ಕ್ರೀಡೆ/ಸಿನಿಮಾದೇಶ-ಪ್ರಪಂಚವೈರಲ್ ನ್ಯೂಸ್ಸಿನಿಮಾ

ಸಾಹಸ ಸಿಂಹನ 74ನೇ ಜನ್ಮದಿನದ ಸವಿನೆನಪು, ಅನ್ನದಾನ, ರಕ್ತದಾನಗಳ ಮೂಲಕ ವಿಷ್ಣುವರ್ಧನ್‌ ರನ್ನು ಸ್ಮರಿಸಿದ ಅಭಿಮಾನಿಗಳು

ನ್ಯೂಸ್‌ ನಾಟೌಟ್‌: ಖ್ಯಾತ ಮೇರು ನಟ, ಕನ್ನಡ ಚಿತ್ರರಂಗದ ‘ಸಾಹಸ ಸಿಂಹ’ ದಿವಂಗತ ವಿಷ್ಣುವರ್ಧನ್ ಅವರ 74ನೇ ಜನ್ಮದಿನವನ್ನು ಇಂದು (ಸೆ.18) ಅವರ ಅಭಿಮಾನಿಗಳು ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಆಚರಿಸುತ್ತಿದ್ದಾರೆ.

ಅನ್ನದಾನ, ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಷ್ಣುದಾದಾ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸುತ್ತಿದ್ದಾರೆ.
ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರನ್ನು ಅಭಿಮಾನಿಗಳ ಪ್ರೀತಿಯಿಂದ ವಿಷ್ಣುದಾದಾ ಎಂದೇ ಕರೆಯುತ್ತಾರೆ. 200 ಸಿನಿಮಾಗಳಲ್ಲಿ ನಟಿಸಿರುವ ವಿಷ್ಣು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಸೆಪ್ಟೆಂಬರ್ 18, 1950ರಲ್ಲಿ ಮೈಸೂರಿನಲ್ಲಿ ಜನಿಸಿದ ಸಂಪತ್‌ಕುಮಾರ್ ಹೆಸರಿನ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಮೇರು ಪ್ರತಿಭೆ. ಅಷ್ಟೇ ಅಲ್ಲದೇ ಅವರು ಕನ್ನಡದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದರು.ಆಗಿನ ಕಾಲದಲ್ಲೇ ಅವರು ಹಲವು ಬೇರೆ ಭಾರತೀಯ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. 2009 ಡಿಸೆಂಬರ್ 30ರಂದು ವಿಷ್ಣುವರ್ಧನ್ ಅವರು ಇಹಲೋಕ ತ್ಯಜಿಸಿದರು.

Click

https://newsnotout.com/2024/09/ganesha-chaturti-kannada-news-nagamangala-3-students/
https://newsnotout.com/2024/09/jammu-and-kashmir-kannada-news-viral-news-vidghana-sabha-election/
https://newsnotout.com/2024/09/students-teachers-in-morarji-desai-school-girls-issue-police/

Related posts

ಮಹಿಳೆಯನ್ನು ಅಪ್ಪಿಕೊಳ್ಳುವುದು, ಸ್ಪರ್ಶಿಸುವುದು ಅಪರಾಧವಲ್ಲ ಎಂದ ಬ್ರಿಜ್ ಭೂಷಣ್‌! ಟೀ ಶರ್ಟ್‌ ಎಳೆದು ಎದೆ ಮೇಲೆ ಕೈ ಹಾಕಿದ್ದಎಂದು ದೂರಿದ್ದ ಮಹಿಳಾ ಕುಸ್ತಿಪಟುಗಳು! ಬಿಜೆಪಿ ಸಂಸದನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತೇ ಕೋರ್ಟ್?

ಮೊಬೈಲ್‌ ಕರೆ ಮಾಡುವಂತೆ ಮಹಿಳೆಗೆ ಟಾರ್ಚರ್‌, ಆಕ್ರೋಶಗೊಂಡ ಪತಿಯಿಂದ ಡಿಶ್‌ ರಿಪೇರಿ ಬಶೀರನಿಗೆ ಹಿಗ್ಗಾಮುಗ್ಗ ಥಳಿತ.. ಇಲ್ಲಿ ನೋಡಿ ವಿಡಿಯೋ

ಮಹಿಳೆಯ ಭೀಕರ ಕೊಲೆ ಮಾಡಿ ತುಂಡುಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಆರೋಪಿ ಆತ್ಮಹತ್ಯೆ..! ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!