ಕರಾವಳಿದೇಶ-ಪ್ರಪಂಚ

ಸೀರೆಯುಟ್ಟು 42 ಕಿ.ಮೀ ಮ್ಯಾರಥಾನ್ ಓಡಿದ ಮಹಿಳೆ!, ದೇಶದ ಸಂಸ್ಕೃತಿ ಸಾರಿದ ಮಹಿಳೆಗೆ ನೆಟ್ಟಿಗರು ಫಿದಾ

ನ್ಯೂಸ್ ನಾಟೌಟ್: ಕೆಲವರಿಗೆ ಸೀರೆಯುಟ್ಟುಕೊಡು ನಡೆಯುವುದೇ ಕಷ್ಟ.ಅಂಥದ್ರಲ್ಲಿ ಇಲ್ಲೊಬ್ಬ ಮಹಿಳೆ ಸೀರೆಯುಟ್ಟುಕೊಂಡೇ ಬರೋಬ್ಬರಿ 42 ಕಿ.ಮೀ ಓಡಿದ್ದಾರೆ ಅಂದ್ರೆ ಎಲ್ಲರೂ ಆಶ್ಚರ್ಯ ಪಡುವ ವಿಚಾರ.

ಸೀರೆ ನಮ್ಮ ದೇಶದ ಸಂಸ್ಕೃತಿಯ ಒಂದು ಭಾಗ.ಇತ್ತೀಚೆಗೆ ವಿದೇಶಿಗರೂ ಕೂಡ ಸೀರೆಗೆ ಮಾರುಹೋಗಿದ್ದಾರೆ. ಸೀರೆ ಉಟ್ಟರೆ ಮಹಿಳೆಯರ ಸೌಂದರ್ಯವನ್ನೇ ಇಮ್ಮಡಿಗೊಳಿಸುವಂತೆ ಮಾಡುತ್ತದೆ. ಆದರೆ ಇದೀಗ ವಿಶೇಷವೆನ್ನುವಂತೆ ಭಾರತ ಮೂಲದ ಮಹಿಳೆಯೊಬ್ಬರು ಬ್ರಿಟನ್‌ನಲ್ಲಿ ಸೀರೆಯುಟ್ಟುಕೊಂಡೇ ಮ್ಯಾರಥಾನ್‌ ಓಡಿದ್ದಾರೆ.

ಒಡಿಯಾ ಮೂಲದ 41 ವರ್ಷದ ಮಧುಸ್ಮಿತಾ ಜೆನಾ ಮ್ಯಾಂಚೆಸ್ಟರ್‌ನ ಪ್ರೌಢಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಮ್ಯಾಂಚೆಸ್ಟರ್‌ನಲ್ಲಿ ನಡೆದ 42.5 ಕಿ. ಮೀ ಉದ್ದದ ಮ್ಯಾಂಚೆಸ್ಟರ್‌ ಮ್ಯಾರಥಾನ್‌ನಲ್ಲಿ ಅವರು ಭಾಗವಹಿಸಿದ್ದರು. ಆ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಅವರು ಸೀರೆ ಧರಿಸಿ ಓಡಿದ್ದಾರೆ. ಉಳಿದವರೆಲ್ಲರೂ ಸ್ಪೋರ್ಟ್ಸ್‌ ಜರ್ಸಿಗಳನ್ನು ಹಾಕಿಕೊಂಡಿದ್ದನ್ನು ನೀವು ಫೋಟೋದಲ್ಲಿ ಕಾಣಬಹುದಾಗಿದೆ. ಆದರೆ ಮಧುಸ್ಮಿತಾ ಮಾತ್ರ ಭಾರತದ ಸಾಂಪ್ರದಾಯಿಕ ಸಂಬಲ್ಪುರಿ ಕೈಮಗ್ಗದ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.

ಮಧುಸ್ಮಿತಾ ಅವರು ನಾಲ್ಕು ಗಂಟೆ 50 ನಿಮಿಷಗಳಲ್ಲಿ ಮ್ಯಾರಥಾನ್‌ ಓಟವನ್ನು ಸಂಪೂರ್ಣವಾಗಿ ಮುಗಿಸಿದ್ದಾರೆ. ಕಪ್ಪು ಬಣ್ಣದ ರವಿಕೆ ಜತೆ ಕೆಂಪು ಬಣ್ಣದ ಸೀರೆ, ಹಣೆಯಲ್ಲಿ ಬಿಂದಿ ಇಟ್ಟು ಓಡುತ್ತಿರುವ ಮಧುಸ್ಮಿತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.ಈ ವಿಶೇಷ ಸ್ಪರ್ಧಿಯ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು,“ಇದು ನಮ್ಮ ಸಂಸ್ಕೃತಿಗೆ ಹೆಣ್ಣು ಮಕ್ಕಳು ಕೊಡಬೇಕಾದ ಮೌಲ್ಯ” ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

Related posts

ಸೌಜನ್ಯ ಪ್ರಕರಣದ ಕುರಿತು ಇಂದು ಹೈಕೋರ್ಟ್ ತೀರ್ಪು..! ಮರುತನಿಖೆಗೆ ಆದೇಶಿಸಲು ಸರ್ಕಾರಕ್ಕೆ ನಿರ್ದೇಶನ ನೀಡಲಿದೆಯಾ ಕೋರ್ಟ್? ಅರ್ಜಿ ಸಲ್ಲಿಸಿದವರ್ಯಾರು?

ಮಂಗಳೂರು: ಕೆಲಸಕ್ಕೆ ಹೋಗುತ್ತಿದ್ದ ಪೊಲೀಸ್‌ ಹಾಗೂ ಪತ್ನಿಗೆ ಅವಾಚ್ಯ ಪದಗಳಿಂದ ನಿಂದನೆ, ಪೊಲೀಸ್ ಅಧಿಕಾರಿಯ ಪತ್ನಿಯ ಜೊತೆಗೆ ಅಸಭ್ಯ ವರ್ತನೆ

ಹಸೆಮಣೆ ಏರಲು ರೆಡಿಯಾದ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ?ತುಳುನಾಡಿನ ಕುವರಿಯನ್ನು ಮದುವೆಯಾಗುತ್ತಿರುವ ಹುಡುಗ ಯಾರು?