
  Ad Widget   Ad Widget     Ad Widget   Ad Widget   Ad Widget   Ad Widget