ಕ್ರೈಂಬೆಂಗಳೂರುರಾಜ್ಯವೈರಲ್ ನ್ಯೂಸ್ಸಿನಿಮಾ

ಮುನಿಸು ಮರೆತು ದರ್ಶನ್ ಪರ ಕಾನೂನು ಹೋರಾಟಕ್ಕೆ ಮುಂದಾದ ಪತ್ನಿ ವಿಜಯಲಕ್ಷ್ಮಿ..! ಇಬ್ಬರು ಲಾಯರ್ ಗಳನ್ನು ನೇಮಿಸಿ ವಿಜಯಲಕ್ಷ್ಮಿ ಅವರ ಮೂಲಕ ಹೇಳಿಸಿದ್ದೇನು..?

266

ನ್ಯೂಸ್ ನಾಟೌಟ್: ದಿನದಿಂದ ದಿನಕ್ಕೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರೋಚಕ ಸಂಗತಿಗಳು ಹೊರಬೀಳುತ್ತಿವೆ, ಸಾಕ್ಷ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮಧ್ಯೆ ಮುನಿಸು ಮರೆತು ದರ್ಶನ್ ನನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಪೊಲೀಸ್ ಠಾಣೆಗೆ ತೆರಳಿದ್ದಾರೆ ಮತ್ತು ದರ್ಶನ್ ನನ್ನು ಬಿಡಿಸುವ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿಯನ್ನು ನಟ ದರ್ಶನ್ (Darshan) ಮತ್ತು ಗ್ಯಾಂಗ್ ಪತ್ತೆ ಮಾಡಿದ್ದು ಹೇಗೆ ಎಂಬುದು ಪೊಲೀಸರ ತನಿಖೆಯಲ್ಲಿ ಮಂಗಳವಾರ(ಜೂ.೧೮) ಬಯಲಾಗಿದೆ. ರೇಣುಕಾಸ್ವಾಮಿ ಯಾವ ಹೆಸರಿನಲ್ಲಿ ಚಾಟ್ ಮಾಡಿದ್ದ? ಆತನ ವಿಳಾಸ, ಫೋನ್ ನಂಬರ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಪವಿತ್ರಗೌಡ ಜೊತೆಯಲ್ಲಿ ರೇಣುಕಾಸ್ವಾಮಿ ಮಾಡಿದ್ದ ಚಾಟ್ ಲಿಸ್ಟ್ ಈಗ ಪೊಲೀಸರಿಗೆ 11 ದಿನಗಳ ಬಳಿಕ ಸಿಕ್ಕಿದೆ.

ಈ ನಡುವೆ ವಿಜಯಲಕ್ಷ್ಮಿ ಎಲ್ಲವನ್ನೂ ಸಹಿಸಿಕೊಂಡು, ದರ್ಶನ್ ಗೆ ಬೇಲ್ ಪಡೆಯುವ ಪ್ರಯತ್ನದಲ್ಲಿದ್ದಾರೆ. ಅನಿಲ್ ಬಾಬು ಮತ್ತು ರಂಗನಾಥ್ ರೆಡ್ಡಿ ಎಂಬ ಇಬ್ಬರು ಲಾಯರ್ ಗಳನ್ನು ದರ್ಶನ್ ಪರ ನೇಮಕ ಮಾಡಿದ್ದಾರೆ. ಪವಿತ್ರ ಗೌಡನ ಬಗ್ಗೆ ಅಸಮಾಧಾನಗಳಿದ್ದರೂ ದರ್ಶನ್ ಪರ ಯಾರೂ ನಿಲ್ಲದ ಸಮಯದಲ್ಲಿ ಪತ್ನಿ ವಿಜಯಲಕ್ಷ್ಮಿ ನಿಂತಿದ್ದಾರೆ. ಆದರೆ, ಯಾರೂ ಪವಿತ್ರ ಗೌಡನನ್ನು ದರ್ಶನ್ ಪತ್ನಿ ಎಂದು ಉಲ್ಲೇಖಿಸದಂತೆ ವಿಜಯಲಕ್ಷ್ಮಿ ಲಾಯರ್ ಮೂಲಕ ಹೇಳಿಸಿದ್ದಾರೆ ಎನ್ನಲಾಗಿದೆ.

Click 👇

https://newsnotout.com/2024/06/darshan-and-gang-internal-matter-revealed-to-police
https://newsnotout.com/2024/06/kannada-news-student-food-quality
See also  ಇಂದು(ಮೇ.4) ನೀಟ್ ಪರೀಕ್ಷೆಯಲ್ಲೂ ಜನಿವಾರ ತೆಗೆಸಿದ ಅಧಿಕಾರಿಗಳು..! ಪರೀಕ್ಷಾ ಕೇಂದ್ರದ ‌ಮುಂದೆ ಪ್ರತಿಭಟನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget