ಕರಾವಳಿವಿಡಿಯೋವೈರಲ್ ನ್ಯೂಸ್

ನಡೆದುಕೊಂಡು ಹೋಗುತ್ತಿದ್ದ ವೇಳೆ ಹೃದಯಾಘಾತ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಯುವಕರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿರುವ ಘಟನೆ ಉತ್ತರಪ್ರದೇಶದ ಲಖೀಂಪುರ್‌ ಖೇರಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸುಮಿತ್‌ ಮೌರ್ಯ (22ವರ್ಷ) ಎಂಬ ಯುವಕ ಕೈಯಲ್ಲೊಂದು ಬ್ಯಾಗ್‌ ಹಿಡಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ದಿಢೀರನೆ ರಸ್ತೆ ಮೇಲೆ ಪ್ರಜ್ಞೆತಪ್ಪಿ ಬಿದ್ದಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಅಲ್ಲದೇ ಯುವಕ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಕಾರೊಂದು ಬರುತ್ತಿದ್ದು, ಆತ ಕುಸಿದು ಬಿದ್ದ ವೇಳೆ ಕಾರು ಆತನ ತಲೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಕಿರಿದಾದ ಮತ್ತು ಜನಸಂದಣಿಯ ದಾರಿಯಲ್ಲಿ ಕೆಂಪು ಬಣ್ಣದ ಎಸ್‌ ಯುವಿ ಕಾರು ಬರುತ್ತಿದ್ದ ವೇಳೆ ಸುಮಿತ್‌ ದಿಢೀರನೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದಾನೆ. ಈ ವೇಳೆ ಎಸ್‌ ಯುವಿ ಮುಂಭಾಗ ಸುಮಿತ್‌ ತಲೆಗೆ ಹೊಡೆದ ಪರಿಣಾಮ ಗಾಯವಾಗಿತ್ತು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

Related posts

ಪ್ರಧಾನಿ ಮೋದಿಯನ್ನು “ದಿ ಬಾಸ್” ಎಂದ ಆಸ್ಟ್ರೇಲಿಯಾ ಪ್ರಧಾನಿ..! ಆಸ್ಟ್ರೇಲಿಯಾ ಪ್ರಧಾನಿ ಅಮೇರಿಕಾದ ಗಾಯಕನನ್ನು ಮೋದಿಗೆ ಹೋಲಿಸಿದ್ದೇಕೆ?

ಸುಳ್ಯ ವಿಧಾನಸಭಾ ಕ್ಷೇತ್ರದ ಗಡಿಯಲ್ಲಿ 6 ಚೆಕ್‌ ಪೋಸ್ಟ್ ಸ್ಥಾಪನೆ! ದಕ್ಷಿಣ ಕನ್ನಡ- ಕೊಡಗು ಗಡಿಗಳಲ್ಲೂ ತಪಾಸಣೆ ಜೋರು!

ಕಾರು ಮತ್ತು ಬಸ್ ನಡುವೆ ಅಪಘಾತ, ಪವಾಡಸದೃಶ ರೀತಿಯಲ್ಲಿ ಪಾರಾದ ಕಾರು ಚಾಲಕ..!