ಕ್ರೈಂದೇಶ-ವಿದೇಶವೈರಲ್ ನ್ಯೂಸ್

ನಿಮಗೆ ಮತ ಹಾಕಿದ್ದೇನೆ, ನನಗೆ ಹುಡುಗಿ ಹುಡುಕಿ ಮದುವೆ ಮಾಡಿಸಿ ಎಂದು ಶಾಸಕರಿಗೆ ಮನವಿ ಮಾಡಿದ ಭೂಪ..! ಇಲ್ಲಿದೆ ವೈರಲ್ ವಿಡಿಯೋ

219

ನ್ಯೂಸ್ ನಾಟೌಟ್: ಕಾರಿಗೆ ಪೆಟ್ರೋಲ್ ಹಾಕಲು ಬಂದ ಬಿಜೆಪಿ ಶಾಸಕರ ಬಳಿ ಪೆಟ್ರೋಲ್ ಬಂಕ್ ನೌಕರನೋರ್ವ ತನಗೆ ಮದುವೆ ಮಾಡಿಸಿಕೊಡುವಂತೆ ಒತ್ತಾಯಿಸಿದ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಸ್ವತಃ ಶಾಸಕರೇ ಈ ವಿಡಿಯೋ ಅನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಭಾರೀ ವೈರಲ್ ಆಗಿದೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಚರಖಾರಿ ಶಾಸಕ ಬ್ರಿಜ್‌ಭೂಷಣ್ ರಜಪೂತ್ ತಮ್ಮ ಕಾರಿನಲ್ಲಿ ಪೆಟ್ರೋಲ್ ತುಂಬಿಸಲು ತಮ್ಮ ಬೆಂಗಾವಲು ಪಡೆಯೊಂದಿಗೆ ಚರಖಾರಿ ಪಟ್ಟಣದಲ್ಲಿರುವ ಮೌರ್ಯ ಪೆಟ್ರೋಲ್ ಪಂಪ್‌ ಗೆ ಬಂದಿದ್ದರು ಎನ್ನಲಾಗಿದೆ. ಈ ವೇಳೆ ಪೆಟ್ರೋಲ್ ಪಂಪ್‌ ನಲ್ಲಿ ಕೆಲಸ ಮಾಡುತ್ತಿದ್ದ ಅಖಿಲೇಂದ್ರ ಖರೆ ಎಂಬ ವ್ಯಕ್ತಿ ಶಾಸಕರ ಬಳಿ ತೆರಳಿ ನಿಮಗೆ ನಾನು ಮತ ಹಾಕಿದ್ದೇನೆ ದಯವಿಟ್ಟು ನನಗೊಂದು ಮದುವೆ ಮಾಡಿಸಿ ಎಂದು ತನ್ನ ಕಷ್ಟ ಹೇಳಿಕೊಂಡಿದ್ದಾನೆ.

ಅಲ್ಲದೆ ಈಗಾಗಲೇ ಹಲವು ಹುಡುಗಿಯರನ್ನು ನೋಡಿದ್ದು ಯಾವುದು ಸರಿಹೊಂದಲಿಲ್ಲ ಹಾಗಾಗಿ ನೀವೇ ಮುಂದೆ ನಿಂತು ನನಗೆ ಮದುವೆ ಮಾಡಿಸಿಕೊಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಸ್ಪಂದಿಸಿದ ಶಾಸಕ ರಾಜಪೂತ್ ನಿನಗೆ ಯಾವ ರೀತಿಯ ಹುಡುಗಿ ಬೇಕು, ಮನೆಯಲ್ಲಿ ಯಾರೆಲ್ಲಾ ಇದ್ದೀರಿ, ನಿನ್ನ ಸಂಬಳ ಎಷ್ಟು ಎಂದೆಲ್ಲಾ ಶಾಸಕರು ಕೇಳಿದ್ದು ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Click

https://newsnotout.com/2024/10/mother-of-kiccha-sudeep-nomore-kannada-news-viral-news/
https://newsnotout.com/2024/10/mangaluru-money-issue-online-whats-app-message-kannada-news/
https://newsnotout.com/2024/10/uppinangady-gundya-kannada-news-forest-department/
See also  ಏಜೆಂಟ್‍ ಗಳಿಂದ ಮೋಸ ಹೋಗಿ ರಷ್ಯಾದ ಸೇನೆಯಲ್ಲಿರುವ ಭಾರತೀಯರನ್ನು ಬಿಡುಗಡೆ ಮಾಡುವಂತೆ ಕೇಳಿದ ಮೋದಿ..! ರಷ್ಯಾದ ನಿರ್ಧಾರವೇನು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget