ದೇಶ-ಪ್ರಪಂಚ

ಅಬ್ಬಬ್ಬಾ..!ಕೊಹ್ಲಿ ಕುಡಿಯುವ ನೀರಿಗೆ ಬರೋಬ್ಬರಿ ೮ ಲಕ್ಷ ಖರ್ಚು ಮಾಡ್ತಾರಂತೆ..!!ಹಾಗಾದರೆ ಅವರು ಕುಡಿಯೋ ನೀರು ಮಾಮೂಲಿ ನೀರಿಗಿಂತ ಎಷ್ಟು ಡಿಫರೆಂಟ್‌? ಅದೆಂಥಾ ನೀರು?

ನ್ಯೂಸ್‌ ನಾಟೌಟ್‌ : ಪ್ರತಿಯೊಬ್ಬ ಆಟಗಾರ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲೇ ಬೇಕಾಗುತ್ತದೆ. ಅಂತೆಯೇ ಸೆಲೆಬ್ರಿಟಿಗಳ ಜೀವನ ಶೈಲಿ ಹಾಗೂ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ತಿಳಿದು ಕೊಳ್ಳಲು ಜನ ಹೆಚ್ಚು ಆಸಕ್ತಿ ವಹಿಸುತ್ತಾರೆ.ಅದರಲ್ಲೂ ವಿರಾಟ್‌ ಕೊಹ್ಲಿ ಅಂದ್ರೆ ಅವರು ನಿಜ ಜೀವನದಲ್ಲಿಯೂ ಕಿಂಗ್ ರೀತಿಯೇ ಬದುಕುತ್ತಾರೆ. ಕೊಹ್ಲಿ ಅವರದ್ದು ಬಹಳ ಸ್ಟೈಲಿಶ್ ಬದುಕು. ಆರೋಗ್ಯದ ವಿಚಾರದಲ್ಲಿ ಅವರದ್ದು ರಫ್ ಅಂಡ್ ಟಫ್ ನಿಲುವು. ಯಾವುದೇ ಕಾರಣಕ್ಕೂ ನಿಯಮ ಮೀರಿ ನಡೆಯುವುದೇ ಇಲ್ಲ.

ಇವರು ಎಲ್ಲಿಯೇ ಹೋದರೂ ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು, ಯಾವ ಪಾನೀಯ ಕುಡಿಯಬೇಕು ಎಲ್ಲವೂ ಪೂರ್ವ ನಿರ್ಧರಿತವಾಗಿರುತ್ತೆ.ಅದರಲ್ಲೂ ವಿರಾಟ್ ಕೊಹ್ಲಿ ಕುಡಿಯುವ ನೀರು ಕೂಡಾ ಬಹಳ ವಿಶೇಷವಾದದ್ದು.ಅಂದ ಹಾಗೆ ವಿರಾಟ್ ಕುಡಿಯುವ ನೀರಿಗೆ ಪ್ರತಿ ಲೀಟರ್ ಗೆ 700 ರೂಪಾಯಿಯಂತೆ. ಅಂದರೆ ಕೊಹ್ಲಿ ವರ್ಷಕ್ಕೆ ಸುಮಾರು 8 ಲಕ್ಷವನ್ನು ನೀರಿನ ಮೇಲೆ ಹರಿಸುತ್ತಾರೆ ಅಂದ್ರೆ ನೀವು ನಂಬಲೇ ಬೇಕು.

ಹಾಗಾದರೆ ವಿರಾಟ್‌ ಕೊಹ್ಲಿಯವರು ಕುಡಿಯುವ ನೀರಿನ ವಿಶೇಷತೆಗಳೇನು?ಅವರು ಕುಡಿಯೋ ನೀರಿನಲ್ಲಿ ಅಂಥದ್ದೇನಿದೆ ಎನ್ನುವ ಕುತೂಹಲ ಕಾಡದೇ ಇರದು. ಹೌದು ಇದು ಸಾಮಾನ್ಯ ನೀರಲ್ಲ. ಇದೊಂದು ವಿಶೇಷ ಬ್ರಾಂಡ್ ನ ನೀರು. ವಿರಾಟ್ ಕೊಹ್ಲಿ ಫ್ರಾನ್ಸ್‌ನಿಂದ ಬರುವ ಇವಿಯನ್ ನ್ಯಾಚುರಲ್ ಮಿನರಲ್ ವಾಟರ್ ಅನ್ನು ಕುಡಿಯುತ್ತಾರೆ. ವಿರಾಟ್ ಕೊಹ್ಲಿ ಎಲ್ಲಿಗೆ ಹೋಗಬೇಕಾದರೂ ಈ ನೀರನ್ನು ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತಾರಂತೆ.ಈ ನೀರನ್ನು ಎವಿಯನ್-ಲೆಸ್-ಬೈನ್ಸ್ ಪ್ರದೇಶದಿಂದ ತೆಗೆದುಕೊಳ್ಳಲಾಗಿದೆ.

ಅಂದ ಹಾಗೆ ಇದನ್ನು ರಾಸಾಯನಿಕವಾಗಿ ಸಂಸ್ಕರಿಸಲಾಗುವುದಿಲ್ಲ.ಇವಿಯನ್ ನೀರು ಜಗತ್ತಿನಾದ್ಯಂತ ಅತ್ಯಂತ ಖನಿಜಯುಕ್ತ ನೀರಿನಲ್ಲಿ ಒಂದಾಗಿದೆ.ಅದರ ನೈಸರ್ಗಿಕ ಗುಣಲಕ್ಷಣಗಳನ್ನು 100% ಉಳಿಸಿಕೊಂಡಿರುತ್ತದೆ. ಇದರಲ್ಲಿ ಕ್ಯಾಲ್ಸಿಯಂ, ಕ್ಲೋರೈಡ್, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸೋಡಿಯಂ ಅಂಶವು ಸಾಮಾನ್ಯ ನೀರಿಗಿಂತ ಉತ್ತಮ ಪ್ರಮಾಣದಲ್ಲಿರುತ್ತದೆ.

ಕೃತಕ ಮತ್ತು ಸಂಸ್ಕರಿಸಿದ ನೀರಿನಿಂದ ತುಂಬಿರುವ ಜಗತ್ತಿನಲ್ಲಿ, ಇವಿಯನ್‌ನಷ್ಟು ಶುದ್ಧವಾದ ನೀರು ಅಪರೂಪ. ಈ ಕಾರಣಕಾಗಿಯೇ ಇವಿಯನ್ ವಾಟರ್ ತುಂಬಾ ದುಬಾರಿ. ಕೊಹ್ಲಿ, ಫಿಟ್‌ನೆಸ್ ಫ್ರೀಕ್ ಆಗಿದ್ದು,  ಈ ನೈಸರ್ಗಿಕ ನೀರಿಗೆ ಆದ್ಯತೆ ನೀಡುತ್ತಾರೆ.ಹೆಚ್ಚುವರಿಯಾಗಿ, ಎವಿಯನ್ ಬಾಟಲಿಗಳನ್ನು ತಯಾರಿಸಲು ಪ್ಲಾಸ್ಟಿಕ್ ಬದಲಿಗೆ ಪಾಲಿಥಿಲೀನ್ ಟೆರೆಫ್ತಾಲೇಟ್ ಅನ್ನು ಬಳಸಲಾಗುತ್ತದೆ. ಇದು  ಜಗತ್ತಿನಾದ್ಯಂತ ಮರುಬಳಕೆ ಮಾಡಬಹುದಾದ ಬಾಟಲಿಯಾಗಿದೆ. Evian ನೀರಿನ ಬಾಟಲಿ ದುಬಾರಿಯಾಗಲು ಇದು ಕೂಡಾ ಒಂದು ಕಾರಣ.   

Related posts

ಜ.1 ರಿಂದ ಹಲವು ಬಳಕೆದಾರರ ಗೂಗಲ್ ಪೇ, ಫೋನ್ ಖಾತೆಗಳನ್ನು ನಿಷ್ಕ್ರೀಯಗೊಳಿಸಲಿದೆಯಾ ಸರ್ಕಾರ? ಸ್ಥಗಿತಗೊಂಡ ಸಿಮ್‌ ಸಂಖ್ಯೆಯನ್ನು ಎಷ್ಟು ದಿನಗಳ ಬಳಿಕ ಇನ್ನೊಬ್ಬರಿಗೆ ನೀಡಲಾಗುತ್ತದೆ ಗೊತ್ತಾ..?

ಮಾಟ-ಮಂತ್ರ ಮಾಡಿದ್ದಾಳೆ ಎಂದು ನೆರೆಹೊರೆಯವರು ಸೇರಿ 77 ವರ್ಷದ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿ ಹಲ್ಲೆ..! ಆಕೆಯ ಕೈ – ಕಾಲುಗಳ ಮೇಲೆ ಬಿಸಿ ಕಬ್ಬಿಣದ ಸರಳಿನಿಂದ ಥಳಿತ..!

ಹಲ್ಲುಜ್ಜುತ್ತಾ ಟೂತ್ ಬ್ರಶ್‌ನ್ನೇ ನುಂಗಿ ಒದ್ದಾಡಿದ ವ್ಯಕ್ತಿ,ವೈದ್ಯರು ಶಸ್ತ್ರ ಚಿಕಿತ್ಸೆಯಿಲ್ಲದೇ ಹೊಟ್ಟೆಯಿಂದ ಹೊರತೆಗೆದಿದ್ದು ಹೇಗೆ ಗೊತ್ತಾ?