ಕ್ರೈಂವಿಡಿಯೋವೈರಲ್ ನ್ಯೂಸ್

ಪಿಸ್ತೂಲ್ ಹಿಡಿದು ಬೈಕ್‌ಗಳಲ್ಲಿ ಬಂದ ನಾಲ್ವರನ್ನು ಪೊರಕೆ ಹಿಡಿದು ಓಡಿಸಿದಳಾ ಮಹಿಳೆ? ಇಲ್ಲಿದೆ ವೈರಲ್ ವಿಡಿಯೋ

151

ನ್ಯೂಸ್‌ ನಾಟೌಟ್‌: ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಅಪರಿಚಿತರು ಮನೆಯ ಹೊರಗೆ ನಿಂತಿದ್ದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.

ಈ ವೇಳೆ ಹೊರಗೆ ನಿಂತಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮನೆಯ ಹೊರಗಡೆ ಏನೋ ಶಬ್ದವಾಗುತ್ತಿರುವುದನ್ನು ಕಂಡ ಮಹಿಳೆ ಪೊರಕೆ ಹಿಡಿದು ಧೈರ್ಯದಿಂದ ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿದ್ದಾಳೆ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಫಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನವೆಂಬರ್​​ 27 ಬೆಳಗ್ಗೆ 7:30ರ ಸುಮಾರಿಗೆ ಹರಿಯಾಣದ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ, ದಾಳಿಕೋರರು ಹರಿಕಿಶನ್ ಎಂಬಾತನ ಮೇಲೆ ಒಂಬತ್ತು ಭಾರೀ ಗುಂಡು ಹಾರಿಸಿದ್ದು ಕಂಡು ಬಂದಿದೆ. ಸದ್ಯ ಹರಿಕಿಶನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರವಿ ಈ ಹಿಂದೆ ಜೈಲಿನಲ್ಲಿದ್ದು, ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರಿಂದ ತಿಳಿದುಬಂದಿದೆ.

ವಿಡಿಯೋದಲ್ಲಿ ಹರಿಕಿಶನ್ ತನ್ನ ಮನೆಯ ಬಳಿ ನಿಂತಿರುವುದನ್ನು ಕಾಣಬಹುದು. ಆ ಸಮಯದಲ್ಲೇ ಏಕಾಏಕಿ ಎರಡು ಬೈಕ್‌ಗಳು ಬಂದಿದ್ದು, ಬೈಕಿನಲ್ಲಿ ಬಂದ ನಾಲ್ವರು ಏಕಾಏಕಿ ಹರಿಕಿಶನ್​ ಮೇಲೆ ಗುಂಡು ಹಾರಿಸುತ್ತಿರುವುದನ್ನು ಕಾಣಬಹುದು. ಅಷ್ಟೊತ್ತಿಗಾಗಲೇ ಮಹಿಳೆಯೊಬ್ಬಳು ಪೊರಕೆ ಹಿಡಿದು ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.

https://newsnotout.com/2023/11/cow-and-gold-issue-go-pooje/

FB PAGE : https://www.facebook.com/NewsNotOut2023

Insta : https://www.instagram.com/newsnotout/

Tweet : https://twitter.com/News_Not_Out

YouTube : https://www.youtube.com/@newsnotout8209

Koo app: https://www.kooapp.com/profile/NewsNotOut

Website : https://newsnotout.com/

See also  ಕೋಳಿ ವ್ಯಾಪಾರಿಯನ್ನು ಮರಕ್ಕೆ ಕಟ್ಟಿ ಹಾಕಿದ ರೈತ..! ಹಲವು ತಿಂಗಳಿಂದ ನಡೆಯುತ್ತಿದ್ದ ಮೋಸವನ್ನು ರೈತ ಬಯಲಿಗೆಳೆದದ್ದೇಗೆ..?
  Ad Widget   Ad Widget     Ad Widget   Ad Widget   Ad Widget   Ad Widget