ಜೀವನಶೈಲಿ

Video:ಸಂಡೇ ಸ್ಪೆಶಲ್ ಎಂದು ಬಿರಿಯಾನಿ ಆರ್ಡರ್ ಮಾಡಿದ್ದ ಕುಟುಂಬ..!ಬಾಯಿ ಚಪ್ಪರಿಸಿಕೊಂಡು ತಿನ್ನಲು ಹೊರಡೋ ವೇಳೆ ಬಿಗ್ ಶಾಕ್..!ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆ..!

ನ್ಯೂಸ್ ನಾಟೌಟ್ : ಮನೆಯಲ್ಲಿ ಎಲ್ಲರೂ ಇದ್ದಾಗ ಒಟ್ಟಿಗೆ ಸೇರಿಕೊಂಡು ಊಟ ಮಾಡುವ ಮಜಾನೇ ಬೇರೆ.ಒಂದಷ್ಟು ತಮಾಷೆ ಮಾತಾಡಿಕೊಂಡು , ಕೆಲ ವಿಷಯಗಳನ್ನು ಹಂಚಿಕೊಳ್ಳುತ್ತಾ ಉಣ್ಣುವುದರಲ್ಲಿ ಏನೋ ಆನಂದ.ಅದರಲ್ಲೂ ಸಂಡೇ ಇದ್ದಾಗ ವಾರಕ್ಕೊಮ್ಮೆ ಎಲ್ಲರೂ ಫ್ರೀಯಾಗಿದ್ದಾಗ ಮನೆಯಲ್ಲಿ ಅಡುಗೆ ಮಾಡುವುದಕ್ಕಿಂತಲೂ ಆನ್‌ಲೈನ್‌ನಲ್ಲೇ ಆರ್ಡರ್ ಮಾಡೋರ ಸಂಖ್ಯೆಯೇ ಅಧಿಕ. ಹೀಗೆ ಇಲ್ಲೊಂದು ಕುಟುಂಬ ಆನ್‌ಲೈನ್‌ನಲ್ಲಿ ಬಿರಿಯಾನಿ ಆರ್ಡರ್ ಮಾಡಿದೆ.ಆದರೆ ಬಿರಿಯಾನಿ ಜೊತೆಗೆ ಒಂದು ಸತ್ತ ಹಲ್ಲಿಯ ಆಫರ್ ಕೂಡ ಸಿಕ್ಕಿದೆ.

ಹೈದರಾಬಾದ್ ನ ಅಂಬರ್‌ಪೇಟೆಯ ಡಿಡಿ ಕಾಲೋನಿಯ ಕುಟುಂಬವೊಂದು ಭಾನುವಾರ ಎಲ್ಲರೂ ಜೊತೆಯಾಗಿದ್ದಾರೆ ಎಂದುಕೊಂಡು ಬಿರಿಯಾನಿ ತಿನ್ನುವ ತವಕದಲ್ಲಿದ್ದರ.ಹೀಗಾಗಿ ಆರ್ಡರ್ ಮಾಡಿದ್ರು. ಸ್ವಲ್ಪ ಹೊತ್ತಿನಲ್ಲೇ ಆರ್ಡರ್ ಮಾಡಿದ್ದ ತಿನಿಸು ಬಂತು. ಇನ್ನೇಕೆ ತಡ ಊಟ ಮಾಡುವ ಎಂದು ಬಿರಿಯಾನಿ ಬಾಕ್ಸ್ ಓಪನ್ ಮಾಡಿ ಪ್ಲೇಟಿಗೆ ಹಾಕಿದರೆ ಬಿರಿಯಾನಿ ಜೊತೆ ಒಂದು ಸತ್ತ ಹಲ್ಲಿ ಕೂಡ ಪತ್ತೆಯಾಗಿದೆ ಇದನ್ನು ಕಂಡ ಮನೆ ಮಂದಿ ಶಾಕ್ ಆಗಿದ್ದಾರೆ.

ಜೊತೆಯಾಗಿರುವ ಸಂತಸ ಒಂದೆಡೆಯಾದ್ರೆ , ಇನ್ನೊಂದೆಡೆ ಹಸಿವು ತಾಳಲಾರದೇ ಕಂಗಾಲಾದ ಪರಿಸ್ಥಿತಿ.ಅಡುಗೆ ಮಾಡೋಣವೆಂದ್ರೆ ಒಂದಷ್ಟು ಟೈಂ ಹಿಡುಯುತ್ತೆ. ಹೀಗೆ ಏನೂ ಮಾಡಲಾಗದ ಸ್ಥಿತಿ, ಕೂಡಲೇ ಮನೆಯ ಓರ್ವ ಸದಸ್ಯನಾದ ಆದಿತ್ಯ ಬಿರಿಯಾನಿಯಲ್ಲಿ ಹಲ್ಲಿ ಇರುವ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಹೋಟೆಲ್ ಸಿಬ್ಬಂದಿಗಳ ಅಜಾಗರೂಕತೆಯ ಪರಿಣಾಮ ಬಿರಿಯಾನಿಯಲ್ಲಿ ಹಲ್ಲಿ ಬಿದ್ದಿದೆ. ಆದರೆ ಮನೆಮಂದಿಯ ಆಯುಷ್ಯ ಗಟ್ಟಿ ಇತ್ತು ಹಾಗಾಗಿ ತಿನ್ನುವ ಮೊದಲು ಕಣ್ಣಿಗೆ ಬಿತ್ತು ಇಲ್ಲದಿದ್ದರೆ ಬಿರಿಯಾನಿ ತಿಂದು ಮನೆಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗುವ ಸಂಭವ ಇತ್ತು.

Related posts

ಮೈದಾದಿಂದ ಮಾಡಿದ ತಿಂಡಿ ತಿನುಸುಗಳು ಬಾಯಿಗೆ ಎಷ್ಟು ರುಚಿಯೋ.. ಆರೋಗ್ಯಕ್ಕು ಅಷ್ಟೇ ಕಹಿ!!

ಚಳಿಗಾಲದಲ್ಲೂ ಚರ್ಮ ಕಾಂತಿಯುತವಾಗಿರಲು ಇವುಗಳನ್ನು ಕುಡಿಯಿರಿ…

ಒಣದ್ರಾಕ್ಷಿಯಲ್ಲಿ ನೀರು ಕುಡಿಯುವುದರಿಂದಾಗುವ ಲಾಭಗಳು,ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ