Latestಕ್ರೀಡೆಕ್ರೀಡೆ/ಸಿನಿಮಾಕ್ರೈಂ

ಕೊಹ್ಲಿ ಪೋಸ್ಟರ್ ​ಗೆ ಮೇಕೆ ಕಡಿದು ರಕ್ತಾಭಿಷೇಕ..! ಅಂಧಾಭಿಮಾನಿಗಳ ವಿರುದ್ಧ ದೂರು ದಾಖಲು

456

ನ್ಯೂಸ್ ನಾಟೌಟ್: ಮೊನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಜಯಭೇರಿ ಬಾರಿಸಿತ್ತು. ಕೇವಲ 2 ರನ್ ​ಗಳಿಂದ ಗೆಲುವು ಸಾಧಿಸಿತ್ತು. ಇದೇ ಖುಷಿಯಲ್ಲಿದ್ದ ಆರ್ ​ಸಿಬಿ ಅಭಿಮಾನಿಗಳು ಯಡವಟ್ಟು ಮಾಡಿಕೊಂಡಿದ್ದಾರೆ.

ಸಿಎಸ್ ​ಕೆ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲುತ್ತಿದ್ದಂತೆ ಕೊಹ್ಲಿ ಬ್ಯಾನರ್ ಮುಂದೆ ಅಭಿಮಾನಿಗಳು, ಮೇಕೆ ಬಲಿಕೊಟ್ಟು ಸಂಭ್ರಮಿಸಿದ್ದಾರೆ. ಆದರೆ, ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್ ​ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್ ​ಗೆ ರಕ್ತಾಭಿಷೇಕ ಮಾಡಿದ್ದಾರೆ. ಇದೇ ದೃಶ್ಯವನ್ನು ತಮ್ಮ ಫೋನ್ ​ನಲ್ಲಿ ರೆಕಾರ್ಡ್ ಮಾಡಿಕೊಂಡು call-me-143-kalki ಹೆಸರಿನ ಇನ್ ​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ.

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ಮೂವರು ಯುವಕರಾದ ಸಣ್ಣ ಪಾಲಯ್ಯ, ಜಯ್ಯಣ್ಣ, ತಿಪ್ಪೇಸ್ವಾಮಿ ವಿರುದ್ದ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಹಾರ್ನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಭದ್ರತಾ ಸಿಬ್ಬಂದಿಯ ಮೇಲೆ ಕಾರು ಹತ್ತಿಸಿದ ಚಾಲಕ..! ವಿಡಿಯೋ ವೈರಲ್

See also  ಮಡಿಕೇರಿ: ಆತ್ಮಹತ್ಯೆಗೆ ಶರಣಾದ 7ನೇ ತರಗತಿ ವಿದ್ಯಾರ್ಥಿನಿ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget