ನ್ಯೂಸ್ ನಾಟೌಟ್: ಹೆಣ್ಣು ಮಕ್ಕಳ ಪಾಲಿಗೆ ಮದುವೆ ಅನ್ನೋದು ಸಾವಿರಾರು ಕನಸಿನ ಗೋಪುರ. ಮದುವೆ ದಿನ ನಾನು ಹಾಗಿರಬೇಕು, ನನ್ನ ಹೇರ್‌ಸ್ಟೈಲ್ ಎಲ್ಲರು ಮೆಚ್ಚುವಂತಿರಬೇಕು. ಉದ್ದದ ಜಡೆ ಇರಬೇಕು ಅಂತೆಲ್ಲ ಕನಸು ಕಂಡಿರುತ್ತಾರೆ. ಆದರೆ ಇಲ್ಲೊಬ್ಬಳು ಯುವತಿ ಮದುವೆ ದಿನವೇ ತನ್ನ ಚೆಂದದ ಕೂದಲನ್ನೇ ಕತ್ತರಿಸಿಕೊಂಡಿದ್ದಾಳೆ. ಕಾರಣ ಕೇಳಿದ್ರೆ ನಿಮಗೂ ಖಂಡಿತ ಅಚ್ಚರಿ ಆಗುತ್ತೆ. ಈಕೆಯ ಉದ್ದೇಶ ಎಲ್ಲ ಕಡೆ ವೈರಲ್ ಆಗಿದೆ.
ತನ್ನ ಮದುವೆಯ ರಿಸೆಪ್ಷನ್ ಕಾರ್ಯಕ್ರಮಕ್ಕೂ ಮೊದಲು ಯುವತಿಯೊಬ್ಬಳು ಹೇರ್ ಕಟ್ ಮಾಡಿಸಿಕೊಂಡಿದ್ದಾಳೆ. ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿದ್ದಾಳೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.