ಕರಾವಳಿಪುತ್ತೂರುಬೆಂಗಳೂರುಮಂಗಳೂರುರಾಜಕೀಯವಿಡಿಯೋವೈರಲ್ ನ್ಯೂಸ್

ಪುತ್ತೂರು: ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಮತ್ತು ಮಹಿಳೆಯ ಸಂಭಾಷಣೆ ವೈರಲ್‌..? ಇಲ್ಲಿದೆ ಸಂಚಲನ ಸೃಷ್ಟಿಸಿದ ಆಡಿಯೋ

215

ನ್ಯೂಸ್ ನಾಟೌಟ್: ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಹಾಗೂ ಮಹಿಳೆಯೋರ್ವರ ನಡುವಿನ ರಾಜಕೀಯ ವಿಚಾರಕ್ಕೆ ಸಂಬಂಧಿಸಿರುವ ದೂರವಾಣಿ ಸಂಭಾಷಣೆ ಎನ್ನಲಾದ ಆಡಿಯೋ ತುಣುಕನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸಂಚಲನ ಸೃಷ್ಟಿಸಿದೆ.

ಸುಮಾರು 7.46 ನಿಮಿಷದ ಸಂಭಾಷಣೆ ಇದಾಗಿದ್ದು, ಪುತ್ತಿಲ ಅವರ ರಾಜಕೀಯ ನಿಲುವಿನ ಬಗ್ಗೆ ಮಹಿಳೆ ಗಂಭೀರ, ಹಾಸ್ಯಭರಿತ ಧಾಟಿಯಲ್ಲಿ ಪ್ರಶ್ನಿಸಿದ್ದು, ಇದಕ್ಕೆ ಪುತ್ತಿಲ ಎಂದು ಹೇಳಲಾಗಿರುವ ವ್ಯಕ್ತಿ ಜವಾಬು ನೀಡುತ್ತಿರುವುದು ದಾಖಲಾಗಿದೆ.
ಪುತ್ತಿಲ ಪರಿವಾರ ತೊರೆದು ಬಿಜೆಪಿ ಸೇರಿದ ಅನಂತರದ ರಾಜಕೀಯ ಬೆಳವಣಿಗೆಯ ಬಗ್ಗೆ ಇಲ್ಲಿ ಚರ್ಚೆ ನಡೆದಿದೆ. ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಇದರರ್ಥ ಭವಿಷ್ಯದಲ್ಲಿ ಎಂಎಲ್‌ಎ ಟಿಕೆಟ್‌ ಸಿಗುವುದಿಲ್ಲ. ಇನ್ನೂ ಬ್ಯಾನರ್‌ ಕಟ್ಟಿಕೊಂಡೇ ಕೂರಬೇಕು ಹೇಳಿದ್ದು, ನಾನು ಆಶಾವಾದಿ, ನೋಡುವ ಯಾರ ಕಥೆ ಏನೂ ಅಂತಾ ಎಂದು ಉತ್ತರಿಸಲಾಗಿದೆ.

ಪಕ್ಷದ ಜವಾಬ್ದಾರಿ ಸಿಗದೆ ಕಚೇರಿಗೆ ಕಾಲಿಡಲ್ಲ ಎಂದೇಳಿ ನಾಚಿಕೆಗೆಟ್ಟಿದ್ದೀರಿ ಎಂದು ಮಹಿಳೆ ಹೇಳಿದ್ದು, ರಾಜಕೀಯ ಅಂದ್ರೆ ನಾಚಿಕೆ, ಮಾನ ಮರ್ಯಾದೆ ಎರಡೂ ಬಿಡಬೇಕು ಎಂಬ ಉತ್ತರ ಇನ್ನೊಂದು ಕಡೆಯಿಂದ ಬಂದಿದೆ. ಪುತ್ತಿಲ ಪರಿವಾರದ ಪ್ರಸನ್ನ ಮಾರ್ತ ಅವರಿಗೆ 2 ತಿಂಗಳ ಹಿಂದೆಯೇ ಸ್ಥಾನ ಮಾನ ಸಿಕ್ಕಿದೆ ಎಂದು ಮಹಿಳೆ ಹೇಳಿ ದಾಗ, ಅವರಿಗೆ ನಿರೀಕ್ಷೆ ಪಡೆಯದ ಅವಕಾಶ ಸಿಕ್ಕಿದೆ. 2 ತಿಂಗಳ ಹಿಂದೆ ಫಿಕ್ಸ್‌ ಆಗಿಲ್ಲ. ಅದು ನಿಮಗೆ ಹೇಳಿದವರು ಫಿಕ್ಸ್‌ ಮಾಡಿರಬಹುದು ಎಂದು ಉತ್ತರಿಸಿದ್ದಾರೆ.3.5 ಕೋ.ರೂ. ದುಡ್ಡು ಪಡೆದಿದ್ದಾರೆ ಎನ್ನುವ ಆರೋಪ ಹೊರಿಸಿದ್ರು ಎಂದಾಗ ಅದಕ್ಕುತ್ತರಿಸಿದ ಮಹಿಳೆ, ದುಡ್ಡು ಪಡೆದದ್ದು ನಿಜವಲ್ಲವೇ ಎಂದು ನಗುತ್ತಾ ಪ್ರಶ್ನಿಸುತ್ತಿರುವುದು ಕಂಡುಬಂದಿದೆ.

Click

https://newsnotout.com/2024/08/kasaragodu-govt-kananda-news-engineer-viral-news/
https://newsnotout.com/2024/08/facebook-post-kannada-news-bangladesh-video-kannada-news-agent/
https://newsnotout.com/2024/08/mysore-note-print-office-kannada-news-employement/
See also  ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ಭ್ರಷ್ಟರ ಚಳಿ ಬಿಡಿಸಿದ ಎಸಿಬಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget