ನ್ಯೂಸ್ ನಾಟೌಟ್: ನೈಜೀರಿಯಾದ ಈ ಹಳ್ಳಿಯಲ್ಲಿ ಪುರುಷರು ಹಾಗೂ ಮಹಿಳೆಯರು ಬೇರೆ-ಬೇರೆ ಭಾಷೆಗಳನ್ನು ಮಾತನಾಡುತ್ತಾರೆ. ಉಬಾಂಗ್ ನಲ್ಲಿನ ರೈತ ಸಮುದಾಯದ ಪುರುಷರು ಹಾಗೂ ಮಹಿಳೆಯರಿಬ್ಬರಿಗೂ ಬೇರೆ ಬೇರೆ ಭಾಷೆ ಇದ್ದು, ಒಂದೇ ಊರಲ್ಲಿ ಮಹಿಳೆಯರು ಮತ್ತು ಪುರುಷರು ತಮ್ಮದೇ ಆದ ಭಾಷೆಯೊಂದಿಗೆ ವ್ಯವಹರಿಸುತ್ತಾರೆ ಎನ್ನಲಾಗಿದೆ.
ಇಬ್ಬರೂ ದೈನಂದಿನ ವಸ್ತುಗಳಿಗೆ ಒಂದೇ ಪದಗಳನ್ನು ಬಳಸುತ್ತಾರಾದರೂ, ಇನ್ನಿತರೆ ವಿಷಯಗಳಲ್ಲಿ ಇವರ ಭಾಷೆ ಸಂಪೂರ್ಣ ಬೇರೆಯದ್ದಾಗಿದೆ. ಉದಾಹರಣೆಗೆ ಮಹಿಳೆಯರು ಉಡುಗೆಗೆ “ಕಕೆಟ್” ಎಂದರೆ, ಪುರುಷರು “ಎನ್ಕಿ” ಅಂತಾ ಕರೆಯುತ್ತಾರೆ, ಶೂಗಳಿಗೆ ಮಹಿಳೆಯರು “ಅಬುವೊ”, ಪುರುಷರು “ಒಕೆಪೋಕ್” ಎನ್ನುತ್ತಾರೆ.
ಮಕ್ಕಳು ತಮ್ಮ ಮೊದಲ ಕೆಲವು ವರ್ಷಗಳನ್ನು ತಾಯಿ ಜೊತೆ ಕಳೆಯುವುದರಿಂದ ಪುಟ್ಟ ಮಕ್ಕಳು, ಲಿಂಗವನ್ನು ಲೆಕ್ಕಿಸದೆ, ಆರಂಭದಲ್ಲಿ ಮಹಿಳೆಯರ ಭಾಷೆಯನ್ನು ಕಲಿಯುತ್ತಾರೆ. ಐದು ಅಥವಾ ಆರು ವರ್ಷ ವಯಸ್ಸಿನ ಸುಮಾರಿಗೆ, ಹುಡುಗರು “ಭಾಷಾ ಬದಲಾವಣೆ” ಎಂದು ಕರೆಯುವ ಪ್ರಕ್ರಿಯೆಗೆ ಒಳಗಾಗುತ್ತಾರೆ.
ತಂದೆ, ಚಿಕ್ಕಪ್ಪ ಮತ್ತು ಅಣ್ಣಂದಿರಿಂದ ಪುರುಷ ಪದಗಳನ್ನು ಕಲಿಯುತ್ತಾ ಹೋಗುತ್ತಾರೆ. ಕ್ರಮೇಣ ಹುಡುಗರು ಪುರುಷರ ಶಬ್ದಕೋಶವನ್ನು ಕರಗತ ಮಾಡಿಕೊಳ್ಳುತ್ತಾರೆ. ಹಾಗಾಗಿ, ಹದಿಹರೆಯದ ಸಮಯದಲ್ಲಿ ಇವರಿಬ್ಬರ ಭಾಷೆ ಸಂಪೂರ್ಣ ಬದಲಾಗಿರುತ್ತದೆ. ಅದಾಗ್ಯೂ ಮಹಿಳೆಯರ ಭಾಷೆ ಪುರುಷರಿಗೆ, ಪುರುಷರ ಭಾಷೆ ಮಹಿಳೆಯರಿಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ.
ದೇವರು ಮೂಲತಃ ಉಬಾಂಗ್ ಗೆ ಮೂರು ಭಾಷೆಗಳನ್ನು ಕೊಟ್ಟಿದ್ದಾನೆ ಎಂಬ ನಂಬಿಕೆಯ ಕಥೆಗಳು ಭಾಷೆ ವ್ಯತ್ಯಾಸದ ಬಗ್ಗೆ ಇಲ್ಲಿನ ಜನರು ಹೇಳುತ್ತಾರೆ. ಈ ಮೂರು ಭಾಷೆಗಳಲ್ಲಿ ಒಂದು ಪುರುಷರಿಗೆ, ಒಂದು ಮಹಿಳೆಯರಿಗೆ ಮತ್ತು ಇನ್ನೊಂದು ಕಣ್ಮರೆಯಾಗಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಮತ್ತೊಂದು ದಂತಕಥೆಯ ಪ್ರಕಾರ, ಈ ವಿಭಿನ್ನ ಭಾಷೆ ಯುದ್ಧಕಾಲದಲ್ಲಿ, ಶತ್ರು ಕದ್ದಾಲಿಕೆ ಮಾಡುವವರು ಭಾಷೆ ಅರಿಯದೇ ಗೊಂದಲಕ್ಕೊಳಗಾಗುತ್ತಿದ್ದರು. ಇದು ಯುದ್ಧದ ಅನಾಹುತಗಳನ್ನು ತಡೆದಿದೆ ಎನ್ನಲಾಗಿದೆ.
ಈ ಗ್ರಾಮಕ್ಕೆ ಬೇರೆ ಬೇರೆ ಭಾಷೆ ಎಂದೂ ಸಹ ದ್ವಂದ್ವ ಉಂಟು ಮಾಡಿಲ್ಲ ಎನ್ನುತ್ತಾರೆ ಹಳ್ಳಿಗರು. ಪುರುಷರು ಮತ್ತು ಮಹಿಳೆಯರು ತಮ್ಮ ಭಾಷೆಗಳನ್ನು ತಮಾಷೆಯಾಗಿ ತೆಗೆದುಕೊಳ್ಳುತ್ತಾರೆ. ಈ ಭಾಷೆಯು ನಮ್ಮ ಮಧ್ಯೆ ಅನ್ಯೋನ್ಯತೆ ಬೆಳೆಸಿದೆ ಹೊರತು ಬಿರುಕುಗಳನ್ನು ಮೂಡಿಸಿಲ್ಲ ಎನ್ನುತ್ತಾರೆ.
ಕಾಂತಾರ 1 ಬಿಡುಗಡೆ ಅಕ್ಟೋಬರ್ 2ರಂದೇ..ಚಿತ್ರ ರಿಲೀಸ್ ಬಗ್ಗೆ ಸ್ಪಷ್ಟನೆ ನೀಡಿದ ಚಿತ್ರತಂಡ