ಕ್ರೈಂ

8 ತಿಂಗಳ ಮಗುವಿನ ಗಂಟಲಲ್ಲಿ ತೆಂಗಿನ ಕಾಯಿ ತುಂಡು..!ಮುಂದೇನಾಯ್ತು?ವೈದ್ಯರು ಹೇಳಿದ್ದೇನು?

234

ನ್ಯೂಸ್ ನಾಟೌಟ್ :ಚಿಕ್ಕ ಮಕ್ಕಳೆದುರು ಏನಾದರೊಂದು ವಸ್ತುವನ್ನಿಟ್ಟರೆ ಅವು ನೇರವಾಗಿ ಬಾಯಿಗೆ ಹಾಕಿಕೊಳ್ಳುತ್ತವೆ.ಇತ್ತೀಚೆಗೆ ಚಕ್ಕುಲಿ ಗಂಟಲಲ್ಲಿ ಸಿಲುಕಿ ಮಗುವೊಂದು ದುರಂತ ಅಂತ್ಯ ಕಂಡಿರುವ ಘಟನೆ ವರದಿಯಾಗಿತ್ತು.ಬಾಟಲಿ ಮುಚ್ಚಳ ಗಂಟಲಲ್ಲಿ ಸಿಲುಕಿ ಕೊನೆಯುಸಿರೆಳೆದ ಘಟನೆ ಇತ್ತೀಚೆಗೆ ವರದಿಯಾಗಿತ್ತು.ಹೀಗೆ ಇಲ್ಲೊಂದು ಮಗುವಿನ ಗಂಟಲಲ್ಲಿ ತೆಂಗಿನ ಕಾಯಿಯ ತುಂಡೊಂದು ಸಿಲುಕಿ ಮಗು ಒದ್ದಾಡುತ್ತಿತ್ತು.ಮುಂದೇನಾಯ್ತು ಅನ್ನೋದಕ್ಕೆ ಈ ವರದಿ ಓದಿ..

ವಿಪರೀತವಾಗಿ ಅಳುತ್ತಿರುವ ಮಗುವನ್ನು ಕಂಡು ಪೋಷಕರಲ್ಲಿ ಸಹಜವಾಗಿ ಗೊಂದಲ ಉಂಟಾಗಿದೆ.ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಎರಡು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಏನೂ ಪ್ರಯೋಜನವಾಗಿಲ್ಲ.ಕೊನೆಗೆ  ಮತ್ತೊಂದು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದ್ದು, ಮಗುವಿನ ಗಂಟಲಿನಲ್ಲಿ ಏನೋ ಸಿಲುಕಿರುವುದು ಕಂಡುಬಂದಿದೆ. ವೈದ್ಯರು ಸುಮಾರು ಎರಡೂವರೆ ಗಂಟೆಗಳ ಕಾಲ ಶ್ರಮಿಸಿ ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ತೆಂಗಿನ ಕಾಯಿ ತುಂಡನ್ನು ಹೊರತೆಗೆದಿದ್ದಾರೆ. ಮಗುವಿನ ಶ್ವಾಸನಾಳದ ಬಳಿ ತೆಂಗಿನ ಕಾಯಿ ತುಂಡು ಸಿಕ್ಕಿಹಾಕಿಕೊಂಡಿತ್ತು. ವೈದ್ಯರ ತಂಡ ಎಚ್ಚರಿಕೆಯಿಂದ ಕಾಯಿಯನ್ನು ಹೊರತೆಗೆದಿದ್ದಾರೆ. ಈ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ಮಗು ಎಂದು ಗುರುತಿಸಲಾಗಿದೆ. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸ್ವಲ್ಪ ವಿಳಂಬ ಮಾಡಿದ್ದರೆ ಮಗು ಪ್ರಾಣಕ್ಕೆ ಕಂಟಕವಾಗುತ್ತಿತ್ತು ಎಂದು ಎನ್ನುತ್ತಾರೆ ವೈದ್ಯರು. ಆಸ್ಪತ್ರೆ ಅಧೀಕ್ಷಕ ಡಾ.ಜೆ.ಕೆ.ರೈಲ್ವಾನಿ ಮಾತನಾಡಿ, ಡಿ.29ರಂದು ಬೆಳಗ್ಗೆ ಜಯನಗರ ಪಟ್ಟಣದ ನಿವಾಸಿ ರಾಮದೇವ್ ಅವರ 8 ತಿಂಗಳ ಮಗ ಆದಿತ್ಯನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು.ಮಗುವಿನ ಸ್ಥಿತಿಯನ್ನು ಪರೀಕ್ಷಿಸಲು ಎಕ್ಸ್-ರೇ ಮಾಡಿಸಿದಾಗ ಮಗುವಿನ ಗಂಟಲಲ್ಲಿ ಏನೋ ಸಿಲುಕಿಕೊಂಡಿರುವುದು ತಿಳಿದುಬಂದಿದೆ. ಬಳಿಕ ಆಪರೇಷನ್‌ಗೆ ಸಿದ್ಧತೆ ನಡೆಸಿದ್ದು, ಮಗುವಿನ ಜೀವ ಉಳಿಸುವ ಜವಾಬ್ದಾರಿಯನ್ನು ಡಾ.ಉಷಾ, ಡಾ.ಅನುಪಮ್ ಮಿಂಜ್, ಡಾ.ಪ್ರಿನ್ಸಿ, ಅನಸ್ತೇಶಿಯಾ ವಿಭಾಗದ ಡಾ.ಶಿವಾಂಗಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ವೈದ್ಯರಿಗೆ ವಹಿಸಲಾಯಿತು. ಆದರೆ ಆಪರೇಷನ್ ವೇಳೆ ಅರಿವಳಿಕೆ ನೀಡುವುದು ಸವಾಲಾಗಿ ಪರಿಣಮಿಸಿದೆ.8 ತಿಂಗಳ ಮಗು ಆದಿತ್ಯನನ್ನು ಪ್ರಜ್ಞೆಗೆ ತರಲು ವೈದ್ಯರು ಹರಸಾಹಸ ಪಡಬೇಕಾಯಿತು. ಕೊನೆಗೂ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

See also  ಆ್ಯಂಬುಲೆನ್ಸ್‌ನಲ್ಲಿ ಶವ ಸಾಗಿಸುತ್ತಿದ್ದ ವೇಳೆ ಎದ್ದು ಕುಳಿತ ಮೃತ ವ್ಯಕ್ತಿ!!ಅಂತ್ಯಸಂಸ್ಕಾರಕ್ಕೆ ರೆಡಿ ಮಾಡಿದ್ದ ಕುಟುಂಬಸ್ಥರು,ಶೋಕದ ಬ್ಯಾನರ್ ಹಾಕಿದ್ದ ಸ್ನೇಹಿತರು!!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget