ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್

ನನ್ನ ಮಗಳ ವಯಸ್ಸಿನವಳ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದ ಖ್ಯಾತ ತಮಿಳು ನಟ! ಯಾರು ಆ ಕರುನಾಡು ಮೂಲದ ನಟಿ? ಈ ಬಗ್ಗೆ ನಟ ಹೇಳಿದ್ದೇನು?

177

ನ್ಯೂಸ್ ನಾಟೌಟ್ : ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾದಲ್ಲಿನ ನಟನೆಗೆ ಭಾರೀ ಮೆಚ್ಚುಗೆ ಪಡೆದಿದ್ದರು, ಈಗ ತಮ್ಮ ಹೊಸ ಸಿನಿಮಾವೊಂದರ ವಿಚಾರವಾಗಿ ಮಾಡಿರುವ ನಿರ್ಧಾರಕ್ಕೆ ಸುದ್ದಿಯಾಗುತ್ತಿದ್ದಾರೆ. ನನ್ನ ಸಿನಿಮಾಕ್ಕೆ ಆ ನಟಿ ಬೇಡ ಎಂದ ನಟ ಕೊಟ್ಟ ಕಾರಣ ಹಲವು ಚರ್ಚೆಗೆ ಕಾರಣವಾಗಿದೆ.

ನಟ ವಿಜಯ್‌ ಸೇತುಪತಿ, ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ ಜತೆಗೆ ರೊಮ್ಯಾನ್ಸ್‌ ಮಾಡುವುದು ಅಸಾಧ್ಯ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ್ದು, ಇತ್ತೀಚೆಗೆ ಹೊಸಾ ಸಿನಿಮಾವೊಂದಕ್ಕೆ ವಿಜಯ್‌ ಸೇತುಪತಿ ಸಿನಿಮಾಕ್ಕೆ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು ಕೃತಿ.

ಆ ಖುಷಿಯಲ್ಲಿಯೇ ಸಂಭ್ರಮಿಸಿದ್ದರು. ಆದರೆ, ಇದೀಗ ಅದೇ ಕೃತಿ ಜತೆ ನಾನು ನಟಿಸಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ವಿಜಯ್ ಸೇತುಪತಿ.‌ ಕಾರಣ ಇಷ್ಟೇ, ಕೃತಿಯ ಮೊದಲ ಸಿನಿಮಾ ಉಪ್ಪೇನದಲ್ಲಿ ಅಪ್ಪ ಮಗಳಾಗಿ ವಿಜಯ್‌ ಸೇತುಪತಿ ಮತ್ತು ಕೃತಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾದ ಪರಿಣಾಮವೇ ಇದೀಗ ವಿಜಯ್‌ ಆಕೆ ಜತೆ ರೊಮ್ಯಾನ್ಸ್‌ ಮಾಡಲಾರೆ ಎಂದಿದ್ದಾರೆ ಎನ್ನಲಾಗಿದೆ.

ಉಪ್ಪೇನ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ನನ್ನನ್ನು ನಿನ್ನ ತಂದೆ ಎಂದು ಭಾವಿಸಿಕೊಂಡು ನಟಿಸು ಎಂದು ಕೃತಿಗೆ ವಿಜಯ್‌ ಸಲಹೆ ನೀಡಿದ್ದರು. ಇದೀಗ ಅದೇ ನಟಿ ಜತೆಗೆ ನಾನು ಹೇಗೆ ರೊಮ್ಯಾನ್ಸ್‌ ಮಾಡಲಿ ಎಂದು ಕೃತಿ ಜತೆ ನಟಿಸಲಾರೆ ಎಂದು ಹೇಳಿಕೊಂಡಿದ್ದಾರೆ. ನಟನ ಈ ನಿರ್ಧಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

“ನಾನು ತೆಲುಗಿನ ಉಪ್ಪೇನ ಸಿನಿಮಾದಲ್ಲಿ ಕೃತಿಯ ತಂದೆಯಾಗಿ ನಟಿಸಿದ್ದೇನೆ. ಅದಾದ ಬಳಿಕ ನಾನು ತಮಿಳು ಸಿನಿಮಾವೊಂದನ್ನು ಒಪ್ಪಿಕೊಂಡೆ. ಆ ಚಿತ್ರಕ್ಕೆ ಕೃತಿ ಶೆಟ್ಟಿಯೇ ಸೂಕ್ತ ಎಂದು ನಾಯಕಿಯಾಗಿ ಚಿತ್ರತಂಡ ಆಯ್ಕೆ ಮಾಡಿತ್ತು. ನಾಯಕಿಯ ಫೋಟೋ ನೋಡುತ್ತಿದ್ದಂತೆ, ನಾನು ತೆಲುಗು ಚಿತ್ರದಲ್ಲಿ ಕೃತಿಯ ತಂದೆಯ ಪಾತ್ರ ಮಾಡಿದ್ದೇನೆ. ಇದೀಗ ಈಕೆ ಜತೆಗೆ ನಾಯಕಿಯಾಗಿ ನಾನು ನಟಿಸಲಾರೆ. ರೊಮ್ಯಾನ್ಸ್‌ ಮಾಡಲಾರೆ. ಹಾಗಾಗಿ ಬೇರೆ ಹೀರೋಯಿನ್‌ ನೋಡಿ”

“ಉಪ್ಪೇನ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಕೊಂಚ ನರ್ವಸ್‌ ಆಗಿದ್ದಳು. ಆಗ ನಾನೇ ಆಕೆ ಬಳಿ ಬಂದು ನನಗೆ ನಿನ್ನ ವಯಸ್ಸಿನ ಮಗನಿದ್ದಾನೆ. ನೀನು ನನ್ನ ಮಗಳಿದ್ದಂತೆ. ಈ ದೃಶ್ಯವನ್ನು ಹೆದರದೇ ಮಾಡು. ಅಂದಿನಿಂದ ಅವಳು ನನಗೆ ಮಗಳಿದ್ದಂತೆ. ಅವಳು ನನ್ನ ಹೀರೋಯಿನ್‌ ಎಂದು ನಾನು ಊಹಿಸಿಕೊಳ್ಳುವುದಿಲ್ಲ” ಎಂದು ಸೇತುಪತಿ ಹೇಳಿಕೊಂಡಿದ್ದಾರೆ.

See also  ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತದ ಮನೆಯಾಗಿದ್ದ ಸೇತುವೆಗೆ ಮುಕ್ತಿ..
  Ad Widget   Ad Widget   Ad Widget   Ad Widget   Ad Widget   Ad Widget   Ad Widget