ದೇಶ-ಪ್ರಪಂಚ

ಮಾನವ ಗಾತ್ರದ ದೈತ್ಯ ಬಾವಲಿಯನ್ನು ಎಂದಾದರೂ ಕಂಡಿದ್ದೀರಾ?ಈ ಬಾವಲಿ ನೋಡಿ ಜನ ಬೆಚ್ಚಿ ಬಿದ್ದಿದ್ದೇಕೆ?

ನ್ಯೂಸ್ ನಾಟೌಟ್ :  ಬಾವಲಿಗಳ ಜೀವನವೇ ರೋಚಕವಗಿರುತ್ತೆ. ನಿಶಾಚರಿಗಳಾದ ಇವುಗಳು ಕತ್ತಲಿನಲ್ಲಿ ಮಾತ್ರ ಸದಾ ಆಕ್ಟಿವ್ ಆಗಿರುತ್ತವೆ. ಬಾವಲಿಗಳು ಸಾಮಾನ್ಯವಾಗಿ ಮನುಷ್ಯರೊಂದಿಗೆ ಬೆರೆಯುವುದಿಲ್ಲ.ಸಂಜೆಯಾದರೂ ಸಾಕು ಬಾವಲಿಗಳು ವಿಚಿತ್ರ ಸೌಂಡ್ ಮಾಡುತ್ತಿರುತ್ತವೆ.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಗ್ನೇಯ ಏಷ್ಯಾದಲ್ಲಿರುವ ದ್ವೀಪರಾಷ್ಟ್ರ ಫಿಲಿಪ್ಪೀನ್ಸ್‍ನಲ್ಲಿ ಮಾನವ ಗಾತ್ರದ ಬಾವಲಿ ಫೋಟೋ ಭಾರಿ ವೈರಲ್ ಆಗುತ್ತಿದೆ.ಮಾನವ ಗಾತ್ರದ ಬಾವಲಿಯನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ. ಇಷ್ಟುದಿನ ನಾವೂ ಇಷ್ಟುದೊಡ್ಡ ಗಾತ್ರದ ಬಾವಲಿಯನ್ನು ನೋಡಿಯೇ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಬಾವಲಿಗಳು ಇಷ್ಟೊಂದು ದೊಡ್ಡ ಗಾತ್ರದಲ್ಲಿ ಇರುತ್ವಾ? ಇನ್ನೂ ಕೆಲವರು ಪ್ರಶ್ನೆ ಮಾಡಿದ್ದಾರೆ. ಫಿಲಿಫೈನ್ಸ್‌ನ ಟ್ವಿಟರ್ ಬಳಕೆದಾರರೊಬ್ಬರು ಈ ದೈತ್ಯ ಬಾವಲಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‌ನ್ನು ಅನೇಕರು ಶೇರ್ ಮಾಡಿದ್ದು, ಅದು ವೈರಲ್ ಆಗುತ್ತಿದೆ.ಈ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದು, ‘ಈ ಬಾವಲಿಯ ಫೋಟೋ ನೋಡಿದ್ರೆ ನನಗೆ ಭಯವಾಗುತ್ತದೆ’ ಅಂತಾ ಹೇಳಿಕೊಂಡಿದ್ದಾರೆ. ‘ಈ ಬಾವಲಿ ದೊಡ್ಡ ರೆಕ್ಕಗಳನ್ನಷ್ಟೇ ಹೊಂದಿದೆ, ಆದರೆ ಅದರ ದೇಹ ಮಾತ್ರ ಚಿಕ್ಕದಾಗಿರುತ್ತದೆ. ಬಾವಲಿಗಳು ಹಣ್ಣು-ಹಂಪಲು ತಿಂದು ಬದುಕುತ್ತವೆ. ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ’ ಅಂತಾ ಒಬ್ಬ ಟ್ವಿಟರ್ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.

Related posts

ಊಟ ಮಾಡಿ ಹಣ ನೀಡದೆ ಪರಾರಿ..! ಬಿಲ್ ಕೇಳಿದ ಸಿಬ್ಬಂದಿಯನ್ನು ಕಾರಿನಲ್ಲಿ ಎಳೆದೊಯ್ದ, ರಾತ್ರಿಯೆಲ್ಲಾ ಕಟ್ಟಿಹಾಕಿದ ಕ್ರೂರಿಗಳು..! ಇಲ್ಲಿದೆ ವೈರಲ್ ವಿಡಿಯೋ

ತಲೆಗೆ 28 ಲಕ್ಷ ಬಹುಮಾನ ಹೊಂದಿದ್ದ ಇಬ್ಬರು ಮಹಿಳಾ ನಕ್ಸಲರು! ಎನ್‌ಕೌಂಟರ್‌ಗೆ ಬಲಿ!

ಒಂದೇ ಕುಟುಂಬದ 5 ಕಾರ್ಮಿಕರ ದುರಂತ ಅಂತ್ಯ! ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ನಡೆಯಿತು ಅನಾಹುತ..!