ಕ್ರೈಂವಿಡಿಯೋವೈರಲ್ ನ್ಯೂಸ್

ರಾತ್ರೋರಾತ್ರಿ ಪೊಲೀಸ್‌ ಠಾಣೆಯೊಳಗೆ ನುಗ್ಗಿದ ಚಿರತೆ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ರಾತ್ರಿ ವೇಳೆ ಪೊಲೀಸ್‌ ಠಾಣೆಯೊಳಗೆ ನುಗ್ಗಿದ ಚಿರತೆಯೊಂದು ಶ್ವಾನದ ಮೇಲೆ ದಾಳಿ ನಡೆಸಿ ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ.

ಈ ಘಟನೆ ಬುಧವಾರ (ಜನವರಿ 24) ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರತ್ನಗಿರಿಯ ಪೊಲೀಸ್‌ ಠಾಣೆಯೊಳಗೆ ಚಿರತೆ ನುಗ್ಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಠಾಣೆಯೊಳಗೆ ನಾಲ್ಕೈದು ಶ್ವಾನಗಳು ಅಡ್ಡಾಡುತ್ತಿದ್ದವು.

ಠಾಣೆಯೊಳಗೆ ಚಿರತೆ ಬಂದಿದ್ದನ್ನು ಗಮನಿಸಿದ ಪೊಲೀಸರು ಮುನ್ನೆಚ್ಚರಿಕೆಯಾಗಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು. ಶ್ವಾನವನ್ನು ಬೆನ್ನಟ್ಟಿ ಬಂದ ಚಿರತೆ ನೇರವಾಗಿ ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಕೊಂ* ದು ಹೊತ್ತೊಯ್ಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಅದೃಷ್ಟವಶಾತ್‌ ಠಾಣೆಯಲ್ಲಿದ್ದ ಯಾವ ಸಿಬ್ಬಂದಿಗೂ ಯಾವುದೇ ಹಾನಿಯಾಗಿಲ್ಲ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Related posts

ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮಕ್ಕಳಿಗೆ ವಿಷ ಹಾಕಿ ಕೊಂದ ತಂದೆ..! ಅಪ್ಪನ ದುಡುಕುತನಕ್ಕೆ ಇಬ್ಬರು ಮಕ್ಕಳ ಬದುಕು ಅಂತ್ಯ..!

ವಿಕಿಪೀಡಿಯಾವನ್ನೂ ಖರೀದಿಸ್ತಾರಾ ಎಲಾನ್‌ ಮಸ್ಕ್‌..? ಎಷ್ಟು ಕೋಟಿಯ ಆಫರ್ ಗೊತ್ತಾ..? ವಿಕಿಪೀಡಿಯಾದ ಸಂಸ್ಥಾಪಕನ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರಾ ಜಗತ್ತಿನ ನಂ. 1 ಶ್ರೀಮಂತ?

40,000 ರೂ. ಗೆ 4 ವರ್ಷದ ಹೆಣ್ಣು ಮಗುವನ್ನು ಮಾರಿದ ಪೋಷಕರು..! 6 ಮಂದಿ ಅರೆಸ್ಟ್‌