ದೇಶ-ಪ್ರಪಂಚವೈರಲ್ ನ್ಯೂಸ್

ಕುಳಿತಲ್ಲೇ ಕೋಟಿಗಟ್ಟಲೆ ಸಂಪಾದಿಸುತ್ತೆ ʼಶ್ವಾನʼ..!ಈ ಶ್ವಾನದ ಸಂಪಾದನೆ ನೋಡಿದ್ರೆ ಮನುಷ್ಯರೇ ಬೆರಗಾಗಬೇಕು..!ಅಷ್ಟಕ್ಕೂ ಈ ನಾಯಿ ಸಂಪಾದನೆ ಮಾಡೋದೇಗೆ? ಇಲ್ಲಿದೆ ವರದಿ…

ನ್ಯೂಸ್ ನಾಟೌಟ್ : ಈಗೇನಿದ್ದರೂ ಇಂಟರ್‌ ನೆಟ್‌ ಕಾಲ. ಸೋಶಿಯಲ್ ಮೀಡಿಯಾ ಎಷ್ಟು ಪವರ್‌ಫುಲ್ ಆಗಿದೆಯೆಂದರೆ ಆ ಜಗತ್ತು ಇಲ್ಲದೇ ಜೀವನ ನಡೆಸೋದೇ ಕಷ್ಟವಾಗಿ ಬಿಟ್ಟಿದೆ. ಪ್ರತಿಯೊಂದು ಕ್ಷಣದಲ್ಲೂ ಕೂಡ ಹೊಸ ಹೊಸ ಅಪ್‌ ಡೇಟ್ಸ್‌ ಗಳು ಬರ್ತಾನೆ ಇರುತ್ತವೆ.ನಾವು ಇಲ್ಲಿಯವರೆಗೆ ಕೆಲವರು ಕೋಟಿಗಟ್ಟಲೆ ಸಂಪಾದನೆ ಮಾಡುತ್ತಾರೆ ಅನ್ನೋದನ್ನು ಕೇಳಿದ್ದವು.ಇದೀಗ ನಾಯಿ ಕೂಡ ಕೋಟಿಗೊಟ್ಟಲೆ ಸಂಪಾದನೆ ಮಾಡುತ್ತೆ ಅಂದ್ರೆ ನೀವು ನಂಬಲೇ ಬೇಕು.

ಪ್ರಾಣಿಗಳ ವೀಡಿಯೊಗಳನ್ನು ಅತೀ ಹೆಚ್ಚು ಇಷ್ಟ ಪಡುವವರು ಇದ್ದಾರೆ.ಅದರಲ್ಲಿ ಇಲ್ಲೊಂದು ಶ್ವಾನ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿದೆ. ಪ್ರಾಣಿಗಳ ಜಗತ್ತಿನಲ್ಲಿ, ನಾವು ನಂಬಲಾಗದ ಮತ್ತು ಎಂದೂ ನೋಡಿರದ ಅನೇಕ ಪ್ರಕರಣಗಳನ್ನು ಇಲ್ಲಿ ಕಾಣುತ್ತೇವೆ.ಕೆಲಸವೇ ಸಿಗೋದಿಲ್ಲ ಅನ್ನೋ ಈ ಕಾಲದಲ್ಲಿ ಇಲ್ಲೊಂದು ಶ್ವಾನವೊಂದು ಕೂತಲ್ಲೆ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯ ಹೆಸರು ಬ್ರಾಡಿ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಆದಾಯ ಕೋಟಿಯಲ್ಲಿದೆ ಎನ್ನಲಾಗಿದೆ. ಇದರ ವಯಸ್ಸು ಕೇವಲ 4 ವರ್ಷ, ಆದರೆ ಇಲ್ಲಿಯವರೆಗೆ ಈ ನಾಯಿ ಒಟ್ಟು ಒಂದು ಮಿಲಿಯನ್ USD ಅಂದರೆ ರೂ. 8 ಕೋಟಿ 29 ಲಕ್ಷ ಗಳಿಸಿದೆ.

ಈ ಬ್ರೂಡಿ ನಾಯಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಖಾತೆಯನ್ನು ಹೊಂದಿದೆ. ಇದು 6 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 60 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಬ್ರಾಡಿ ಅಧಿಕೃತ Instagram ಖಾತೆಯನ್ನು ಸಹ ಹೊಂದಿದೆ. ಇದು 1 ಮಿಲಿಯನ್‌ಗಿಂತಲೂ ಹೆಚ್ಚು ಅಂದರೆ 10 ಲಕ್ಷ ಅನುಯಾಯಿಗಳನ್ನು ಹೊಂದಿದೆ. ಈ ನಾಯಿ ಹಲವು ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದೆ. 

ಬ್ರಾಡಿಯ ಮಾಲೀಕ ಕ್ಲಿಫ್. ಈ ನಾಯಿಯ ಮಾಲೀಕ ತನ್ನನ್ನು ತನ್ನ ನಾಯಿಯ ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದಾನೆ. ಜನರು ಸಾಮಾಜಿಕ ಮಾಧ್ಯಮದಲ್ಲಿ ಬ್ರಾಡಿ ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ಇಷ್ಟಪಡುತ್ತಾರೆ. ಇದರೊಂದಿಗೆ ಇಂದು ಬ್ರಾಡಿ ಕೋಟಿಗಟ್ಟಲೆ ಸಂಪಾದಿಸುತ್ತಾನೆ. ಶ್ವಾನದ ವಿಡಿಯೋವನ್ನು brodiethatdoodandfloofbybrodie ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗುತ್ತದೆ.

ಬ್ರಾಡಿ ಸಂಪಾದನೆ ಕೋಟಿಗಟ್ಟಲೆ ಇದ್ದರೂ ಮನೆಯಲ್ಲಿ ಸುಮ್ಮನಿರುವುದಿಲ್ಲ. ಅದಕ್ಕೆ ಹೊಸ ಕೆಲಸವೂ ಸಿಕ್ಕಿದೆ. ಈಗ ಈ ಗೋಲ್ಡನ್ ಡೂಡಲ್ ನಾಯಿಯು ಮಿಯಾಮಿ ಬೀಚ್ ಪೊಲೀಸ್ ಇಲಾಖೆಯ ಭಾಗವಾಗಿದೆ. ಇತ್ತೀಚೆಗಷ್ಟೇ ಈ ಶ್ವಾನ ಪೊಲೀಸ್ ಪಡೆಯಲ್ಲಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿದೆ. ಈಗ ಈ ನಾಯಿ ಕ್ರಿಸ್‌ಮಸ್ ಸಂದರ್ಭದಲ್ಲಿ ಮಕ್ಕಳಿಗೆ ಉಡುಗೊರೆ ನೀಡಲು ಪೊಲೀಸರೊಂದಿಗೆ ಬರಲಿದೆ. ನಾಯಿಯ ಮಾಲೀಕರು ಈ ಕುರಿತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Related posts

ಒಡ ಹುಟ್ಟಿದ ಸಹೋದರಿಯನ್ನೇ ಗರ್ಭವತಿಯನ್ನಾಗಿಸಿದ ಸಹೋದರ..! ರಕ್ಷಾ ಬಂಧನ ದಿನದಂದೇ ಅಣ್ಣನಿಗೆ 40 ಸಾವಿರ ರೂ. ದಂಡ, 20 ವರ್ಷ ಜೈಲು ಶಿಕ್ಷೆ ಪ್ರಕಟಿಸಿ ಕಣ್ಣೀರಿಟ್ಟ ನ್ಯಾಯಾಧೀಶ..!

ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡವರಿಗೆ ಹೆಚ್ಚಾಗುತ್ತಿದೆ ಆತಂಕ..! ಕೋರ್ಟ್ ಮುಂದೆ ಸತ್ಯ ಒಪ್ಪಿಕೊಂಡ ಸಂಸ್ಥೆ..!ವೈದ್ಯರು ಈ ಬಗ್ಗೆ ಹೇಳಿದ್ದೇನು..?

ಆಧುನಿಕ ಸುಳ್ಯದ ಸೃಷ್ಟಿಕರ್ತ ಕುರುಂಜಿ ವೆಂಕಟ್ರಮಣ ಗೌಡರ ಬದುಕಿನೊಳಗೊಂದು ಇಣುಕುನೋಟ, ಅಜ್ಞಾನದ ಕತ್ತಲೆ ಕಳೆಯಲು ಬಂದ ಶಿಕ್ಷಣ ಬ್ರಹ್ಮ ಕೆ.ವಿ.ಜಿ