ವಿಡಿಯೋವೈರಲ್ ನ್ಯೂಸ್

19ರ ವಯಸ್ಸಿನಲ್ಲೇ 30 ಪ್ರಿಯಕರರೊಂದಿಗೆ ರಾಸಲೀಲೆ..! ಅಷ್ಟಕ್ಕೂ ಯಾರೀಕೆ..?

231

ನ್ಯೂಸ್ ನಾಟೌಟ್: ಓರ್ವ ವ್ಯಕ್ತಿಗೆ ತನ್ನ ಜೀವನದಲ್ಲಿ ಒಬ್ಬರೇ ಜೀವನ ಸಂಗಾತಿ ಎನ್ನುವುದು ಭಾರತೀಯ ಸಂಸ್ಕೃತಿ. ಆದರೆ ಈ ಹಿಂದೆ ರಾಜರು ತಮಗೆ ಇಷ್ಟವಾದ ಮಹಿಳೆಯನ್ನು ಕರೆತಂದು ಮದುವೆಯಾಗುತ್ತಿದ್ದರು. ಇಲ್ಲೊರ್ವ ರಾಣಿ ಬರೋಬ್ಬರಿ 30 ಮಂದಿ ಪುರುಷರೊಂದಿಗೆ ಪ್ರೇಮಾಯಣ ನಡೆಸಿದ್ದಳೆ ಎನ್ನಲಾಗಿದೆ. ಚಕ್ರವರ್ತಿಯಾದ ತನ್ನ ಸಹೋದರನಿಗೆ ಹೇಳಿ ತನ್ನ ರಾಸಲೀಲೆಗಳನ್ನು ನಡೆಸಿದ್ದಳಂತೆ, ಅದು 19 ವರ್ಷ ವಯಸ್ಸಿನಲ್ಲೇ ಮಾಡಿದ್ದಳಂತೆ.

ಇದಕ್ಕೆ ಸಂಬಂಧಿಸಿದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಆಕೆ ಚೀನಾಗೆ ಸೇರಿದ ಯುವರಾಣಿ ಷಾನ್ಯಿನ್. ಆಕೆಯನ್ನು ಪ್ರಿನ್ಸೆಸ್ ಕುಯಿಜಿ ಅಂತಲೂ ಕರೆಯುತ್ತಾರೆ, ಲಿಯು ಸಾಂಗ್ ರಾಜ ಮನೆತನಕ್ಕೆ ಸೇರಿದ್ದ ಯುವರಾಣಿಯಾಗಿದ್ದಳು. ಚಕ್ರವರ್ತಿ ಕ್ಸಿಯಾವುಪುತ್ರಿ. ಷಾನ್ಯಿನ್ ತನ್ನ ತಂದೆಯ ಆಳ್ವಿಕೆಯಲ್ಲಿ ಲಿಯು ವಂಶದ ರಾಜಕುಮಾರಿಯಾಗಿ ಆಯ್ಕೆಯಾಗಿದ್ದಳು. ಹೀ ಯಾನ್‌ನ ರಾಜಕುಮಾರ ಹೀ ಯಾನ್​​ ನನ್ನು ಮದುವೆಯಾಗಿದ್ದಳು. ಆದರೆ 464 AD ರಾಜಕುಮಾರಿ ಷಾನ್ಯಿನ್ ಅವರ ತಂದೆ ಕ್ಸಿಯಾವೊವು ನಿಧನರಾಗಿದ್ದರು. ತದನಂತರ, ಷಾನ್ಯಿನ್ ಅವರ ಕಿರಿಯ ಸಹೋದರ ಲಿಯು ಜಿಯೆ (Liu Ziye) ರಾಜ ಆದರು. ಆಗ ಆತನಿಗೆ ಕೇವಲ 10 ವರ್ಷ ವಯಸ್ಸಾಗಿತ್ತು.

ಲಿಯು ಜಿಯೆ ಅನ್ನು ಚಕ್ರವರ್ತಿ ಕಿಯಾನ್ಫೀ ಎಂದೂ ಕರೆಯುತ್ತಾರೆ. ಆ ಸಮಯದಲ್ಲಿ ಲಿಯು ಆರಮನೆಯಲ್ಲಿ 10,000 ಕ್ಕೂ ಹೆಚ್ಚು ಮಹಿಳೆಯರಿದ್ದರಂತೆ. ರಾಜ ಆಗಿದ್ದ ತಮ್ಮ ಹಲವು ಮಹಿಳೆಯರೊಂದಿಗೆ ತನ್ನ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದನಂತೆ. ಇದರಿಂದ ಅಸೂಯೆಗೆ ಒಳದಾದ ಷಾನ್ಯಿನ್, ಸಹೋದರನೊಂದಿಗೆ ಜಗಳ ಮಾಡಿದ್ದಳಂತೆ. ಇದರಿಂದ ಆತ ತನ್ನ ಸಹೋದರಿಗೆ 30 ಮಂದಿ ಪ್ರಿಯಕರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದ ಎಂದು ಹೇಳಲಾಗಿದೆ. 30 ಮಂದಿ ಪ್ರಿಯಕರನ್ನು ನೀಡಿದ ಬಳಿಕವೂ ಷಾನ್ಯಿನ್ ಸಂತೃಪ್ತಿಗೊಂಡಿರಲಿಲ್ಲವಂತೆ ಎಂದು ಉಲ್ಲೇಖಿಸಲಾಗಿದೆ. ಈಗ ಈ ಇತಿಹಾಸದ ಕಥೆಯ ವಿಡಿಯೋ ವೈರಲ್ ಆಗುತ್ತಿದೆ.

See also  ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ದಾಳಿ..! ಹುಲಿಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ವೇಳೆ ಘಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget