Latest

ಇಡೀ ಜಗತ್ತಿನಲ್ಲೇ ಅತ್ಯಂತ ದುಬಾರಿ ನಾಯಿಯಿದು!!ಬೆಂಗಳೂರಿಗ ಖರೀದಿಸಿದ ಈ ಶ್ವಾನದ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!

1k

ನ್ಯೂಸ್‌ ನಾಟೌಟ್: ಇಂಥ ನಾಯಿಯನ್ನು ಖರೀದಿ ಮಾಡಬೇಕಂದ್ರೆ ಅಷ್ಟೇ ಸ್ಥಿತಿವಂತನಾಗಿರಬೇಕು.ಇಲ್ಲಾಂದ್ರೆ ಅಷ್ಟು ಸುಲಭದಲ್ಲಿ ಈ ನಾಯಿ ಸಿಗೋದಕ್ಕೆ ಸಾಧ್ಯನೇ ಇಲ್ಲ. ಅಂತಹ ಅದೃಷ್ಟ ನಮ್ಮ ರಾಜ್ಯದ ಬೆಂಗಳೂರಿನ ವ್ಯಕ್ತಿಗೆ ಒಲಿದು ಬಂದಿದೆ.ಆ ನಾಯಿ ಕೂಡ ಅಷ್ಟೇ ಅದೃಷ್ಟ ಮಾಡಿದೆ ಅನ್ಸುತ್ತೆ,ಯಾಕಂದ್ರೆ ನಾಯಿ ಖರೀದಿ ಮಾಡಿದ ವ್ಯಕ್ತಿ ಶ್ವಾನ ಪ್ರೇಮಿ ಜತೆಗೆ ನಾಯಿ ತಳಿಗಾರ!.

ಎಸ್. ಸತೀಶ್ ಅವರು ಅತ್ಯಂತ ಅಪರೂಪದ ತೋಳ ಜಾತಿಯ ನಾಯಿಯನ್ನು ಖರೀದಿಸಿ ಇದೀಗ ಭಾರಿ ಸುದ್ದಿಯಾಗಿದ್ದಾರೆ.ಕ್ಯಾಡಬಾಮ್ ಒಕಾಮಿ (Cadabom Okami) ಎಂದು ಕರೆಯಲ್ಪಡುವ ಈ ವಿಶಿಷ್ಟ ನಾಯಿ, ತೋಳ ಮತ್ತು ಕಕೇಶಿಯನ್ ಶೆಫರ್ಡ್ ನಡುವಿನ ಮಿಶ್ರತಳಿ ಇದಾಗಿದೆ. ಈ ಬ್ರೀಡ್ ನ ಮೊದಲನೆ ನಾಯಿಯಿದು ಎನ್ನಲಾಗಿದೆ. ಇದನ್ನು ಖರೀದಿಸಲು ಇವರು ಬರೋಬ್ಬರಿ 49 ಕೋಟಿ (4.4 ಮಿಲಿಯನ್ ಪೌಂಡ್ ಗಳು) ರೂ. ಖರ್ಚು ಮಾಡಿದ್ದಾರೆ.

ಈ ಮೂಲಕ ಬೆಂಗಳೂರಿನ ವ್ಯಕ್ತಿ ಎಸ್. ಸತೀಶ್ ಜಗತ್ತಿನ ಅತಿ ದುಬಾರಿ ನಾಯಿಯ ಒಡೆಯರಾಗಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಕ್ಯಾಡಬಾಮ್ ಒಕಾಮಿ ಈಗಾಗಲೇ ಭಾರತದಲ್ಲಿ ಬಹಳ ಫೇಮಸ್ ಆಗಿದೆ. ಕೇವಲ 8 ತಿಂಗಳ ವಯಸ್ಸಿನಲ್ಲಿ, ಈ ನಾಯಿ 75 ಕಿಲೋಗ್ರಾಂಗಳಿಗಿಂತ ಹೆಚ್ಚು ತೂಕವನ್ನು ಹೊಂದುತ್ತದೆ. ಇದಕ್ಕೆ ಹಸಿವು ಜಾಸ್ತಿ. ಪ್ರತಿದಿನ ಸುಮಾರು 3 ಕೆಜಿ ಹಸಿ ಮಾಂಸವನ್ನು ತಿನ್ನುತ್ತದೆ ಎಂದು ತಿಳಿದು ಬಂದಿದೆ. ಕಾಡು ತೋಳದ ಹೋಲಿಕೆ ಹೆಚ್ಚಾಗಿರುವ ಈ ನಾಯಿ ನೋಡಲು ದೈತ್ಯ ಗಾತ್ರದಲ್ಲಿದೆ.

ಫೆಬ್ರವರಿಯಲ್ಲಿ ಭಾರತದಲ್ಲಿ ಬ್ರೋಕರ್ ಮೂಲಕ ಈ ನಾಯಿಯನ್ನು ಸತೀಶ್ ಅವರಿಗೆ ಮಾರಾಟ ಮಾಡಲಾಯಿತು. ಕೇವಲ 8 ತಿಂಗಳ ವಯಸ್ಸಿನ ನಾಯಿಮರಿಯಾದರೂ, ಈ ನಾಯಿ ಈಗಾಗಲೇ 75 ಕೆಜಿ ತೂಕವಿದ್ದು, 30 ಇಂಚು ಎತ್ತರವಿದೆ. ಸತೀಶ್ ಅವರು ಒಕಾಮಿಯನ್ನು “ತೋಳದಂತೆ ಕಾಣುವ ಅತ್ಯಂತ ಅಪರೂಪದ ನಾಯಿ ತಳಿ” ಎಂದು ಬಣ್ಣಿಸಿದ್ದಾರೆ. “ಈ ತಳಿಯನ್ನು ಈ ಹಿಂದೆ ಜಗತ್ತಿನಲ್ಲಿ ಮಾರಾಟ ಮಾಡಲಾಗಿಲ್ಲ” ಎಂದು ತಿಳಿಸಿದ್ದಾರೆ.ಒಕಾಮಿಯ ಮೂಲ ತಳಿಗಳಲ್ಲಿ ಒಂದಾದ ಕಕೇಶಿಯನ್ ಶೆಫರ್ಡ್ಸ್ ತಮ್ಮ ಶಕ್ತಿ ಮತ್ತು ರಕ್ಷಣಾತ್ಮಕ ಪ್ರವೃತ್ತಿಗೆ ಹೆಸರುವಾಸಿ. ಈ ನಾಯಿಗಳು ಜಾರ್ಜಿಯಾ, ಅರ್ಮೇನಿಯಾ, ಅಜೆರ್ಬೈಜಾನ್ ಮತ್ತು ರಷ್ಯಾದ ಕೆಲವು ಭಾಗಗಳಂತಹ ಶೀತ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತವೆ.ತೋಳಗಳಂತಹ ಪರಭಕ್ಷಕಗಳಿಂದ ಜಾನುವಾರುಗಳನ್ನು ರಕ್ಷಿಸಲು ಇವುಗಳನ್ನು ಹೆಚ್ಚಾಗಿ ಕಾವಲು ನಾಯಿಗಳಾಗಿ ಬಳಸಲಾಗುತ್ತದೆ.

See also  ಅಪಘಾತದಲ್ಲಿ ಹೊತ್ತಿ ಉರಿದ ಕಾರು, ಇಬ್ಬರು ಸಜೀವ ದಹನ..! ಪಲ್ಟಿಯಾದ ಬಸ್..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget