ಕ್ರೀಡೆ/ಸಿನಿಮಾ

Actor Darshan ನಟ ದರ್ಶನ್​ಗೆ ಮಧ್ಯಂತರ ಜಾಮೀನು ಹಿನ್ನಲೆ ,ಪತ್ನಿ ವಿಜಯಲಕ್ಷ್ಮೀಯ ಇನ್​ಸ್ಟಾ ಪೋಸ್ಟ್​ ಭಾರಿ ವೈರಲ್!​ ಪೋಸ್ಟ್ ನಲ್ಲೇನಿದೆ?

179

ನ್ಯೂಸ್‌ ನಾಟೌಟ್‌ : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ( Actor Darshan ) ​ಗೆ ಹೈಕೋರ್ಟ್​ ಇಂದು (ಅ.30) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.ಈ ಬೆನ್ನಲ್ಲೇ ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರ ಇನ್ಸ್ಟಾಗ್ರಾಮ್ ಪೋಸ್ಟ್‌ ಭಾರಿ ವೈರಲ್ ಆಗಿದೆ.

ಹೌದು,ಹಲವು ದಿನಗಳ ಬಳಿಕ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಸ್ಸಾಂನ ಕಾಮಾಕ್ಯದೇವಿ ದೇವಸ್ಥಾನದ ಫೋಟೋವನ್ನು ಶೇರ್​ ಮಾಡಿಕೊಂಡಿರುವ ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ (Thankful) ಸಲ್ಲಿಸಿದ್ದಾರೆ.ಬಳಿಕ ಕೃತಜ್ಞ (Greatful) ಹಾಗೂ ಆಶೀರ್ವಾದ (Blessed) ಎಂದು ಬರೆದುಕೊಂಡಿದ್ದು, ಅಭಿಮಾನಿಗಳು ಈ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ದರ್ಶನ್​ ಬಿಡುಗಡೆಗಾಗಿ ಪತ್ನಿ ವಿಜಯಲಕ್ಷ್ಮೀ ಅವರು ಹಲವು ದೇಗುಲಗಳಿಗೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದರು. ಕೆಲ ತಿಂಗಳ ಹಿಂದೆ ಅಸ್ಸಾಂ ಗುವಾಹಟಿಯಲ್ಲಿರುವ ಕಾಮಾಕ್ಯದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಂದಿದ್ದರು. ದರ್ಶನ್​ಗಿರುವ ಅನಾರೋಗ್ಯದ ಬಗ್ಗೆ ತಿಳಿದಾಗ ಜಾಮೀನು ಪಡೆಯಲು ತುಂಬಾ ಕಷ್ಟಪಟ್ಟಿದ್ದರು. ಕೊನೆಗೂ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ದೇವರಿಗೆ ಧನ್ಯವಾದ ಹೇಳಿದ್ದಾರೆ.

ಅಂದಹಾಗೆ ದರ್ಶನ್​, ನಾನು ತೀವ್ರ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಈ ಹಿನ್ನೆಲೆ ಮಧ್ಯಂತರ ಜಾಮೀನು ನೀಡಿ ಎಂದು ಅರ್ಜಿ ಸಲ್ಲಿಸಿದ್ದರು. ನಿನ್ನೆ (ಅ.29) ನಟ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್​ ಅವರು ಮಂಡಿಸಿದ್ದರು. ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿಯವರ ಏಕಸದಸ್ಯ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ಬೆಳಗ್ಗೆ 10.30ರ ಸುಮಾರಿಗೆ ತೀರ್ಪು ಪ್ರಕಟಿಸಿದ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ದರ್ಶನ್​ ಅಭಿಮಾನಿಗಳಿಗೆ ಬಹಳ ಖುಷಿಯಾಗಿದೆ. ಆದರೆ, ಬೇಸರ ಸಂಗತಿ ಏನೆಂದರೆ, ಇದು ಮಧ್ಯಂತರ ಜಾಮೀನು ಆಗಿದ್ದು, ಕೇವಲ 6 ವಾರಗಳು ಮಾತ್ರ ದರ್ಶನ್​ ಜೈಲಿನಿಂದ ಹೊರಗಡೆ ಇರಲಿದ್ದಾರೆ. ಸಮಯ ಮುಗಿದ ಬಳಿಕ ಮತ್ತೆ ಜೈಲು ಸೇರಬಹುದು ಅಥವಾ ಜಾಮೀನು ಅವಧಿ ವಿಸ್ತರಣೆ ಕೂಡ ಆಗಬಹುದಾ ಅನ್ನೋದನ್ನ ಕಾದು ನೋಡಬೇಕಷ್ಟೇ..

ಈ ಆರು ವಾರಗಳಲ್ಲಿ ನಟ ದರ್ಶನ್​ ತಮಗಿರುವ ಆರೋಗ್ಯ ಸಮಸ್ಯೆಗೆ ವೈದ್ಯಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ. ಅಲ್ಲದೆ, ಒಂದು ವಾರದಲ್ಲಿ ದರ್ಶನ್​ ಚಿಕಿತ್ಸೆಯ ವಿವರವನ್ನು ಸಹ ಕೋರ್ಟ್​ಗೆ​ ಸಲ್ಲಿಸಬೇಕಿದೆ. ಇನ್ನು ದರ್ಶನ್​ ಪಾಸ್​ಪೋರ್ಟ್​ ಅನ್ನು ಕೂಡ ಕೋರ್ಟ್​ ವಶಕ್ಕೆ ನೀಡಬೇಕಿದೆ. ಪಾಸ್​ಪೋರ್ಟ್​ ವಶಕ್ಕೆ ನೀಡಲು ಸರ್ಕಾರ ಪರ ವಕೀಲ ಪ್ರಸನ್ನ ಕುಮಾರ್​ ಆಗ್ರಹಿಸಿದ್ದರು. ಇನ್ನು ದರ್ಶನ್​ ಬಯಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.

See also  ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ,'ಚಾಂಪ್' ನನ್ನು ಕಳೆದುಕೊಂಡು ಚುನಾವಣಾ ಪ್ರಚಾರದಿಂದ ದೂರ ಉಳಿದ ನಟಿ ರಮ್ಯಾ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget