ಕರಾವಳಿಕೊಡಗುನಮ್ಮ ತುಳುವೇರ್ಪುತ್ತೂರುವೈರಲ್ ನ್ಯೂಸ್ಸುಳ್ಯ

70 ಕಿ.ಮೀ ಕಾರಿನಲ್ಲಿ ಸಂಚರಿಸಿದರೂ ಮರಳಿ ವಾಸ ಸ್ಥಳ ತಲುಪಿದ ನಾಯಿ!

dog-lover-accident-puttur-viral-video

385

ನ್ಯೂಸ್ ನಾಟೌಟ್: ಇತ್ತೀಚಿಗಷ್ಟೇ ಕಾರಿನ ಬಂಪರ್‌ನಲ್ಲಿ ಸಿಲುಕಿ 70 ಕಿ.ಮೀ. ಸಂಚರಿಸಿದ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆದರೆ ವಾಸ ಸ್ಥಳ ಬಿಟ್ಟು ಸಂಚರಿಸಿದ ನಾಯಿ ಎಲ್ಲಿ ಹೋಗಿ ಸೇರಿತು? ಅದರ ಮರಿಗಳ ಪಾಡೇನು? ಈಗ ಎಲ್ಲಿದೆ ಇಂಥದೊಂದು ಭಾವನಾತ್ಮಕ ಸಂಬಂಧದ ಕುತೂಹಲಕಾರಿ ಸಂಗತಿ ಈ ಸ್ಟೋರಿಯಲ್ಲಿದೆ.

ಕಪ್ಪು ಬಣ್ಣದ ನಾಯಿ ಬಳ್ಪ ಅರಣ್ಯ ವಲಯದ ಉಪ ವಲಯದ ಅರಣ್ಯಾಧಿಕಾರಿ ಸಂತೋಷ್ ರೈ ಅವರ ಮನೆಗೆ ಬರುತ್ತಿತ್ತು. ಅಧಿಕಾರಿಯ ಪುತ್ರಿ ಪ್ರತಿ ದಿನ ನಾಯಿಗೆ ತಿಂಡಿ ಹಾಕುತ್ತಿದ್ದಳು. ಇದರಿಂದ ಅಲ್ಲೇ ಬೀಡುಬಿಟ್ಟಿತ್ತು.

ಇತ್ತೀಚೆಗೆ ಪುತ್ತೂರಿನ ಕಬಕ ನಿವಾಸಿಯೊಬ್ಬರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ ಮನೆಗೆ ಹಿಂತಿರುಗುವ ವೇಳೆಗೆ ದಾರಿ ಮಧ್ಯೆ ಬಳ್ಪದಲ್ಲಿ ನಾಯಿಯೊಂದು ಕಾರಿಗೆ ಅಡ್ಡ ಬಂದಿದ್ದು, ತಕ್ಷಣ ಚಾಲಕ ಕಾರು ನಿಲ್ಲಿಸಿ ನಾಯಿಯನ್ನು ಹುಡುಕಿದರೆ ನಾಯಿ ಮಾತ್ರ ಕಾಣಿಸಲಿಲ್ಲ. ಆದ್ರೆ ನಾಯಿ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿ ಕಾರಿನ ಬಂಪರ್ ನಲ್ಲಿ ಸಿಲುಕಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು.

ಬಾಲಕಿಯ ಶ್ವಾನ ಪ್ರೇಮ

ಆದರೆ ನಾಯಿ ಬೀಡು ಬಿಟ್ಟಿದ್ದ ಮನೆಯ ಯಜಮಾನನ ಪುತ್ರಿಗೆ ಈ ನಾಯಿಯೆಂದರೆ ಪಂಚಪ್ರಾಣ. ಮನೆಗೆ ಬರುತ್ತಿದ್ದ ನಾಯಿಗೆ ನಿತ್ಯ ತಿಂಡಿ ಹಾಕುತ್ತಿದ್ದಳು. ಆದರೆ ನಾಯಿ ಕಾರಿಗೆ ಡಿಕ್ಕಿಯಾಗಿ ಪುತ್ತೂರು ಸೇರಿದ ಬಳಿಕ ಬಾಲಕಿ ತುಂಬಾ ನೊಂದಿದ್ದಳು. ಕಾರಣ ಅದರ ಮರಿಗಳು ಅನಾಥವಾಗುತ್ತವೆ ಎನ್ನುವ ಆತಂಕ ಆಕೆಯಲ್ಲಿತ್ತು. ನಾಯಿಯನ್ನು ಪ್ರೀತಿಯಿಂದ ಸಾಕುತ್ತಿದ್ದ ಬಾಲಕಿಗೆ ನಾಯಿ ಮನೆಗೆ ಬರದೇ ಇರುವುದನ್ನು ನೋಡಿ ನಾಯಿಗಾಗಿ ಹಂಬಲಿಸಿದ್ದಳು. ತಂದೆಯ ಜತೆ ನಾಯಿಯನ್ನು ಮರಳಿ ತರುವಂತೆ ಹಾತೊರೆದಳು.

ಕೊನೆಗೂ ತಾಯಿ ಮಡಿಲ ಸೇರಿದ ಮರಿಗಳು!

ಕಾರಿಗೆ ಡಿಕ್ಕಿ ಹೊಡೆದು ಕಾರಿನ ಬಂಪರ್ ನಲ್ಲಿ ಸಿಲುಕಿ 70 ಕಿ.ಮೀ. ಸಂಚರಿಸಿದ ಸುದ್ದಿ ಎಲ್ಲಡೆ ವೈರಲ್ ಆಗಿತ್ತು. ಇತ್ತ ಪುತ್ರಿ ನಾಯಿಗಾಗಿ ಹಂಬಲಿಸುತ್ತಿರುವುದನ್ನು ನೋಡಿದ ತಂದೆ ಪುತ್ತೂರಿಗೆ ತೆರಳಿ ಅಲ್ಲಿ ಮನೆಯೊಂದರ ಪಕ್ಕ ನಾಯಿ ಇರುವುದನ್ನು ಗೊತ್ತು ಮಾಡಿ ಅದನ್ನು ವಾಪಸ್‌ ತಂದು ಅದರ ಮರಿಗಳ ಜತೆ ಒಂದುಗೂಡಿಸಿದರು. ನಾಯಿ ಹಾಗೂ ಅದರ ಮರಿಗಳು ತಾಯಿಯ ಮಡಿಲನ್ನು ಸೇರುವುದನ್ನು ಕಂಡು ಅರಣ್ಯಾಧಿಕಾರಿಯ ಪುತ್ರಿ ತುಂಬಾ ಖುಷಿಪಟ್ಟಳು. ಇದೀಗ ನಾಯಿಯು ಅದರ ವಾಸಸ್ಥಳಕ್ಕೆ ತಲುಪಿದ್ದು, ಮೂಕಜೀವಿಯ ಕಷ್ಟದ ಸಂದರ್ಭ ನೆರವಾದ ಬಾಲಕಿಯ ಶ್ವಾನಪ್ರೀತಿ ಮನ ಮಿಡಿಯುವಂತಿದೆ.

See also  ಅಕ್ಟೋಬರ್ 2 ರಂದು ಮಡಿಕೇರಿಯಲ್ಲಿ ಡಾ। ಪ್ರಭಾಕರ ಶಿಶಿಲರ ಕೃತಿ ' ಬೆಳಕಿನಡೆಗೆ ' ಬಿಡುಗಡೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget