ವೈರಲ್ ನ್ಯೂಸ್ಸಿನಿಮಾ

ವಿಜಯ್​ ದೇವರಕೊಂಡ ಸಿನಿಮಾ ಟ್ರೋಲ್​ ಮಾಡಿದವರ ವಿರುದ್ಧ ಸೈಬರ್​ ದೂರು..! ಇಲ್ಲಿದೆ ಸಂಪೂರ್ಣ ಮಾಹಿತಿ

229

ನ್ಯೂಸ್ ನಾಟೌಟ್: ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳನ್ನು ಒಂದಿಲ್ಲೊಂದು ರೀತಿಯಲ್ಲಿ ಟ್ರೋಲ್​ (Troll) ಮಾಡಲಾಗುತ್ತದೆ. ಇದರಿಂದ ಅವರ ಸಿನಿಮಾಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತ್ತೀಚೆಗೆ ವಿಜಯ್​ ದೇವರಕೊಂಡ ನಟನೆಯ ‘ದಿ ಫ್ಯಾಮಿಲಿ ಸ್ಟಾರ್​’ ಸಿನಿಮಾ ಬಿಡುಗಡೆ ಆಗಿದ್ದು, ಆ ಚಿತ್ರಕ್ಕೂ ಟ್ರೋಲ್​ ಕಾಟ ಎದುರಾಗಿದೆ. ಮೊದಲ ದಿನವೇ ಈ ಸಿನಿಮಾಗೆ ವಿಶ್ರ ಪ್ರತಿಕ್ರಿಯೆ ಸಿಕ್ಕಿತು. ಬಳಿಕ ಟ್ರೋಲ್​ ಹೆಚ್ಚಾಯಿತು.

ಅಂಥ ಟ್ರೋಲ್​ ಮಂದಿಯ ವಿರುದ್ಧ ‘ದಿ ಫ್ಯಾನಿಲಿ ಸ್ಟಾರ್’ ಚಿತ್ರತಂಡ ತಿರುಗಿ ಬಿದ್ದಿದೆ. ಸೈಬರ್​ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿ ಆಗಿದೆ. ವಿಜಯ್​ ದೇವರಕೊಂಡರನ್ನು ಒಂದು ವರ್ಗದ ನೆಟ್ಟಿಗರು ದ್ವೇಷಿಸುತ್ತಾರೆ. ಇದರಿಂದಾಗಿ ಅವರ ಸಿನಿಮಾಗೆ ಪೆಟ್ಟು ಬಿದ್ದಿದೆ. ‘ದಿ ಫ್ಯಾಮಿಲಿ ಸ್ಟಾರ್​’ ಸಿನಿಮಾವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಚಿತ್ರತಂಡ ನಿರ್ಧರಿಸಿದೆ. ವಿಜಯ್​ ದೇವರಕೊಂಡ ಅವರ ಮ್ಯಾನೇಜರ್​ ಹಾಗೂ ಅಭಿಮಾನಿ ಸಂಘದ ಅಧ್ಯಕ್ಷರು ಸೈಬರ್​ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ದೂರಿನ ಜೊತೆಗೆ ಅನೇಕ ಸಾಕ್ಷಿಗಳನ್ನು ಒದಗಿಸಲಾಗಿದೆ. ಟ್ರೋಲ್​ ಮಾಡಿದ ಸೋಶಿಯಲ್​ ಮೀಡಿಯಾ ಖಾತೆಗಳ ಸ್ಕ್ರೀನ್​ ಶಾಟ್​ಗಳನ್ನು ಪೊಲೀಸರಿಗೆ ನೀಡಲಾಗಿದೆ. ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಬಾಕ್ಸ್​ ಆಫೀಸ್​ನಲ್ಲಿ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಿಲ್ಲ. ‘ದಿ ಫ್ಯಾಮಿಲಿ ಸ್ಟಾರ್​’ ಸಿನಿಮಾದಲ್ಲಿ ನಟ ವಿಜಯ್​ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್​ ಬೆಡಗಿ ಮೃಣಾಲ್​ ಠಾಕೂರ್​ ಅಭಿನಯಿಸಿದ್ದಾರೆ. ಈ ಮೊದಲು ತೆಲುಗಿನ ‘ಸೀತಾ ರಾಮಂ’, ‘ಹಾಯ್​​ ನಾನ್ನ’ ಸಿನಿಮಾಗಳಲ್ಲಿ ನಟಿಸಿ ಅವರು ಭರ್ಜರಿ ಗೆಲುವು ಕಂಡಿದ್ದರು. ಆದರೆ 3ನೇ ತೆಲುಗು ಸಿನಿಮಾ ಮೂಲಕ ಅವರು ಸೋಲು ಕಾಣುವಂತಾಗಿದೆ. ಈ ಚಿತ್ರವನ್ನು ದಿಲ್​ ರಾಜು ನಿರ್ಮಾಣ ಮಾಡಿದ್ದಾರೆ. ಪರಶುರಾಮ್​ ಅವರು ನಿರ್ದೇಶನ ಮಾಡಿದ್ದಾರೆ.

See also  ಬೆಂಗಳೂರಿಗೂ ಹಬ್ಬಿದ ಧ್ವಜ ಗಲಾಟೆ..! ಹಸಿರು ಬಾವುಟ ತೆಗೆದು ರಾಷ್ಟ್ರಧ್ವಜ ನೆಟ್ಟ ಪೊಲೀಸರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget