ವೈರಲ್ ನ್ಯೂಸ್

ಕುದುರೆ ಮೇಲೆ ಕುಳಿತು ಫುಡ್‌ ಡೆಲಿವರಿ ಮಾಡುತ್ತಿರುವ ಡೆಲಿವರಿ ಬಾಯ್‌..!ಏನಿದರ ವಿಶೇಷತೆ?

ನ್ಯೂಸ್ ನಾಟೌಟ್ :ಸಾಮಾನ್ಯವಾಗಿ ಫುಡ್‌ ಡೆಲಿವರಿ ಬಾಯ್‌ ಬೈಕ್ ಏರಿ ಫುಡ್‌ ತಕೊಂಡು ಆರ್ಡರ್‌ ಮಾಡಿರುವವರ ಮನೆಯ ಕದವನ್ನು ತಟ್ಟುತ್ತಾರೆ.ಆದರೆ ಇಲ್ಲೊಂದು ಕಡೆ ವಿಚಿತ್ರ ಘಟನೆಯೊಂದು ನಡೆದಿದೆ.ಆತ ಕುದುರೆ ಮೇಲೆ ಕುಳಿತು ಫುಡ್‌ ತೆಗೆದುಕೊಂಡು ಬಂದು ಡೆಲಿವರಿ ಮಾಡಿದ್ದು,ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಈ ಘಟನೆ ಬೆಳಕಿಗೆ ಬಂದಿದ್ದು, ಹೈದರಾಬಾದ್ ನ ಜನನಿಬಿಡ ಪ್ರದೇಶದಲ್ಲಿ.ಕುದುರೆಮೇಲೆ ಕುಳಿತು ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ತೆರಳುವುದು ಕಾಣಬಹುದು.ಅಸಲಿಗೆ ಆತ ದಿನಾ ಕುದುರೆ ಮೇಲೆಯೇ ಕುಳಿತು ಫುಡ್ ಡೆಲಿವರಿ ಮಾಡುತ್ತಾನೆ ಅಂದು ಕೊಂಡಿರಾ… ಇಲ್ಲ. ಇದಕ್ಕೊಂದು ಕಾರಣವಿದೆ ಹಿಟ್ ಅಂಡ್ ರನ್ ಕೇಸ್ ಗಳಲ್ಲಿ ಚಾಲಕರಿಗೆ ಭಾರಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ತಂದಿರುವುದು ಗೊತ್ತೇ ಇದೆ. ಇದರ ವಿರುದ್ಧ ದೇಶಾದ್ಯಂತ ಟ್ರಕ್ ಚಾಲಕರು ಮುಷ್ಕರ ನಡೆಸಿದರು. ಇದರ ಪರಿಣಾಮ ಪೆಟ್ರೋಲ್ ಬಂಕ್ ಗಳಲ್ಲಿ ಇಂಧನ ದಾಸ್ತಾನು ಕಡಿಮೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಸುದ್ದಿ ಹೈದರಾಬಾದ್‌ನಲ್ಲಿ ಸಂಚಲನ ಮೂಡಿಸಿದೆ.ವಾಹನ ಸವಾರರು ಪೆಟ್ರೋಲ್ ಬಂಕ್‌ಗಳತ್ತ ಸಂಚಾರ ಮಾಡಿದರೆ ಒಂದು ಕಡೆಯಿಂದ ಸಂಚಾರ ದಟ್ಟಣೆ ಉಂಟಾಗಿತ್ತು.ಹಲವೆಡೆ ಇಂಧನ ಕೊರತೆಯೂ ಕಂಡುಬಂದಿತು ಕೆಲವೆಡೆ ನೋ ಸ್ಟಾಕ್ ಎಂಬ ಫಲಕವನ್ನೂ ಹಾಕಲಾಯಿತು.ಈ ಪರಿಸ್ಥಿತಿಗಳಿಂದಾಗಿ, ಆನ್‌ಲೈನ್ ಆಹಾರ ವಿತರಣಾ ಸಿಬ್ಬಂದಿ ತೀವ್ರ ತೊಂದರೆಗಳನ್ನು ಎದುರಿಸಬೇಕಾಯಿತು.

ಸಮಯಕ್ಕೆ ಸರಿಯಾಗಿ ಆಹಾರ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಕೆಲವು ಕಡೆ ಕೇಳಿ ಬರುತ್ತಿವೆ ಇದರ ನಡುವೆ ಡೆಲಿವರಿ ಬಾಯ್ ಪೆಟ್ರೋಲ್ ಹಾಕಲು ಬಂಕ್ ಬಳಿ ಬಂದಿದ್ದಾನೆ ಆದರೆ ಇಲ್ಲಿದ್ದ ವಾಹನಗಳ ಸಾಲು ಕಂಡು ಇದು ಸಾಧ್ಯವಿಲ್ಲ ಎಂಬುದನ್ನು ಅರಿತ ಆತ ಬೈಕ್ ಬಿಟ್ಟು ಬಾಡಿಗೆ ಕುದುರೆ ಪಡೆದು ತನ್ನ ಫುಡ್ ಡೆಲಿವರಿ ಕೊಡಲು ಹೊರಟಿದ್ದಾನೆ. ಈತ ಕುದುರೆ ಮೇಲೆ ಹೋಗುತ್ತಿರುವುದನ್ನು ಕಂಡ ಇತರರು ಆತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ ಅಲ್ಲದೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Related posts

ಆಕೆ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು..! ಯಾರು ಆ ಖ್ಯಾತ ಹಾಲಿವುಡ್‌ ನಟಿ..?

ಅಂಪೈರ್ ತೀರ್ಪಿನಿಂದ ಫುಟ್‌ ಬಾಲ್ ಮೈದಾನದಲ್ಲೇ ಹೊಡೆದಾಟ..! 100 ಮಂದಿ ಸಾವು..!

ಸಿದ್ದರಾಮಯ್ಯ ನಮ್ಮ ಮೂಲ ಕಾಂಗ್ರೆಸಿಗರಲ್ಲ ಎಂದ ಡಿ.ಕೆ. ಸುರೇಶ್..! ಹಣೇಲಿ ಬರೆದಿದ್ದರೆ ಎಲ್ಲಾ ಆಗುತ್ತೆ ಎಂದ ಲೋಕಸಭಾ ಅಭ್ಯರ್ಥಿ