ಕ್ರೀಡೆ/ಸಿನಿಮಾವೈರಲ್ ನ್ಯೂಸ್

ಇನ್ಮುಂದೆ ಸಿನಿಮಾದಲ್ಲಿ ನಟಿಸಲಿದ್ದಾರಾ ಎಂ ಎಸ್ ಧೋನಿ..? ಖ್ಯಾತ ನಟ ವಿಜಯ್ ಜೊತೆ ಪರದೆಯಲ್ಲಿ ಮಿಂಚಲಿರುವ ಆ ಸಿನಿಮಾ ಯಾವುದು? ಈ ಬಗ್ಗೆ ಎಮ್ ಎಸ್ ಧೋನಿ ಪತ್ನಿ ಹೇಳಿದ್ದೇನು?

ನ್ಯೂಸ್ ನಾಟೌಟ್: ಕ್ರಿಕೆಟರ್‌ಗಳು ಜಾಹೀರಾತು ಮೂಲಕ ಆಗಾಗ ಕಾಣಿಸಿಕೊಳ್ಳುತ್ತಾರೆ ಜೊತೆಗೆ ಸಿನಿಮಾ ನಟ-ನಟಿಯರೂ ಐಪಿಎಲ್ ಸಂದರ್ಭಗಳಲ್ಲಿ ಮೈದಾನದಲ್ಲಿ ಕುಣಿದು ಹುರಿದುಂಬಿಸುವುದನ್ನು ಕಾಣುತ್ತೇವೆ.

ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಎಂ ಎಸ್‌ ಧೋನಿ ತಮಿಳು ಸಿನಿಮಾವೊದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಅದು ಖ್ಯಾತ ನಟ ದಳಪತಿ ವಿಜಯ್ ಯ ಮುಂದಿನ ಸಿನಿಮಾದಲ್ಲಿ ಎಂಬುದು ಎಲ್ಲೆಡೆ ಸುದ್ದಿಯಾಗಿದೆ.

ಕೆಲವು ವರದಿಗಳ ಪ್ರಕಾರ, ದಳಪತಿ ವಿಜಯ್ ಯ ಬಹು ನಿರೀಕ್ಷಿತ ‘ದಳಪತಿ 68’ ಮೂಲಕ ಎಂಎಸ್ ಧೋನಿ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಮಾಹಿತಿ ದೊರೆತಿದೆ ಮತ್ತು ಈ ಕುರಿತು ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ವೆಂಕಟ್ ಪ್ರಭು ನಿರ್ದೇಶನದ ಈ ಸಿನಿಮಾ ಮೂಲಕ ಕೂಲ್ ಕ್ಯಾಪ್ಟರ್ ಖ್ಯಾತಿಯ ಧೋನಿ ಚಿತ್ರರಂಗಕ್ಕೆ ಪಾದಾಪರ್ಪಣೆ ಮಾಡಲಿದ್ದಾರೆ ಎಂಬುದು ಸಹಜವಾಗಿ ಧೋನಿ ಅವರ ಅಭಿಮಾನಿಗಳಲ್ಲಿ ಇದು ಕುತೂಹಲವನ್ನು ಹೆಚ್ಚಿಸಿದೆ.

ಧೋನಿ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿಯನ್ನು ಅವರ ಪತ್ನಿ ಸಾಕ್ಷಿಕೂಡ ಒಪ್ಪಿಕೊಂಡಿದ್ದು, ಒಳ್ಳೆಯ ಕಥೆ ಮತ್ತು ಸಂದೇಶವುಳ್ಳ ಪಾತ್ರ ಬಂದರೆ ಎಂಎಸ್‌ ಧೋನಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸುವುದಾಗಿ ಸಾಕ್ಷಿ ಕಳೆದ ತಿಂಗಳು ಚೆನ್ನೈನಲ್ಲಿ ತಿಳಿಸಿದ್ದರು. . ಅತಿ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ಸಿನಿಮಾ ಮೂಲಗಳ ತಿಳಿಸಿವೆ.

ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಈಗಾಗಲೇ ಧೋನಿ ಎಂಟರ್‌ಟೈನ್ಮೆಂಟ್ ಪ್ರೈವೇಟ್ ಲಿಮಿಟೆಡ್ ಎಂಬ ಸಿನಿಮಾ ನಿರ್ಮಾಣ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಈ ಸಂಸ್ಥೆ ಇತ್ತೀಚೆಗೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂಬ ತಮಿಳು ಸಿನಿಮಾದೊಂದಿಗೆ ಸಿನಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದೆ.
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು 2020ರ ಆಗಸ್ಟ್ 15 ರಂದು ಅಂದರೆ 3 ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನದಂದೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ನಂತರ ಇಂಡಿಯನ್ ಪ್ರೀಮಿಯರ್ ಲೀಗ್‌-ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಆಟವನ್ನು ಮುಂದುವರಿಸಿದ್ದರು.

Related posts

ಬರ್ತ್‌ಡೇಗೆ ನನ್ನ ಕಟೌಟ್‌, ಬ್ಯಾನರ್‌ ಹಾಕಬೇಡಿ..!,ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್‌ ಈ ರೀತಿ ಹೇಳಿದ್ಯಾಕೆ?

ಈ ಖ್ಯಾತ ನಟ ನಿಜ ಜೀವನದಲ್ಲೂ ಸೂಪರ್ ಸ್ಟಾರ್..!

ಶಾಲಾ ಕೊಠಡಿಯೊಳಗೆ ಹೆಡ್‌ ಮಾಸ್ಟರ್‌ ಮತ್ತು ಶಿಕ್ಷಕಿಯ ರಾಸಲೀಲೆ..! ಖಾಸಗಿ ವಿಡಿಯೋ ಎಲ್ಲೆಡೆ ವೈರಲ್..!