ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಗ್ರಾಮಸ್ಥರೆದುರು ಶೂಗಳ ಹಾರ ಹಾಕಿ ಅವಮಾನಿಸಿದ್ದ ವ್ಯಕ್ತಿಯನ್ನು 9 ವರ್ಷದ ಬಳಿಕ ಕೊಂದ ಆರೋಪಿ..! ಇಲ್ಲಿದೆ ಭೀಕರ ಸೇಡಿನ ಕಥೆ..!

ನ್ಯೂಸ್‌ ನಾಟೌಟ್: ಸುಮಾರು ಒಂಬತ್ತು ವರ್ಷಗಳ ಹಿಂದೆ ಶೂಗಳ ಮಾಲೆ ಮಾಡಿ ಹಾರ ಹಾಕಿ ಅವಮಾನ ಮಾಡಿದ್ದಕ್ಕೆ ಪ್ರತೀಕಾರವಾಗಿ ಆತನನ್ನು ಹತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಆರೋಪಿ ಮನ್ವೀರ್‌ ಎಂದು ಗುರುತಿಸಲಾಗಿದೆ. ಆತನೇ ಹೇಳಿರುವ ಪ್ರಕಾರ, “ಘನಶ್ಯಾಮ್‌ ಸೈನಿ ಎಂಬಾತ ಸುಮಾರು 9 ವರ್ಷಗಳ ಹಿಂದೆ ತನ್ನ ಸೊಸೆಗೆ ಕಿರುಕುಳ ನೀಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಶೂಗಳ ಹಾರ ಕುತ್ತಿಗೆಯಲ್ಲಿ ಧರಿಸುವಂತೆ ಮಾಡಿ, ಅವಮಾನಿಸಿದ್ದ ಎಂದು ಹೇಳಿಕೊಂಡಿದ್ದಾನೆ. ಕಿರುಕುಳ ನೀಡಿದ್ದ ಎಂದು ಆರೋಪಿಸಿದ್ದ ಘನಶ್ಯಾಮ್‌ ತನ್ನ ಮನೆಯಲ್ಲಿ ಸಮುದಾಯದ ಸದಸ್ಯರ ಜೊತೆ ಪಂಚಾಯ್ತಿ ಕರೆದಿದ್ದ. ಅಲ್ಲಿಗೆ ನನ್ನನ್ನು ಕರೆಯಿಸಿ ಸುಳ್ಳು ಆರೋಪ ಹೊರಿಸಿದ್ದ” ಎಂದು ಮನ್ವೀರ್‌ ಆರೋಪಿಸಿದ್ದಾನೆ.

ನಂತರ ಶೂ ಮತ್ತು ಚಪ್ಪಲಿಯಿಂದ ಹೊಡೆದು, ಶೂಗಳ ಹಾರ ಹಾಕಿಸಿ ಅವಮಾನಿಸಿ ಬಿಟ್ಟಿದ್ದರು ಎಂದು ಮನ್ವೀರ್‌ ವಿವರಿಸಿದ್ದಾನೆ. ಈ ಘಟನೆ ನಂತರ ನನಗೆ ಅವಮಾನದಿಂದ ಊರಿನಲ್ಲಿ ವಾಸವಾಗಿರಲು ಸಾಧ್ಯವಾಗಿಲ್ಲ. ಪ್ರತಿಯೊಬ್ಬರು ನನಗೆ ತಮಾಷೆ ಮಾಡಿ ಅವಮಾನ ಮಾಡುತ್ತಿದ್ದರು.

ಅವಮಾನದಿಂದ ನೊಂದು ಪಕ್ವಾರಾ ಗ್ರಾಮದಿಂದ ರಾಜಸ್ಥಾನಕ್ಕೆ ತೆರಳಿ, ಅಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡಲು ಆರಂಭಿಸಿರುವುದಾಗಿ ಮನ್ವೀರ್‌ ತಿಳಿಸಿದ್ದಾನೆ. ಆದರೆ ನಾನು ಯಾವಾಗ ಊರಿಗೆ ಬರುತ್ತೇನೋ ಆ ಸಂದರ್ಭದಲ್ಲಿ ಸ್ಥಳೀಯರು ಶೂ ಹಾರ ಹಾಕಿದ್ದ ವಿಚಾರ ಪ್ರಸ್ತಾಪಿಸಿ ಅವಮಾನ ಮಾಡುತ್ತಿದ್ದರು ಎಂದಿದ್ದಾನೆ.
“ಘನಶ್ಯಾಮ್‌ ಕೂಡಾ ಸ್ಥಳೀಯರ ಎದುರು ಆ ಘಟನೆ ಪ್ರಸ್ತಾಪಿಸಿ ಅವಮಾನಿಸುತ್ತಿದ್ದ. ಈ ಆರೋಪದಿಂದ ಮದುವೆಯಾಗಲು ಅಡ್ಡಿಯಾಗುತ್ತಿತ್ತು ಎಂದು ಮನ್ವೀರ್‌ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ನನಗೆ ಘನಶ್ಯಾಮ್‌ ಮೇಲೆ ವಿಪರೀತ ದ್ವೇಷ ತುಂಬಿಕೊಂಡಿತ್ತು. ಅದಕ್ಕಾಗಿ ನಾನು ಪ್ರತೀಕಾರ ತೀರಿಸಲು ಆಲೋಚಿಸುತ್ತಿದ್ದೆ. ಅಕ್ಟೋಬರ್‌ 16ರಂದು ಗದ್ದೆಯಲ್ಲಿ ಘನಶ್ಯಾಮ್‌ ಒಬ್ಬಂಟಿಯಾಗಿರುವುದು ಕಂಡು, ಚೂರಿಯಿಂದ ಕುತ್ತಿಗೆಗೆ ಇರಿದು ಬಿಟ್ಟಿದ್ದೆ. ನಂತರ ಮುಖ, ಕೈಗಳು, ಭುಜದ ಮೇಲೆ ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ” ಎಂದು ಆರೋಪಿ ತನಿಖೆಯ ವೇಳೆ ಹೇಳಿಕೊಂಡಿದ್ದಾನೆ.

ಕೊಲೆ ಮಾಡಿದ ನಂತರ ಸಮೀಪದ ಗ್ರಾಮದಲ್ಲಿದ್ದ ಗೆಳೆಯನ ಮನೆಯಲ್ಲಿ ವಾಸವಾಗಿದ್ದ ಆರೋಪಿ ಬಳಿಕ ರಾಜಸ್ಥಾನಕ್ಕೆ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಪೊಲೀಸರು ಬಂಧಿಸಿದ್ದಾರೆ.

Click

https://newsnotout.com/2024/10/bigboss-kannada-radha-hiregowda-kannada-news-viral-task
https://newsnotout.com/2024/10/lawyer-jagadeesh-in-another-program-kannada-news-colors
https://newsnotout.com/2024/10/brain-dead-kannada-news-viral-news-opration-theatre-doctor
https://newsnotout.com/2024/10/life-hole-kannada-news-kannamangala-milk-dairy-viral-news

Related posts

ಕುಡಿದು ಯುವತಿಯಿಂದ ಬಸ್ಸ್ ನೊಳಗೆ ದಾಂಧಲೆ..! ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ

ಕಂದಕದೊಳಗೆ 9 ವರ್ಷದ ಬಾಲಕಿಯ ಮೃತದೇಹ ಪತ್ತೆ..! ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಗ್ರಾಮಸ್ಥರು, ಓಡಿದ ಪೊಲೀಸರು..!

ವಿಟ್ಲ: ಈಡಿ ಅಧಿಕಾರಿಗಳ ವೇಷದಲ್ಲಿ ಬಂದು 30 ಲಕ್ಷ ರೂ. ದೋಚಿದ ಗ್ಯಾಂಗ್..! ಸುಮಾರು 2 ಗಂಟೆಗಳ ಕಾಲ ತನಿಖೆಯ ನಾಟಕ..!