ಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ರೀಲ್ಸ್‌ ನಲ್ಲಿ ವೈರಲ್ ಆಗಬೇಕೆಂದು ತುಂಡು ಬಟ್ಟೆ ತೊಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ ಯುವತಿ..! ಜನಾಕ್ರೋಶದ ಬಳಿಕ ಕ್ಷಮೆ ಯಾಚನೆ..! ಇಲ್ಲಿದೆ ವೈರಲ್ ವಿಡಿಯೋ

283

ನ್ಯೂಸ್ ನಾಟೌಟ್ : ರೀಲ್ಸ್ ಗಾಗಿ ಅತಿರೇಕವೆನಿಸುವ ಘಟನೆಯೊಂದು ನಡೆದಿದ್ದು, ಪ್ರಚಾರದ ತೆವಳಿಗಾಗಿ ಜನನಿಬಿಡ ರಸ್ತೆಯಲ್ಲಿ ಯುವತಿಯೊಬ್ಬಳು ಬರೀ ಬ್ರಾ ತೊಟ್ಟು ಅಡ್ಡಾಡಿದ್ದಾಳೆ. ಈಕೆಯ ಈ ದುರ್ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಇನ್ನು ಮುಂದೆ ಹೀಗೆ ಅಸಹ್ಯಕರವಾಗಿ ವರ್ತಿಸುವುದಿಲ್ಲ ಎಂದು ಕ್ಷಮೆಯನ್ನು ಕೇಳಿದ್ದಾಳೆ.

ಈ ಘಟನೆ ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆದಿದ್ದು, ರೀಲ್ಸ್‌ಗಾಗಿ ಯುವತಿಯೊಬ್ಬಳು ಡೆನಿಮ್‌ ಹಾಗೂ ಬರೀ ಬ್ರಾ ಧರಿಸಿ ಜನನಿಬಿಡ ಪ್ರದೇಶದಲ್ಲಿ ಓಡಾಡುವ ಮೂಲಕ ಇತರರರಿಗೆ ಮುಜುಗರವನ್ನು ಉಂಟು ಮಾಡಿದ್ದಾಳೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇದೆಂಥಾ ವರ್ತನೆ ಎಂದು ನೆಟ್ಟಿಗರು ಆಕೆಯ ವಿರುದ್ಧ ಕಿಡಿ ಕಾರಿದ್ದಾರೆ. ಬಜರಂಗದಳ ಸೇರಿದಂತೆ ಇತರೆ ಸಂಘಟನೆಗಳು ಆಕೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ತೀವ್ರ ಜನಾಕ್ರೋಶದ ಬಳಿಕ ʼನನ್ನನ್ನು ಕ್ಷಮಿಸಿ ಬಿಡಿ ಸಾರ್ವಜನಿಕ ಸ್ಥಳದಲ್ಲಿ ನಾನು ಆ ರೀತಿಯ ಬಟ್ಟೆಯನ್ನು ಧರಿಸಿ ಓಡಾಡಬಾರದಿತ್ತು, ನನ್ನ ಈ ವರ್ತನೆಯಿಂದ ನಿಮ್ಮ ಭಾವನೆಗಳಿಗೆ ನೋವುಂಟಾಗಿದ್ದರೆ ನನ್ನನ್ನು ಕ್ಷಮಿಸಿʼ ಎಂದು ಕ್ಷಮಾಪಣೆ ಕೇಳಿದ್ದಾಳೆ.

Click

https://newsnotout.com/2024/09/police-112-call-and-ask-for-help-for-travelling-to-program-kannada-news/
https://newsnotout.com/2024/09/temple-for-actor-puneeth-rajkumar-and-ashwini-innaguarated/
https://newsnotout.com/2024/09/actor-darshan-faces-income-tax-investigation-on-case-kannada-news/
See also  ತಮಿಳಿನ ಖ್ಯಾತ ನಟ ಅಜಿತ್ ಆಸ್ಪತ್ರೆಗೆ ದಾಖಲು, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget