ನ್ಯೂಸ್ ನಾಟೌಟ್ : ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಭಕ್ತರು ತುಂಬಿದ್ದರು. ಪೂಜೆ ನಡೆಯುತ್ತಿತ್ತು. ಗನ್ ಹಿಡಿದ ಭಯೋತ್ಪಾದಕರು ನೇರವಾಗಿ ದೇವಸ್ಥಾನಗೊಳಗ್ಗೆ ನುಗ್ಗಿದ್ದರು. ಆದರೆ ಒರ್ವ ವ್ಯಕ್ತಿ ನೇರವಾಗಿ ಉಗ್ರರ ಬಳಿ ತೆರಳಿ ಕಪಾಳಕ್ಕೆ ಭಾರಿಸಿದ್ದಾನೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಇದು ಅಣಕು ಪ್ರದರ್ಶನ ಎಂದು ಘೋಷಣೆ ಮಾಡಿದ ಘಟನೆ ಮಹಾರಾಷ್ಟ್ರದ ಧುಲೆ ನಗರದ ಸ್ವಾಮಿನಾರಾಯಣ ದೇವಸ್ಥಾನದಲ್ಲಿ ನಡೆದಿದೆ.
ಮುಖಕ್ಕೆ ಕಪ್ಪು ಬಟ್ಟೆ, ಕೈಯಲ್ಲಿ ಗನ್, ಗ್ರೆನೆಡ್ ಸೇರಿದಂತೆ ಶಸ್ತ್ರಾಸ್ತ್ರ ಹಿಡಿದು ಸ್ವಾಮಿನಾರಾಯಣ ದೇವಸ್ಥಾನಕ್ಕೆ ಅಣುಕು ಪ್ರದರ್ಶ ನೀಡುತ್ತಿದ್ದ ಪೊಲೀಸರು ನುಗ್ಗಿದ್ದರು. ದಿಢೀರ್ ಪ್ರವೇಶದಿಂದ ಭಕ್ತರು ಭಯಬೀತಗೊಂಡಿದ್ದದರು. ಕೆಲ ಹೊತ್ತ ಏನುಮಾಡಬೇಕು ಅನ್ನೋ ಆತಂಕ ಎದುರಾಗಿತ್ತು. ಅಷ್ಟರಲ್ಲೇ ಪೊಲೀಸರು ಇದು ಅಣಕು ಪ್ರದರ್ಶನ ಎಂದು ಸೂಚನೆ ನೀಡಿದ್ದರು. ಆದರೆ ಇದ್ಯಾವುದರ ಪರಿವೇ ಇಲ್ಲದ ವ್ಯಕ್ತಿ, ಬಂಧೂಕು ಹಿಡಿದು ನಿಂತಿದ್ದ ಅಣುಕು ಪ್ರದರ್ಶನದ ಪೊಲೀಸ್ ಬಳಿ ತೆರಳಿದ ವ್ಯಕ್ತಿ ಕಪಾಳಕ್ಕ ಭಾರಿಸಿದ್ದಾನೆ.
ಅಣುಕು ಪ್ರದರ್ಶನದ ವೇಳೆ ಭಕ್ತರು ಆತಂಕಗೊಂಡಿದ್ದರು. ಭಯೋತ್ಪಾದಕ ದಾಳಿ ಅಥವಾ ಇನ್ನಿತರ ದಾಳಿಗಳ ವೇಳೆ ಸಾರ್ವಜನಿಕರು ಯಾವ ರೀತಿ ಸ್ಪಂದಿಸುತ್ತಾರೆ. ದಾಳಿಯನ್ನು ತಡೆಯಲು ಸಾರ್ವಜನಿಕರ ಪಾತ್ರವೇನು? ಸಮಾಜದಲ್ಲಿ ಒಗ್ಗಟ್ಟಿನಿಂದ ಪರಿಸ್ಥಿತಿ ಎದುರಿಸುವುದು ಹೇಗೆ? ಇಂತಹ ಪರಿಸ್ಥಿತಿಗಳಲ್ಲಿ ಸಾರ್ವಜನಿಕರು ಏನು ಮಾಡಬೇಕು ಅನ್ನೋದರ ಜಾಗೃತಿ ಮೂಡಿಸಲು ಮಹಾರಾಷ್ಟ್ರ ಪೊಲೀಸರು ಅಣುಕು ಪ್ರದರ್ಶನ ಮಾಡಿದ್ದರು. ಆದರೆ ಆ ವ್ಯಕ್ತಿ ಅಣಕು ಪ್ರದರ್ಶನ ಹಾಸ್ಯವಾಗಿ ಬದಲಾಗಿತ್ತು.
35 ವರ್ಷದ ಪ್ರಶಾಂತ್ ಕುಲಕರ್ಣಿ ನೇರವಾಗಿ ತೆರಳಿ ವೇಷ ಹಾಕಿದ್ದವರ ಕಪಾಳಕ್ಕೆ ಭಾರಿಸಿದ್ದಾನೆ. ಗನ್ ಹಿಡಿದು ಇಲ್ಲೇನು ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾನೆ. ಅಣುಕು ಪ್ರದರ್ಶನದ ನಡುವೆ ಕೆಲ ಹೊತ್ತು ಮತ್ತೊಂದು ತಿರುವು ಪಡೆದಿತ್ತು. ಈ ಅಣುಕು ಪ್ರದರ್ಶನದ ವಿಡಿಯೋ ಭಾರಿ ವೈರಲ್ ಆಗಿದೆ.
ಈ ರೀತಿಯ ಅಣುಕು ಪ್ರದರ್ಶನ ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುತ್ತದೆ. ಇತ್ತೀಚೆಗೆ ಮಂಗಳೂರಿನಲ್ಲಿ ಭಯೋತ್ಪಾದನಾ ನಿಗ್ರಹ ತಂಡ ರಚನೆಯ ನಿರ್ದೇಶನದಂತೆ ತರಬೇತಿ ಮುಗಿಸಿ ಆಗಮಿಸಿರುವ ಮಂಗಳೂರಿನ ತಂಡದಿಂದ ಅಣುಕು ಪ್ರದರ್ಶನ ನಡೆದಿತ್ತು. ಭಯೋತ್ಪಾದಕ ದಾಳಿ ಸಂದರ್ಭ ಈ ಕಮಾಂಡೊ ಪಡೆ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ತಿಳಿಸಲಾಗಿತ್ತು.