Uncategorized

ಅಪರೂಪದಲ್ಲಿ ಅಪರೂಪ ‘ಬಾಂಬೆ ಬ್ಲಡ್’ ಗ್ರೂಪ್..! 15ರ ಬಾಲಕಿಗೆ ‘ಬಾಂಬೆ ಬ್ಲಡ್’ ದಾನ ಮಾಡಿ ಮಾನವೀಯತೆ ಮೆರೆದ ವಿಜಯಪುರದ ಚಾಲಕ..!

ನ್ಯೂಸ್‌ ನಾಟೌಟ್‌: ಸಾಮಾನ್ಯವಾಗಿ ಮಾನವನಲ್ಲಿ ‘ಎ’, ‘ಬಿ’, ‘ಎಬಿ’, ‘ಒ’ ಪಾಸಿಟಿವ್ ಅಥವಾ ನೆಗೆಟಿವ್ ಮಾದರಿಯ ರಕ್ತದ ಗುಂಪುಗಳನ್ನು ಕೇಳಿದ್ದೀರಿ. ಆದರೆ ವಿಶ್ವದಲ್ಲೇ ಅಪರೂಪವೆನಿಸಿದ ‘ಬಾಂಬೆ’ ರಕ್ತದ ಗುಂಪಿನ ಕುರಿತು ಬಹುತೇಕ ಜನರು ಕೇಳಿರಲಿಕ್ಕಿಲ್ಲ, ವಿಶ್ವದಲ್ಲೇ ಅತಿ ವಿರಳವಾದ ಸರಿಸುಮಾರು 5ರಿಂದ 6 ಲಕ್ಷಕ್ಕೊಬ್ಬರಿಗೆ ಇರುವ ರಕ್ತದ ಮಾದರಿ ಇದಾಗಿದೆ. ಹೀಗೆ ಅಪರೂಪದಲ್ಲಿ ಅಪರೂಪ ಬಾಂಬೆ ಬ್ಲಡ್ ವಿಜಯಪುರದ ಚಾಲಕ ದಾನ ಮಾಡಿದ ಅಪರೂಪದ ಘಟನಯೊಂದು ವರದಿಯಾಗಿದೆ..ಈ ಕುರಿತು ಡೀಟೆಲ್ಸ್‌ ಇಲ್ಲಿದೆ ನೋಡಿ..

ಇದುವರೆಗೂ ನೆಗೆಟಿವ್ ರಕ್ತದ ಮಾದರಿ ಮಾತ್ರ ವಿರಳ ಎಂಬುದು ಸಾಮಾನ್ಯ ಕಲ್ಪನೆಯಾಗಿತ್ತು. ಆದರೆ ಇದೀಗ ‘ಬಾಂಬೆ’ ರಕ್ತದ ಮಾದರಿ ಕೂಡ ಅಪರೂಪದಲ್ಲೇ ಅಪರೂಪ ಎಂದೆನಿಕೊಂಡಿದೆ.ಹತ್ತಿರದ ಸಂಬಂಧದಲ್ಲಿ ವಿವಾಹ ಆಗುವ ದಂಪತಿಗೆ ಜನಿಸುವ ಮಕ್ಕಳಲ್ಲಿ ಇದು ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.ಮುಂಬೈನಲ್ಲಿ ಈ ರಕ್ತದ ಮಾದರಿ ಪತ್ತೆ ಹಚ್ಚಿದ್ದರಿಂದ ಅದಕ್ಕೆ ‘ಬಾಂಬೆ’ ರಕ್ತದ ಮಾದರಿ ಎಂಬ ಹೆಸರು ಪ್ರಚಲಿತದಲ್ಲಿದೆ.

ಆದರೆ ಈ ರಕ್ತದ ಮಾದರಿ ‘ಎ’, ‘ಬಿ’, ‘ಎಬಿ’ ಹಾಗೂ ‘ಒ’ ಪಾಸಿಟಿವ್ ರಕ್ತದ ಮಾದರಿಯಲ್ಲಿ ಇರಲಾರದ ಕೆಲವು ಅಂಶಗಳನ್ನು ಒಳಗೊಂಡಿರುತ್ತದೆ.ಸದ್ಯ ಅಪರೂಪದಲ್ಲಿ ಅಪರೂಪ ಬಾಂಬೆ ಬ್ಲಡ್ ವಿಜಯಪುರದ ಚಾಲಕ ದಾನ ಮಾಡಿದ್ದಾನೆ.ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ಇರುವ ಶಿಕ್ಷಕರೊಬ್ಬರ 15 ವರ್ಷದ ಮಗಳಿಗೆ ಕಾಯಿಲೆಯೊಂದಕ್ಕೆ ಚಿಕಿತ್ಸೆ ನೀಡಲು ರಕ್ತದ ಅವಶ್ಯಕತೆಯಿತ್ತು. ಆದರೆ ಈ ಬಾಲಕಿಯದ್ದು ಅತ್ಯಂತ ಅಪರೂಪದ ರಕ್ತದ ಗುಂಪಾಗಿತ್ತು. ಈ ಬಾಂಬೆ ಬ್ಲಡ್ ಗ್ರೂಪ್ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮದ ಮಹಾಂತೇಶ್ ತುಮ್ಮರಮಟ್ಟಿ ಎಂಬುವವರು ಹೊಂದಿದ್ದರು ಎಂಬುದಾಗಿ ಬಾಗಲಕೋಟೆ ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯ ವೈದ್ಯರಿಗೆ ಈ ವಿಷಯ ತಿಳಿದಿತ್ತು. ಹಾಗೆ ಬಿವಿವಿ ಆಸ್ಪತ್ರೆ ವೈದ್ಯರು ವಾಹನ ಚಾಲಕರಾಗಿ ಕೆಲಸ ಮಾಡುವ ಮಹಾಂತೇಶ್ ಅವರನ್ನ ಸಂಪರ್ಕಿಸಿದರು. ತಕ್ಷಣ ತಡಮಾಡದ ಮಹಾಂತೇಶ್ ಆಸ್ಪತ್ರೆಗೆ ಬಂದು ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Related posts

ಹಣದ ವಿಚಾರದಲ್ಲಿ ಸಹೋದರನ ಅಪಹರಣ,ಕೊಲೆ ಬೆದರಿಕೆ: ೧೦ ಲಕ್ಷ ನೀಡಬೇಕೆಂದು ಬೇಡಿಕೆ,ಓರ್ವ ಆಸ್ಪತ್ರೆಗೆ ದಾಖಲು

ಸರ್ಕಾರಿ ಬಸ್ ಚಾಲಕ ಮತ್ತು ನಿರ್ವಾಹಕನ ಮೇಲೆ ಕುಡಿದ ಮತ್ತಿನಲ್ಲಿ ಹಲ್ಲೆ..! ಪೊಲೀಸ್​ ಕಮಿಷನರ್ ​​ಗೆ ಪತ್ರ ಬರೆಯುತ್ತೇನೆ ಎಂದ ಸಾರಿಗೆ ಸಚಿವ..! ಇಲ್ಲಿದೆ ಸಿಸಿಟಿವಿ ದೃಶ್ಯ

IAS ಅಧಿಕಾರಿ ಪೂಜಾ ವಿರುದ್ಧ ಎಫ್‌.ಐ.ಆರ್‌..! ನಕಲಿ ದಾಖಲೆ ಸೃಷ್ಟಿಸಿ ಹುದ್ದೆಯ ದುರ್ಬಳಕೆ..!