ನ್ಯೂಸ್ ನಾಟೌಟ್ : ಇಬ್ಬರು ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿ ಕಾಣಿಸಿಕೊಂಡ ಘಟನೆ ವಿಟ್ಲ ಸಮೀಪದ ಪೆರುವಾಯಿಯಲ್ಲಿ ನಡೆದಿದೆ. ಬಸ್ ಸ್ಟ್ಯಾಂಡ್ ಬಳಿ ಸಲುಗೆಯಿಂದ ವರ್ತಿಸುತ್ತಿರುವುದನ್ನು ಕಂಡು ಸಾರ್ವಜನಿಕರು ವಿಚಾರಿಸಿ, ಪೊಲೀಸರಿಗೊಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂವರು ಕೂಡ ಕೇರಳ ಮೂಲದವರು ಎನ್ನಲಾಗಿದೆ.ಕುದ್ದುಪದವು ಬಸ್‌ಸ್ಟ್ಯಾಂಡ್‌ನಲ್ಲಿ ಇದೇ ರೀತಿ ವರ್ತನೆ ಮಾಡಿಕೊಂಡಿದ್ದ ಈ ಮೂವರು ಬಸ್ಸಿನಲ್ಲಿ ಬಂದು ಪೆರುವಾಯಿ ಜಂಕ್ಷನ್‌ನಲ್ಲಿ ಬಂದು ಇಳಿದಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ಪೆರುವಾಯಿ ಬಸ್ ಸ್ಟ್ಯಾಂಡ್‌ನಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಈ ಜೋಡಿಯನ್ನು ಸಾರ್ವಜನಿಕರು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಮೂವರು ಕೇರಳ ಮೂಲದವರು ಹಾಗೂ ವಿದ್ಯಾರ್ಥಿಗಳೆಂಬ ಮಾಹಿತಿ ಲಭಿಸಿದೆ.
ವಿಚಾರ ತಿಳಿದ ವಿಟ್ಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.