ದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಸ್ವತಃ ವರನೇ ಮದುವೆಯ ಪೌರೋಹಿತ್ಯ ನಿರ್ವಹಿಸಿದ್ದೇಕೆ..? ಇಲ್ಲಿದೆ ವೈರಲ್‌ ವಿಡಿಯೋ

ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಮದುವೆಗಳಲ್ಲಿ ನಡೆಯುವ ಪೂಜೆ, ವಿಧಿ ವಿಧಾನಗಳನ್ನು ಪುರೋಹಿತರೇ ನಡೆಸಿಕೊಡುತ್ತಾರೆ. ಇಲ್ಲೊಂದು ವಿಶಿಷ್ಟ ಮದುವೆಯೊಂದು ನಡೆದಿದ್ದು, ಸ್ವತಃ ವರನೇ ತನ್ನ ಮದುವೆಯ ಪೌರೋಹಿತ್ಯವನ್ನು ವಹಿಸಿಕೊಂಡಿದ್ದಾನೆ.

ವರ ತಾನೇ ಮಂತ್ರಘೋಷಗಳನ್ನು ಪಠಿಸುತ್ತಾ, ತನ್ನ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾನೆ. ಈ ವಿಶೇಷ ಮದುವೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಹರಿದ್ವಾರದ ಕುಂಜಾ ಬಹದ್ದೂರ್‌ ಪುರ ಎಂಬಲ್ಲಿ ಇತ್ತೀಚಿಗೆ ಈ ಮದುವೆ ನಡೆದಿದ್ದು, ವರನು ತನ್ನ ಮದುವೆಯ ಪೌರೋಹಿತ್ಯವನ್ನು ತಾನೇ ವಹಿಸಿಕೊಂಡಿದ್ದನು. ವಧುವಿನೊಂದಿಗೆ ಅಗ್ನಿ ಕುಂಡದ ಮುಂದೆ ಕುಳಿತ ವರ, ಸ್ವತಃ ತಾನೇ ಮಂತ್ರ ಘೋಷಗಳನ್ನು ಪಠಿಸುತ್ತಾ ಮದುವೆಯ ಶಾಸ್ತ್ರಗಳನ್ನು ನೆರವೇರಿಸಿದ್ದಾನೆ.

ಮೊದಲಿನಿಂದಲೂ ಧಾರ್ಮಿಕ ಸಮಾರಂಭ, ಪೂಜೆಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದ ವರ ವಿವೇಕ್‌ ತನ್ನ ಮದುವೆಯ ಶಾಸ್ತ್ರವನ್ನು ತಾನೇ ನೆರವೇರಿಸಿದ್ದಾನೆ.ಜನವರಿ 25 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದ್ದು, ವರನ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Click

https://newsnotout.com/2025/01/kannada-news-actress-shashikala-serial-kannada-news-fir/
https://newsnotout.com/2025/01/monkey-kannada-news-10-student-nomore-d/
https://newsnotout.com/2025/01/microfinance-issue-women-nomore-in-mysore-siddaramaiha/

Related posts

ವಿಮಾನದಲ್ಲಿ ನೀರು ಕುಡಿದು ಅಸ್ವಸ್ಥರಾದ್ರಾ ಮಯಾಂಕ್‌ ಅಗರ್ವಾಲ್‌..? ಕ್ರಿಕೆಟಿಗ ಆಸ್ಪತ್ರೆಗೆ ದಾಖಲು

ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಕೈದಿಗೆ ಹೃದಯಾಘಾತ..! ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತ್ಯು..!

ಮದುವೆ ಮೆರವಣಿಗೆಯ ವೇಳೆ ಸಿಡಿಸಿದ ಪಟಾಕಿ ಕಾರನ್ನೇ ಸುಟ್ಟಿತು..! ಇಲ್ಲಿದೆ ವೈರಲ್ ವಿಡಿಯೋ