ಕ್ರೈಂವಿಡಿಯೋವೈರಲ್ ನ್ಯೂಸ್

ವೀಸಾ ಕೇಂದ್ರದ ಟಿವಿಯಲ್ಲಿ ಅಶ್ಲೀಲ ಸಿನಿಮಾ ಪ್ರದರ್ಶನ..! ಮುಂದೇನಾಯ್ತು..? ಇಲ್ಲಿದೆ ವೈರಲ್ ವಿಡಿಯೋ

275

ನ್ಯೂಸ್ ನಾಟೌಟ್ : ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೊ (Adult Video) ಪ್ರಸಾರವಾಗಿ ಅಲ್ಲಿದ್ದ ಜನ ಮುಜುಗರಕ್ಕೊಳಗಾದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿರುವ ಇಂಗ್ಲೆಂಡ್‌ ವೀಸಾ ಕಚೇರಿಯ ಇಂದು(ನ.27) ರಂದು ನಡೆದಿದೆ.

ಗೆರ್ರಿ ಎಂಬಲ್ಲಿನ ವೀಸಾ ಕೇಂದ್ರದಲ್ಲಿ ಈ ಮುಜುಗರದ ಘಟನೆ ನಡೆದಿದೆ. ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿ ನೋಡುತ್ತಿರುವಂತೆಯೇ ಈ ದೃಶ್ಯ ಪ್ರಸಾರವಾಗಿದೆ. ಸ್ವಲ್ಪ ಹೊತ್ತಿನಲ್ಲಿ ಕಚೇರಿಯ ಸಿಬ್ಬಂದಿ ಟಿವಿ ಸ್ವಿಚ್‌ ಆಫ್‌ ಮಾಡಿದ್ದಾರೆ ಎನ್ನಲಾಗಿದೆ. ಕರಾಚಿಯ ವೀಸಾ ಕಚೇರಿಗೆ ಆಗಮಿಸಿದ್ದ ಜನರಿಗೆ ಅನುಕೂಲವಾಗಲೆಂದು ಕಾರ್ಯವಿಧಾನವನ್ನು ಟಿವಿಯಲ್ಲಿ ಪ್ರದರ್ಶಿಸಲಾಗುತ್ತದೆ.

ಅದರಂತೆ ದೃಶ್ಯ ಪ್ರಸಾರವಾಗುತ್ತಿತ್ತು. ಈ ವಿಡಿಯೊವನ್ನು ಹೈಲೈಟ್‌ ಮಾಡಲು ಕೆಮೆರಾ ಜೂಮ್ ಮಾಡಲಾಗಿದೆ. ಆಗ ಇದ್ದಕ್ಕಿದ್ದಂತೆ ದೊಡ್ಡ ಸ್ಕ್ರೀನ್‌ ಮೇಲೆ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ. ಇದನ್ನು ನೋಡುತ್ತಿದ್ದಂತೆ ಅಲ್ಲಿದ್ದವರು ಒಂದು ಕ್ಷಣ ಶಾಕ್‌ಗೆ ಆಗಿದ್ದಾರೆ.

ಈ ದೃಶ್ಯ ಕೆಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ಹರಿದಾಡಿದೆ. ಇದೇ ರೀತಿಯ ಘಟನೆ ಈ ಹಿಂದೆ ಭಾರತದಲ್ಲೂ ನಡೆದಿತ್ತು. ವರ್ಷಾರಂಭದಲ್ಲಿ ಬಿಹಾರದ ಪಾಟ್ನಾ ರೈಲ್ವೆ ಸ್ಟೇಶನ್​​ನ 10ನೇ ಪ್ಲಾಟ್​ಫಾರ್ಮ್​​ನಲ್ಲಿ ಮೂರು ನಿಮಿಷಗಳ ಕಾಲ ಅಶ್ಲೀಲ ಚಿತ್ರ ಪ್ರದರ್ಶನವಾಗಿತ್ತು.

See also  ನೃತ್ಯ ಮಾಡುತ್ತಲೇ ವೇದಿಕೆಯಲ್ಲೇ ಕುಸಿದು ಬಿದ್ದು ಮೃತ ಪಟ್ಟ ವ್ಯಕ್ತಿ..! ಇಲ್ಲಿದೆ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget