ಕ್ರೀಡೆ/ಸಿನಿಮಾ

‘ಕ್ರಿಕೆಟ್ ದೇವರು’ ಸಚಿನ್ ದಾಖಲೆ ಮುರಿದ ಕೊಹ್ಲಿ..!​20 ವರ್ಷಗಳ ಹಿಂದಿನ ರೆಕಾರ್ಡ್​ ಬ್ರೇಕ್ ಮಾಡಿದ ವಿರಾಟ್

ನ್ಯೂಸ್ ನಾಟೌಟ್ : ಇಂದು ನಡೆಯುತ್ತಿರುವ ಟೀಮ್​ ಇಂಡಿಯಾ ಹಾಗೂ ನ್ಯೂಜಿಲೆಂಡ್​ ನಡುವಿನ ಪಂದ್ಯ ಕೇವಲ ಸೆಮಿಫೈನಲ್​ ಪಂದ್ಯವಾಗಿ ಮಾತ್ರ ಉಳಿದಿಲ್ಲ. ಇದು ಸೇಡಿನ ಸಮರವಾಗಿ ಬದಲಾಗಿದೆ. ರಣಾಂಗಣದಲ್ಲಿ ಬ್ಯಾಟ್​ & ಬೌಲ್​ ಅನ್ನೋ ವೆಪನ್​ ಹಿಡಿದು ಯುದ್ಧ ಗೆಲ್ಲುವ ಉತ್ಸಾಹ ಟೀಮ್​ ಇಂಡಿಯಾದ್ದಾಗಿದೆ.ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ವಾಂಖೆಡೆ ಸ್ಟೇಡಿಯಮ್​ನಲ್ಲಿ ಸೆಮಿಫೈನಲ್ ಪಂದ್ಯ ನಡೆಯುತ್ತಿದ್ದು,ರೋಚಕ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ.ಈ ಮಧ್ಯೆ ವಿರಾಟ್ ಕೊಹ್ಲಿ ಬ್ಯಾಟಿಂಗ್​ನಲ್ಲಿ ವಿರಾಟರೂಪ ತೋರುತ್ತಿದ್ದು, ಕ್ರಿಕೆಟ್ ದೇವರ 20 ವರ್ಷಗಳ ಹಿಂದಿನ ದಾಖಲೆಯನ್ನೇ ಮುರಿದಿದ್ದಾರೆ.

ವಿರಾಟ್ ಕೊಹ್ಲಿ ಅವರು ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಗಳಿಸುವ ಮೂಲಕ ಅವರು ಈ ದಾಖಲೆ ಮುರಿದಿದ್ದಾರೆ. ಸಚಿನ್ ತೆಂಡೂಲ್ಕರ್ 2003ರ ಏಕದಿನ ವಿಶ್ವಕಪ್​ನಲ್ಲಿ 673 ರನ್ ಗಳಿಸಿದ್ದರು. ಆದರೆ ಇದೀಗ ವಿರಾಟ್​ ಕೊಹ್ಲಿ 674 ರನ್​ಗಳನ್ನು ಗಳಿಸಿ ಇನ್ನೂ ಅಜೇಯರಾಗಿ ಆಟ ಮುಂದುವರಿಸಿರುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.ಇದರ ಮಧ್ಯೆ ಒಂದೇ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹತ್ತು ಇನ್ನಿಂಗ್ಸ್​ನಲ್ಲಿ ಒಟ್ಟು 8 ಸಲ ಅರ್ಧ ಶತಕ ಬಾರಿಸುವ ಮೂಲಕ ಈ ದಾಖಲೆ ಮಾಡಿರುವ ಪ್ರಥಮ ಆಟಗಾರ ಎಂಬ ಖ್ಯಾತಿಗೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.ಸದ್ಯ 92 ರನ್ ಮಾಡಿರುವ ವಿರಾಟ್ ಕೊಹ್ಲಿ, ಸಚಿನ್ ಅವರ ಇನ್ನೊಂದು ದಾಖಲೆಯನ್ನೂ ಮುರಿಯುವುದು ನಿಚ್ಚಳವಾಗಿದೆ.

Related posts

ಏನಿದು ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟ..? ಕಿಚ್ಚ ಸುದೀಪ್ ಬೆಂಬಲ ಸೂಚಿಸಿದ್ದೇಕೆ..?

ಖ್ಯಾತ ನಟಿ ಜಯಪ್ರದಾ ನಾಪತ್ತೆಯಾದ್ರಾ..? ಯುಪಿ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಹುಡುಕಾಟ ನಡೆಸುತ್ತಿರುವುದೇಕೆ? ರಾಜಕೀಯ ಪ್ರವೇಶಿಸಿದ್ದ ಈ ನಟಿಗೇನಾಯ್ತು?

‘ಕೆಜಿಎಫ್ ತಾತಾ’ ನಟ ಕೃಷ್ಣ.ಜಿ.ರಾವ್ ಇನ್ನಿಲ್ಲ