ಕರಾವಳಿ

ವಿಶ್ವ ದಿಗ್ಗಜರ ಚಿತ್ರವನ್ನು ನೆರಳಲ್ಲೇ ಬಿಡಿಸುವ ವಿಚಿತ್ರ ಕಲಾವಿದ..!

ನ್ಯೂಸ್ ನಾಟೌಟ್ : ನಾವು ಹಲವು ಕಲಾವಿದರನ್ನು ನೋಡಿದ್ದೇವೆ.ಅದರಲ್ಲೂ ಚಿತ್ರ ಕಲಾವಿದರ ಬೇಗ ಆಕರ್ಷಿತರಾಗುತ್ತಾರೆ.ಕೈನಲ್ಲೇ ಚಿತ್ರ ಬಿಡಿಸಿ ಮೋಜು ಮಾಡುವ ಈ ಕಲಾವಿದರು ಜನರನ್ನು ಬೆರಗುಗೊಳಿಸುವಂತೆ ಮಾಡುತ್ತಾರೆ.ಆದರೆ ಇಲ್ಲೊಬ್ಬ ಕಲಾವಿದನಿದ್ದಾನೆ ವಿಶ್ವ ದಿಗ್ಗಜರ ಚಿತ್ರವನ್ನು ಕ್ಷಣಮಾತ್ರದಲ್ಲೇ ಬಿಡಿಸ ಬಲ್ಲ ಅದ್ಭುತ ಕಲಾವಿದ.

ಈತ ಸಣ್ಣ ಪುಟ್ಟ ಸಾಮಾಗ್ರಿಗಳನ್ನೇ ಬಳಸಿಕೊಂಡು ವಿಶೇಷವಾದ ಕಲಾಕೃತಿಗಳನ್ನು ರಚಿಸುವ ಮೂಲಕ ಹಲವು ಜನರನ್ನು ವಿಸ್ಮಯಗೊಳಿಸಿದ್ದಾನೆ. ಶಿಂತು ಮೌರ್ಯ ಎನ್ನುವ ಯುವಕನ ಈ ಸಾಧನೆ ಮಾಡಿದ್ದಾನೆ. ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಸದ್ಯ ಈ ಕುರಿತ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು (Viral Video) ಮಾಡುತ್ತಿದೆ.ಶಂತು ಅವರು ಬೆಂಕಿ ಪೊಟ್ಟಣ ಹಾಗೂ ಐಸ್‌ಕ್ರೀಂನ ಕಡ್ಡಿಗಳನ್ನೇ ಬಳಸಿಕೊಂಡು ಕಲಾಕೃತಿ ರಚಿಸುವ ವಿಶೇಷ ಪ್ರತಿಭೆಯನ್ನು ಹೊಂದಿದ್ದಾರೆ.

ಅದರಂತೆ ಅವರು ಇತ್ತೀಚೆಗೆ ಬೆಂಕಿ ಪೊಟ್ಟಣ ಮತ್ತು ಐಸ್‌ಕ್ರೀಂ ಕಡ್ಡಿ ಬಳಸಿಕೊಂಡು ವಿಶೇಷವಾದ ಕಲಾಕೃತಿಯೊಂದನ್ನು ರಚಿಸಿದ್ದಾರೆ. ಆ ಕಲಾಕೃತಿಯ ಎದುರಿಗೆ ಲೈಟ್‌ ಹಾಕಿದರೆ ಅದರ ನೆರಳಿನಲ್ಲಿ ಭಾರತದ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಭಾವಚಿತ್ರ ಮೂಡುವಂತಹ ವಿಶೇಷವಾದ ಕಲಾಕೃತಿ ಅದಾಗಿದೆ.

https://www.instagram.com/reel/CtRaF0go6oA/?utm_source=ig_web_copy_link&igshid=MzRlODBiNWFlZA==

ಕಲಾಕೃತಿ ಮಾಡುವುದಕ್ಕೆ ತಾನು ಪಟ್ಟ ಕಷ್ಟವನ್ನು ಶಿಂತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ರೂಪದಲ್ಲಿ ಹಂಚಿಕೊಂಡಿದ್ದಾರೆ. ಆ ಕಲಾಕೃತಿ ನಿರ್ಮಾಣ ಮಾಡುವುದಕ್ಕೆಂದು ಬರೋಬ್ಬರಿ ಮೂರು ದಿನಗಳ ಸಮಯ ತೆಗೆದುಕೊಂಡಿದ್ದಾಗಿ ಅವರು ವಿಡಿಯೊದ ಕ್ಯಾಪ್ಶನ್‌ನಲ್ಲಿ ಹೇಳಿದ್ದಾರೆ. ಹಾಗೆಯೇ ಕಲಾಕೃತಿ ಬಗ್ಗೆ ನಿಮಗೆ ಏನೆನ್ನಿಸಿತು ಎಂದು ಕಾಮೆಂಟ್‌ ಮೂಲಕ ತಿಳಿಸಿ ಎಂದೂ ಕೇಳಿಕೊಂಡಿದ್ದಾರೆ.

ಈ ವಿಶೇಷ ಕಲೆಯ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ.ಅಂದಿನಿಂದ ಇಂದಿನವರೆಗೆ ವಿಡಿಯೊ 1.25 ಕೋಟಿಗೂ ಅಧಿಕ ಜನರಿಂದ ವೀಕ್ಷಣೆಗೊಂಡಿದೆ. ಬಹಳಷ್ಟು ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ.16 ಲಕ್ಷಕ್ಕೂ ಅಧಿಕ ಮಂದಿ ವಿಡಿಯೊಗೆ ಲೈಕ್‌ ಮಾಡಿದ್ದಾರೆ.ಸಾವಿರಾರು ಜನರು ವಿಡಿಯೊವನ್ನು ತಮ್ಮ ಸ್ನೇಹಿತ ಬಳಗದವರಿಗೆ ಹಂಚಿಕೊಂಡಿದ್ದಾರೆ.

“ಈ ವಿಡಿಯೊವನ್ನು ವಿರಾಟ್‌ ಅವರು ನೋಡಿದರೆ ಚೆನ್ನಾಗಿರುತ್ತದೆ”, “ಇದು ನಿಜಕ್ಕೂ ಅದ್ಭುತವಾದ ಹಾಗೂ ವಿಶೇಷವಾದ ಪ್ರತಿಭೆ. ನೀವು ಇನ್ನಷ್ಟು ಬೆಳೆಯುವಂತಾಗಲಿ”, “ವಿರಾಟ್‌ ಕೊಹ್ಲಿ ಅವರೇ, ಇದು ನಿಮಗಾಗಿ”, “ನನ್ನ ದೇವರು, ನನ್ನ ಸ್ಫೂರ್ತಿ. ಕ್ರಿಕೆಟ್‌ನ ರಾಜ ಕಿಂಗ್‌ ಕೊಹ್ಲಿ” ಎನ್ನುವಂತಹ ಕಾಮೆಂಟ್‌ಗಳು ವಿಡಿಯೊಗೆ ಬಂದಿವೆ. ಅದಲ್ಲದೆ “ವಾವ್‌”, “ಸೂಪರ್‌”, “ಅಮೇಜಿಂಗ್‌” ಎನ್ನುವಂತಹ ನೂರಾರು ಕಾಮೆಂಟ್‌ಗಳನ್ನು ನಾವು ಕಾಣಬಹುದಾಗಿದೆ.

https://www.instagram.com/reel/CtRaF0go6oA/?utm_source=ig_web_copy_link&igshid=MzRlODBiNWFlZA==

Related posts

ಮುಂದಿನ ವರ್ಷ ಇಡೀ ಭೂಖಂಡಕ್ಕೇ ಅನಾಹುತ

ಪುತ್ತೂರು : ಪಿಕಪ್ ವಾಹನ – ಬೈಕ್ ಮಧ್ಯೆ ಭೀಕರ ಅಪಘಾತ,ಸುಳ್ಯ ಜಟ್ಟಿಪಳ್ಳದ ವ್ಯಕ್ತಿ ದಾರುಣ ಸಾವು

ನಾಳೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ, ಪ್ರತಿಯೊಬ್ಬ ತಾಯಿಯೂ ತಜ್ಞ ವೈದ್ಯರ ಈ ಸಲಹೆಯನ್ನು ಪಾಲಿಸಬೇಕು ಏಕೆ ಗೊತ್ತಾ..?