ಕ್ರೀಡೆ/ಸಿನಿಮಾವೈರಲ್ ನ್ಯೂಸ್

ವಿರಾಟ್ ಕೊಹ್ಲಿ ‘ಒಂದೇ’ ಎಸೆತದಲ್ಲಿ ’14 ರನ್’​ ಬಾರಿಸಿದ್ದು ಹೇಗೆ..? ಏಕದಿನ ವಿಶ್ವಕಪ್ ಕ್ರಿಕೆಟ್‌ ನಲ್ಲಿ ಹೀಗೊಂದು ವಿಶೇಷ ದಾಖಲೆ..!

257

ನ್ಯೂಸ್ ನಾಟೌಟ್: ಕಿಂಗ್ ವಿರಾಟ್ ಕೊಹ್ಲಿ ಜಗತ್ತಿನ ಸರ್ವಶ್ರೇಷ್ಠ ಕ್ರಿಕೆಟಿಗ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಹ್ಲಿ ಕ್ರೀಸ್ ಗೆ ಇಳಿದರೆಂದರೆ ಅಲ್ಲೊಂದು ದಾಖಲೆ ಆಗುತ್ತದೆ ಅನ್ನುವ ನಿರೀಕ್ಷೆ ಅಭಿಮಾನಿಗಳದ್ದು, ಈ ಹಿಂದೆಯೂ ಹಲವು ದಾಖಲೆಗಳಿಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆಯನ್ನು ಬರೆದು ಸುದ್ದಿಯಾಗಿದ್ದಾರೆ. ಅದು ಅಂತಿಂಥ ದಾಖಲೆಯಲ್ಲ. ಒಂದೇ ಎಸೆತಕ್ಕೆ 14 ರನ್​ ಬಾರಿಸಿದ ವಿಶೇಷ ದಾಖಲೆ.

ಹೌದು, ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ (icc world cup 2023) ಕ್ರಿಕೆಟ್ ಕೂಟದ ಗುರುವಾರ ನಡೆದ ಬಾಂಗ್ಲಾದೇಶ (India vs Bangladesh) ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ(Virat Kohli) ಅವರು ಒಂದೇ ಎಸೆತದಲ್ಲಿ 14 ರನ್​ ಚಚ್ಚಿ ಗಮನ ಸೆಳೆದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಾಂಗ್ಲಾದ ಯುವ ಬೌಲರ್ ಹಸನ್ ಮಹಮೂದ್ ಅವರು ಎಸೆತ 13ನೇ ಓವರ್​ನ ನಾಲ್ಕನೇ ಎಸೆತದಲ್ಲಿ ರೋಹಿತ್ ಶರ್ಮಾ ಔಟಾದರು. ಈ ವೇಳೆ ಬ್ಯಾಟಿಂಗ್​ ನಡೆಸಲು ಬಂದ ಕೊಹ್ಲಿ 5ನೇ ಎಸೆತದಲ್ಲಿ 2 ರನ್​ ಕಸಿದರು. ಆದರೆ ಇದು ನೋ ಬಾಲ್ ಆಗಿತ್ತು. ಫ್ರೀ ಹಿಟ್​ನಲ್ಲಿ ಕೊಹ್ಲಿ ಬೌಂಡರಿ ಬಾರಿಸಿದರು. ಅಚ್ಚರಿ ಎಂದರೆ ಫ್ರೀ ಹಿಟ್​ ಕೂಡ ನೋ ಬಾಲ್​ ಆಯಿತು. ಮತ್ತೆ ಕೊಹ್ಲಿಗೆ ಫ್ರೀ ಹಿಟ್​ ದೊರಕಿತು. ಇದನ್ನು ಸಿಕ್ಸರ್​ಗೆ ಅಟ್ಟಿದ ಕೊಹ್ಲಿ ಒಂದೇ ಎಸೆತದಲ್ಲಿ 14 ರನ್​ ಬಾರಿಸಿ ಮೆರೆದರು.

ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿದ ವಿರಾಟ್​ ಅವರು 97 ಎಸೆತಗಳಿಂದ 6 ಬೌಂಡರಿ ಮತ್ತು 4 ಸಿಕ್ಸರ್​ ನೆರವಿನಿಂದ ಅಜೇಯ 103 ರನ್​ ಬಾರಿಸಿದರು. ಗೆಲುವಿಗೆ ಮೂರು ರನ್​ ಬೇಕಿದ್ದಾಗ ಕೊಹ್ಲಿ ಸಿಕ್ಸರ್​ ಬಾರಿಸಿ ತಂಡಕ್ಕೆ ಗೆಲುವಿನ ಜತೆಗೆ ತಮ್ಮ ಶತಕವನ್ನೂ ಪೂರ್ತಿಗೊಳಿಸಿದರು.

ಈ ಮೂಲಕ ಏಕದಿನ ಕ್ರಿಕೆಟ್​ ಬದುಕಿನಲ್ಲಿ 48ನೇ ಶತಕ ಬಾರಿಸಿದರು. ವಿಶ್ವಕಪ್​ನಲ್ಲಿ ವಿರಾಟ್​ ಕೊಹ್ಲಿ ಅವರು ಬಾರಿಸಿದ ಮೂರನೇ ಶತಕ ಇದಾಗಿದೆ. ಸಾರಸ್ಯವೆಂದರೆ ಎರಡು ಶತಕ ಬಾಂಗ್ಲಾ ವಿರುದ್ಧವೇ ದಾಖಲಾಗಿದೆ. 2011ರ ವಿಶ್ವಕಪ್​ನಲ್ಲಿ ಕೊಹ್ಲಿ ಬಾಂಗ್ಲಾ ವಿರುದ್ಧ ಶತಕ ಸಿಡಿಸಿದ್ದರು.

See also  ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸರೇ ಕಳ್ಳರನ್ನು ಬಿಟ್ಟರಾ..?11 ಪೊಲೀಸರು ಅಮಾನತ್ತಾದ ರೋಚಕ ಸ್ಟೋರಿ ಇಲ್ಲಿದೆ, ವಿಡಿಯೋ ನೋಡಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget