ವಿಡಿಯೋವೈರಲ್ ನ್ಯೂಸ್

ಮಳೆ ನೀರು ತಾಗದಂತೆ ತಂಗಿಯನ್ನು ಕಾಪಾಡಿದ ಸಹೋದರ! ಮಕ್ಕಳ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್ !

222

ನ್ಯೂಸ್ ನಾಟೌಟ್ : ಸಹೋದರ ಮತ್ತು ಸಹೋದರಿಯ ನಡುವಿನ ಶುದ್ಧ ಬಾಂಧವ್ಯವನ್ನು ಚಿತ್ರಿಸುವ ವೀಡಿಯೊವೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಈ ಮುದ್ದಾದ ವಿಡಿಯೋ ೧೬.೮ ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದಿದೆ.

ವೈರಲ್ ಆಗಿರುವ ವಿಡಿಯೋವನ್ನು ಸಿಸಿಟಿವಿ ಈಡಿಯಟ್ಸ್ ಎಂಬ ಪೇಜ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, 12 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಮಳೆ ಬರುತ್ತಿದ್ದರಿಂದ ಬಾಲಕನೊಬ್ಬ ತನ್ನ ತಂಗಿಯನ್ನು ಒದ್ದೆಯಾಗದಂತೆ ತಾನು ತೊಟ್ಟಿದ್ದ ಅಂಗಿಯೊಳಗೆ ಸೇರಿಸಿಕೊಂಡು ಎತ್ತಿಕೊಂಡು ಬಂದು ಕಾರಿನೊಳಗೆ ಕೂರಿಸುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.

ಹಲವರು ನಾನಾ ಬಗೆಯ ಶೀರ್ಷಿಕೆಗಳೊಂದಿಗೆ ಆ ವಿಡಿಯೋವನ್ನು ಹಂಚಿಕೊಂಡಿದ್ದು, ಅಣ್ಣ-ತಂಗಿಯರ ಬಾಂಧವ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

See also  ಒಡಿಶಾ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ? ಅದಾನಿ ಟ್ವೀಟ್ ನಲ್ಲಿರುವ ಅಸಲಿಯತ್ತೇನು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget