ವೈರಲ್ ನ್ಯೂಸ್

58 ಲಕ್ಷ ರೂ. ಸಂಬಳವಿದ್ದರೂ ಗರ್ಲ್‌ಫ್ರೆಂಡ್‌ ಇಲ್ಲವೆಂದು ಬೇಸರ..! ಬೆಂಗಳೂರಿಗನ ಟ್ವೀಟ್ ಎಲ್ಲೆಡೆ ವೈರಲ್!

ನ್ಯೂಸ್ ನಾಟೌಟ್: ಬೆಂಗಳೂರಿನ 24 ವರ್ಷದ ಟೆಕ್ಕಿಯೊಬ್ಬರು ಲಕ್ಷಗಟ್ಟಲೆ ಹಣವಿದ್ದರೂ ಸಂತೋಷವಿಲ್ಲ, ಒಬ್ಬಂಟಿಯಾಗಿದ್ದೇನೆ ಎಂದು ಅಳಲು ತೋಡಿಕೊಂಡಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಬೆಂಗಳೂರಿನಲ್ಲಿರುವ ಅನಾಮಧೇಯ ಟೆಕ್ಕಿ ಒಬ್ಬರು ಈ ಬಗ್ಗೆ ಗ್ರೇಪ್‌ವೈನ್‌ ಆಪ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. “ಜೀವನದಲ್ಲಿ ಬೇಸರ ತುಂಬಿಕೊಂಡಿದೆ. ನಾನು ಕಳೆದ 2.9 ವರ್ಷದಿಂದ ಬೆಂಗಳೂರಿನಲ್ಲಿ FAANG ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ವರ್ಷಕ್ಕೆ 58 ಲಕ್ಷ ರೂ. ಸಂಬಳವಿದೆ. ವೃತ್ತಿ ಜೀವನವೂ ತೊಂದರೆಯಿಲ್ಲದೆ ನಡೆಯುತ್ತಿದೆ. ಹಾಗಿದ್ದರೂ ನಾನು ಜೀವನದಲ್ಲಿ ಒಂಟಿಯಾಗಿದ್ದೇನೆ. ನನಗೆ ಗರ್ಲ್‌ಫ್ರೆಂಡ್‌ ಇಲ್ಲ. ಎಲ್ಲ ಸ್ನೇಹಿತರು ಅವರವರ ಜೀವನದಲ್ಲಿ ಬಿಜಿ ಇದ್ದಾರೆ. ನಾನು ಮಾತ್ರ ಒಬ್ಬಂಟಿಯಾಗಿ ಉಳಿದುಕೊಂಡಿದ್ದೇನೆ” ಎಂದು ಅವರು ಹೇಳಿಕೊಂಡಿದ್ದಾರೆ.

“ನಾನು ವೃತ್ತಿ ಆರಂಭಿಸಿದಾಗಿನಿಂದ ಒಂದೇ ಕಂಪನಿಯಲ್ಲಿ ಇದ್ದೇನೆ. ಹಾಗಾಗಿ ಕೆಲಸದಲ್ಲೂ ಏನೂ ಇಂಟ್ರೆಸ್ಟಿಂಗ್‌ ಎನ್ನುವಂಥದ್ದು ಇಲ್ಲ. ಆದರೆ ಸದ್ಯಕ್ಕೆ ಕೆಲಸವನ್ನು ಬದಲಾಯಿಸಿ, ಹೊಸ ಸವಾಲುಗಳನ್ನು ಎದುರಿಸುವುದಕ್ಕೂ ನಾನು ಸಿದ್ಧವಿಲ್ಲ. ಆದರೆ ಈ ಒಬ್ಬಂಟಿತನ ಹೋಗಬೇಕೆಂದರೆ ಏನು ಮಾಡಬೇಕು ಎಂದು ಯಾರಾದರೂ ಸಲಹೆ ಕೊಡಿ. ದಯವಿಟ್ಟು ಜಿಮ್‌ಗೆ ಹೋಗಿ ಎಂದು ಮಾತ್ರ ಹೇಳಬೇಡಿ. ಏಕೆಂದರೆ ನಾನು ಈಗಾಗಲೇ ಜಿಮ್‌ಗೆ ಹೋಗುತ್ತಿದ್ದೇನೆ” ಎಂದು ಅವರು ಹೇಳಿಕೊಂಡಿರುವುದು ಹಲವು ವಿಚಿತ್ರ ಕಾಮೆಂಟ್ ಗಳನ್ನು ಪಡೆದಿದೆ.

Related posts

ಮಗುವನ್ನು ಕಾರಲ್ಲೇ ಬಿಟ್ಟು ಮದುವೆಗೆ ತೆರಳಿದ ಹೆತ್ತವರು..! 3 ವರ್ಷದ ಕಂದ ಉಸಿರುಗಟ್ಟಿ ದುರಂತ ಅಂತ್ಯ..!

ಗಂಗಾಜಲಕ್ಕೆ 18% ಜಿಎಸ್‌ಟಿ..? ಕಸ್ಟಮ್ಸ್ ಮಂಡಳಿ ಈ ಬಗ್ಗೆ ಹೇಳಿದ್ದೇನು?

ವಿಚ್ಚೇದನದ ಬಳಿಕ ನನ್ನ ಹಣ ವಾಪಾಸ್ ಕೊಡುವಂತೆ ಫೊಟೋಗ್ರಾಫರ್ ಬೆನ್ನುಬಿದ್ದ ಮಹಿಳೆ! ತಮಾಷೆ ಎಂದುಕೊಂಡ ಫೊಟೋಗ್ರಾಫರ್ ಗೆ ಕಾದಿತ್ತು ಶಾಕ್!