Latestರಾಜಕೀಯರಾಜ್ಯ

ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯಬಾರದು ಎಂದ ಕುಮಾರ್ ಬಂಗಾರಪ್ಪ..! ಸ್ವಪಕ್ಷದಲ್ಲೇ ವಿಜಯೇಂದ್ರ ವಿರುದ್ಧ ಮತ್ತೆ ವಿರೋಧ..!

314

ನ್ಯೂಸ್ ನಾಟೌಟ್: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ (BY Vijayendra) ಮುಂದುವರೆಯಬಾರದು ಎನ್ನುವ ನಿಲುವಿನಲ್ಲಿ ಈಗಲೂ ನಾವಿದ್ದೇವೆ ಎಂದು ಬಿಜೆಪಿ ರೆಬಲ್ ನಾಯಕ ಕುಮಾರ್ ಬಂಗಾರಪ್ಪ ಎಂದು ಹೇಳಿದರು.

ಸಿದ್ದೇಶ್ವರ್‌ ಮನೆಯಲ್ಲಿ ಕೇಂದ್ರ ಸಚಿವ ಸೋಮಣ್ಣ ಜೊತೆ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕುಮಾರ್ ಬಂಗಾರಪ್ಪ, ಸೋಮಣ್ಣ ನಮಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಹಕಾರ ಕೊಡಿ ಅಂತ ಕೇಳಿಲ್ಲ. ದಾವಣಗೆರೆ ವಿಚಾರಕ್ಕೆ ಸಿದ್ದೇಶ್ವರ್‌, ಹರೀಶ್ ಅವರನ್ನು ಸೋಮಣ್ಣ ಭೇಟಿಯಾಗಿದ್ದಾರೆ ಅಷ್ಟೇ ಎಂದು ತಿಳಿಸಿದರು.

ವಿಜಯೇಂದ್ರ ಮುಂದುವರೆಯಬಾರದು ಎನ್ನುವುದು ನಮ್ಮ ನಿಲುವು. ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರ ಬದಲಾವಣೆಯಾಗಬೇಕು. ನಮ್ಮ ಅಭಿಪ್ರಾಯ ಹೇಳಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆ ನೋಡೋಣ. ನಮ್ಮ ಅಭಿಪ್ರಾಯ, ನಮ್ಮ ನಿಲುವನ್ನು ನಾವು ಹೇಳಿದ್ದೇವೆ. ಕರ್ನಾಟಕದ ಕಾರ್ಯಕರ್ತರಿಗೂ ಈ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವ ಭಾವನೆಯಿದೆ. ನಮ್ಮ ಬೇಡಿಕೆಯಿಂದ ನಾವು ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸರ್ಕಾರದ ಅಕ್ರಮಗಳು ಜಾಸ್ತಿಯಾಗಿವೆ. ಇದರ ವಿರುದ್ಧ ಧ್ವನಿ ಎತ್ತುವ ಕೆಲಸ ವಿಜಯೇಂದ್ರ ಮಾಡಿಲ್ಲ. ವಾಲ್ಮೀಕಿ ಹಗರಣವನ್ನು ಹಾಗೆಯೇ ಕೈ ಬಿಟ್ಟರು. ಹನಿಟ್ರ‍್ಯಾಪ್ ವಿಷಯವನ್ನು ಬಿಟ್ಟರು. ಹೊಂದಾಣಿಕೆ ಮಾಡಿಕೊಂಡು ಕೈ ಚೆಲ್ಲಿ ಕೂತರೆ ಹೇಗೆ? ಇವರೆಲ್ಲ ನೇರ ನಡೆಯಿಂದ ರಾಜಕೀಯ ಮಾಡುತ್ತಿಲ್ಲ. ಒಳಒಪ್ಪಂದ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಈಗಿನ ಅಧ್ಯಕ್ಷರು ಇದನ್ನೆಲ್ಲ ಮಾಡ್ತಿದ್ದಾರೆ. ಈ ಕುರಿತು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಂಡಿದ್ದೇವೆ ಎಂದು ಹೆಸರು ಹೇಳದೇ ವಿಜಯೇಂದ್ರ ಒಳಒಪ್ಪಂದ ಮಾಡ್ತಿದ್ದಾರೆ ಎಂದು ಆರೋಪಿಸಿದರು.

3 ಇಂಡಿಗೋ ಅಧಿಕಾರಿಗಳ ವಿರುದ್ಧ ತರಬೇತಿ ಪಡೆಯುತ್ತಿದ್ದ ಪೈಲಟ್ ನಿಂದಲೇ ಅಟ್ರಾಸಿಟಿ ದೂರು ದಾಖಲು..! ಎಸ್‌ ಸಿ/ಎಸ್‌ ಟಿ ದೌರ್ಜನ್ಯ ಕಾಯ್ದೆಯಡಿ ಎಫ್‌ ಐಆರ್ ದಾಖಲು..!

ಖ್ಯಾತ ಸ್ಯಾಂಡಲ್ ವುಡ್ ನಿರ್ದೇಶಕ ನಂದಕಿಶೋರ್ ವಿರುದ್ಧ ಫಿಲ್ಮ್ ಚೇಂಬರ್‌ ಗೆ ದೂರು..? ಕಿಚ್ಚ ಸುದೀಪ್ ಹೆಸರಲ್ಲಿ 22 ಲಕ್ಷ ವಂಚನೆ ಆರೋಪ..!

See also  ಅಡ್ಕಾರು: ನಿಯಂತ್ರಣ ತಪ್ಪಿ ಪಲ್ಟಿಯಾದ ಥಾರ್‌ ಜೀಪ್‌ , ಒಳಗಿದ್ದವರು ಪವಾಡ ಸದೃಶ ಪಾರು..!!
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget